ಗದಗ: ಅಕ್ರಮ ಅಕ್ಕಿ ದಾಸ್ತಾನು ಮಾಡಿದ ಮನೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಗರದ ಟ್ಯಾಗೋರ್ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ಮನೆಯೊಂದರಲ್ಲಿ 50 ಕೆಜಿಯ ಅಂದಾಜು ನೂರು ಪ್ಯಾಕೇಟ್ ಅನ್ನ ಭಾಗ್ಯ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.

ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಿದ ಗೋಧಿ, ತೊಗರಿ ಬೆಳೆ, ಹೆಸರು ಕೂಡ ಈ ದಾಳಿ ವೇಳೆ ಕಂಡು ಬಂದಿದ್ದು, ಅಂಗನವಾಡಿ ಮಕ್ಕಳಿಗೆ ಹಾಗು ಬಾಣಂತಿಯರಿಗೆ ವಿತರಿಸಬೇಕಿದ್ದ ಆಹಾರ ಪದಾರ್ಥಗಳನ್ನು ಕೂಡ ಕಳ್ಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಪೋಲಿಸರು, ಆಹಾರ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಎಷ್ಟೋ ಜನರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೆ ಇಂಥ ಕೆಲ ದಂಧೆಕೋರರಿಂದ ಬಡವರಿಗೆ ನೀಡಿದ ಅಕ್ಕಿ ಕಳ್ಳರ ಬೊಕ್ಕಸ ತುಂಬಿಸುತ್ತಿದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಪಂಗನಾಮ ಹಾಕುವ ಪ್ರಯತ್ನ ಇದಾಗಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

ಈ ವೇಳೆ ವಿರೇಶ್ ಮಾನ್ವಿ ಮಾತನಾಡಿ, ನಗರದ ಕೆಸಿ ರಾಣಿ ರಸ್ತೆ ಬಳಿಯ ಟ್ಯಾಗೋರ್ ರೋಡ್ ನಲ್ಲಿರುವ ಮನೆಯಲ್ಲಿ ನಿತ್ಯ ಅಟೋ ರಿಕ್ಷಾ ಹಾಗು ಇನ್ನಿತರೆ ವಾಹನದ ಮೂಲಕ ಬಂದು ಅಕ್ಕಿ ಮಾರಾಟ ಮಾಡಿ ಹೋಗುತ್ತಿದ್ದರು. ಹೀಗೆ ಪಡಿತರ ಅಕ್ಕಿಯನ್ನು ಸಂಗ್ರಹಿಸುವ ಮೂಲಕ ನಗರದಲ್ಲಿ ಕಳ್ಳದಂಧೆ ನಡೆದಿದೆ. ಇದನ್ನು ಗಮನಿಸಿ ಪೊಲೀಸ್ ಹಾಗು ಆಹಾರ ಇಲಾಖೆ ಅಧಿಕಾರಿಗಳಿಗೆ ನಾನು ಮಾಹಿತಿ ನೀಡಿದೆ. ಅಷ್ಟರಲ್ಲಾಗಲೆ ಮನೆಯಲ್ಲಿ ಅಕ್ಕಿ ಖರೀದಿಸುತ್ತಿದ್ದವರು ತಪ್ಪಿಸಿಕೊಂಡರು. 50 ಕೆಜಿ ಪ್ಯಾಕೇಟ್ ಮಾಡಿದ್ದು, ಅದರಲ್ಲಿ ಅಂಗನವಾಡಿ ಕೇಂದ್ರದಿಂದ ವಿತರಿಸುವ ಗೋದಿ, ತೊಗರಿಬೇಳೆ, ಹೆಸರು ಬೇಳೆ ಇದ್ದವು. ಹಾಗು ಸರ್ಕಾರಿ ಮುದ್ರಿತ ಚೀಲಗಳು ಕೂಡ ಇದರಲ್ಲಿ ಲಭ್ಯವಾಗಿವೆ.

