ರೋಣ: ಕಳೆದ ಎರ್ಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆ ಹಾಗೂ ಮರಗಳು ಧರೆಗುರುಳುತ್ತಿವೆ. ಇದರಿಂದ ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ವಿಪರೀತ ಮಳೆಗೆ ಮನೆ ಬಿದ್ದ ಪರಿಣಾಮ ಪಕ್ಕದಲ್ಲಿದ್ದ ವಿದ್ಯುತ್ ಕಂಬವು ಮುರಿದು ಬಿದ್ದಿದೆ. ಅದೃಷ್ಟವಶಾತ: ಯಾವುದೇ ಅವಘಡ ಸಂಭವಿಸಿಲ್ಲ. ೀಗಾಗಲೇ ಹಲವು ದಿನಗಳಿಂದ ಇಲ್ಲಿ ಮನೆಗಳು ಹಾಗೂ ಮರಗಳು ಧರೆಗುರುಳುತ್ತಿವೆ. ಇದರಿಂದ ಗ್ರಾಮಸ್ಥರ ಜನಜೀವನ ಅಸ್ತವ್ಯಸ್ಥವಾಗಿದೆ.
ಅತಿವೃಷ್ಟಿಯಿಂದ ಗ್ರಾಮಸ್ಥರ ಸ್ಥಿತಿ ಗಂಭೀರವಾಗಿದ್ದು, ಹೇಗೋ ಕಷ್ಟಪಟ್ ಮನೆ ಕಟ್ಟಿಕೊಂಡಿದ್ದ ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಆದ್ರೆ ಇಷ್ಟೆಲ್ಲ ಸಂಭವಿಸುತ್ತಿದ್ರು ಯಾವಬ್ಬ ಅಧಿಕಾರಿಯೂ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಮನೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು ಇದರಿಂದ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ. ಇನ್ನು ಮತ್ತೊಂದೆಡೆ ದೇವಪ್ಪ ಬ್ಯಾಳಿ ಅವರ ಮನೆಯೂ ಮಳೆಯಿಂದ ಬಿದ್ದಿದೆ. ಗ್ರಾಮದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಮನೆಗಳು ಬಿದ್ದಿರುವ ಅಂದಾಜಿದೆ.
ಯಾವುದೇ ಅನಾಹುತ ಆಗಲಿಲ್ಲ ಎನ್ನುವುದೇ ನಮಗೆ ಸಮಾಧಾನ. ಹೀಗಾಗಿ ಇನ್ನಾದ್ರು ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಗೋಳು ಕೇಳಬೇಕು ಅಂತಾರೆ ಇಲ್ಲಿನ ಸಂತ್ರಸ್ತ ಕುಟುಂಬಗಳು.
ಈ ಬಗ್ಗೆ ಪ್ರತಿಕ್ರಿಯಿಸಿದ ರೋಣ ತಹಶೀಲ್ದಾರ್ ಜಿ.ಬಿ.ಜಕ್ಕನಗೌಡ್ರ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿದ್ದ ಮನೆಗಳ ಕುರಿತು ಸಮೀಕ್ಷೆ ಸೂಚಿಸಲಾಗಿದೆ. ಆದರೆ ಗ್ರಾಮ ಲೆಕ್ಕಾಧಿಕಾರಿಗಳ ವರದಿಯಂತು 10 ಕ್ಕೂ ಹೆಚ್ಚು ಮನೆಗಳ ಬಿದ್ದಿರುವ ಬಗ್ಗೆ ಮಾಹಿತಿ ಬಂದಿಲ್ಲ. ಎರಡು ದಿನದೊಳಗಾಗಿ ಪುನಃ ಸಮೀಕ್ಷೆ ಮಾಡಿಸಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.