ಕತ್ತಲಲ್ಲಿ ಕಲೆಗಾರನ ಬದುಕು: ದಣಿವರಿಯದ ಶಿಲ್ಪಕಲಾಪ್ರೇಮಿ ಮಾನಪ್ಪ ಸುತಾರ

ಕಲ್ಲಿಗೆ ಕಲೆಯ ಸ್ಪರ್ಷ ಸಿಕ್ಕಾಗ ಮಾತ್ರ ಭಾವನೆಗಳೇ ಬದಲಾಗುವ ಶಕ್ತಿ ಅದಕ್ಕೆ ಸಿಗುತ್ತದೆ. ಕಲ್ಲು, ಕಲೆಗಾರನ ತೆಕ್ಕೆಯಲ್ಲಿ ಬಿದ್ದಾಗಲಷ್ಟೇ ಅದಕ್ಕೆ ಹೊಸ ಅವತಾರವೇ ಸಿಗಲಿದೆ. ಇಂತಹ ಅವತಾರ ಪಡೆದ ಕಲ್ಲು ದೇವರಾಗಿ, ಜನರಿಂದ ಪೂಜ್ಯನೀಯ ವಸ್ತುವಾಗುತ್ತದೆ. ಆದರೆ, ಕಲ್ಲಿಗೆ ಮೂರ್ತಿರೂಪ ಕೊಟ್ಟು, ದೇವರನ್ನಾಗಿಸಿ ಅಥವಾ ಇತಿಹಾಸದ ಸಂಸ್ಕೃತಿಯನ್ನೇ ರೂಪಿಸುವ ಕಲೆಗಾರರ ಬದುಕು ಮಾತ್ರ ಇನ್ನೂ ಕತ್ತಲಲ್ಲಿಯೇ ಉಳಿದಿದೆ.