ಗದಗ ನಗರದಲ್ಲಿ ಹಲವು ತಿಂಗಳಿಂದ ಅಕ್ರಮ ಅಕ್ಕಿ ಸಾಗಟ ವ್ಯಾಪಕವಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಪ್ರಭಾವಿಗಳು ಈ ಅಕ್ರಮ ದಂಧೆಗೆ ಸಾಥ್ ನೀಡುತ್ತಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಗದಗ ನಗರದ ಈ ಅಕ್ಕಿ ಜಾಲ ಜಿಲ್ಲೆಯಾದ್ಯಂತ ವ್ಯಾಪಕವಾಗಿದೆ ಎಂದು ಕೂಡ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಇನ್ನು ನಾವು ಸಾಮಾನ್ಯವಾಗಿ 25 ಕೆಜಿ ಪ್ಯಾಕೇಟ್ ನೋಡಿದ್ದು, ಆದರೆ ಇಲ್ಲಿ 50 ಕೆಜಿಯ ಪ್ಯಾಕೇಟ್ ಗಳು ನಕಲಿ ಬ್ರ್ಯಾಂಡ್ ತಯಾರಿಸಿಕೊಂಡು ಕಳ್ಳದಂಧೆ ನಡೆಸಿದ್ದಾರೆ ಎನ್ನಲಾಗಿದೆ. ಬಡವರಿಗಾಗಿ ಸರ್ಕಾರ ಕೊಡುವ ಪಡಿತರ ಅಕ್ಕಿಯನ್ನು ಕಳ್ಳದಂಧೆಯಿಂದ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ಮೋಸ ಮಾಡಲಾಗುತ್ತಿದೆ. ಈ ಮೂಲಕ ಸರ್ಕಾರಕ್ಕೆ ವಂಚಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಾಗಲೇ ಆಹಾರ ಇಲಾಖೆ ಅಧಿಕಾರಿಗಳ ಪ್ರಕಾರ ನಗರದಲ್ಲಿ ಇದು 10ನೇ ಪ್ರಕರಣ. ಇಷ್ಟಾದ್ದಾಗ್ಯೂ ಕೂಡ ಅಕ್ರಮ ದಂಧೆಗೆ ಕಡಿವಾಣ ಬಿದ್ದಿಲ್ಲ. ರಾಜಾರೋಷವಾಗಿಯೇ ಅಕ್ರಮ ದಂಧೆ ನಡೆದಿದೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂದು  ಆಗ್ರಹಿಸಿದರು.

ಅಕ್ರಮ ಅಕ್ಕಿ ದಾಸ್ತಾನು ಮಾಡಿದ ಮನೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು

ಈ ಕುರಿತು ಪ್ರತಿಕ್ರಿಯಿಸಿದ ಗದಗ ಶಹರ ಆಹಾರ ನಿರೀಕ್ಷಕಿ ಮಂಜುಳಾ, ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿ, ಟ್ಯಾಗೋರ್ ರೋಡ್ ನಲ್ಲಿರುವ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಆಹಾರ ಪದಾರ್ಥಗಳನ್ನು ಪರಿಶೀಲಿಸಿದ್ದೇವೆ. ಇದರಲ್ಲಿ ಅನ್ನಭಾಗ್ಯ ಅಕ್ಕಿ ಹಾಗು ಅಂಗನವಾಡಿಯಿಂದ ವಿತರಿಸುವ ಆಹಾರ ಪದಾರ್ಥಗಳು ಕಂಡು ಬಂದಿವೆ. ಅಂದಾಜು 100 ಚೀಲಗಳಷ್ಟು ಪ್ಯಾಕೇಟ್ ವಶಪಡಿಸಿಕೊಳ್ಳಲಾಗಿದೆ. ಈ ಅಕ್ರಮವೆಸಗಿದವರು ಯಾರು ಎಂಬುದು ಗೊತ್ತಾಗಿಲ್ಲ. ತನಿಖೆ ನಂತರ ಗೊತ್ತಾಗಬೇಕಿದೆ. ಈಗಾಗಲೇ ಗದಗ ಶಹರದಲ್ಲಿ ಈ ವಿಚಾರವಾಗಿ 9 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣ ಸೇರಿ ಒಟ್ಟು 10 ಪ್ರಕರಣಗಳಾದಂತಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಕೈಗೊಳ್ಳಲಿದೆ ಎಂದರು.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ: ಕುರಿ, ಮೇಕೆ ಕಳ್ಳರು ಅಂದರ್..!

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೇಕೆ ಹಾಗೂ ಕುರಿ ಕಳ್ಳತನ ಪ್ರಕರಣಗಳು ಕಂಡು ಬಂದಿದ್ದವು. ಘಟನೆ ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿತ್ತು. ಆದರೆ ಕೊನೆಗೂ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅದ್ದೂರಿಯಾಗಿ ನಡೆದ ಹುಚ್ಚೀರಪ್ಪಜ್ಜನ ರಥೋತ್ಸವ

ಕೋಡಿಕೊಪ್ಪದ ಹುಚ್ಚೀರಪ್ಪಜ್ಜನ ರಥೋತ್ಸವವು ಸೋಮವಾರ ಸಂಜೆ ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ವೈಭವದಿಂದ ಜರುಗಿತು.

ರಾಜ್ಯದಲ್ಲಿಂದು 445 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 445 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 11,005 ಕ್ಕೆ ಏರಿಕೆಯಾದಂತಾಗಿದೆ.