ಗದಗ: ಈಗಾಗಲೇ ಜೂನ್ 1 ರವರೆಗೆ ಗದಗ ಜಿಲ್ಲೆಯನ್ನು ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆ ಎಸ್ಪಿ ಯತೀಶ್ ಎನ್ ಬೆಳ್ಳಂಬೆಳಿಗ್ಗೆ ಫಿಲ್ಡಿಗಿಳಿದು ಅನವಶ್ಯಕ ಓಡಾಡುವವರಿಗೆ ಖಡಕ್ ವಾರ್ನಿಂಗ್ ಮಾಡಿದರು. ಗದಗ- ಬೆಟಗೇರಿ ಅವಳಿ ನಗರವನ್ನು ರೌಂಡ್ ಹಾಕಿದರು.
ಅಕ್ರಮ ಅಕ್ಕಿ ಸಂಗ್ರಹ ಮನೆಯ ಮೇಲೆ ದಾಳಿ : ಗದಗ ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ದಂಧೆಗೆ ಕಡಿವಾಣ ಯಾವಾಗ?
ಅಕ್ರಮ ಅಕ್ಕಿ ದಾಸ್ತಾನು ಮಾಡಿದ ಮನೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಗರದ ಟ್ಯಾಗೋರ್ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ಮನೆಯೊಂದರಲ್ಲಿ 50 ಕೆಜಿಯ ಅಂದಾಜು ನೂರು ಪ್ಯಾಕೇಟ್ ಅನ್ನ ಭಾಗ್ಯ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.