ಉತ್ತರಪ್ರಭ
ಗದಗ:
ಗದಗದಿಂದ ಮುಂಡರಗಿ ಹೋಗುವ ಮಾರ್ಗ ಮಧ್ಯೆ ಬರುವ ಪಾಪನಾಶಿ ಗ್ರಾಮದ ಹತ್ತಿರವಿರುವ ಅನಧಿಕೃತ ಟೊಲ್ ತೇರವುಗೋಳಿಸಬೇಕೆಂದು ಸಾರ್ವಜನಿಕರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸುಮಾರು ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ. ಧರಣಿ ನಡೆಯುತ್ತಿರುವುದರಿಂದ ಟೋಲ್ ಅಧಿಕಾರಿಗಳು ಯಾವೊಂದು ವಾಹನಗಳಿಂದ ಟೋಲನ್ನು ವಸೂಲಿ ಮಾಡುತ್ತಿರುವುದಿಲ್ಲಾ.

ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ರೂಮ್‌ನಲ್ಲಿ ಕೂಡಿ ಹಾಕಿ ಸಾರ್ವಜನಿಕರಿಂದ ಧರಣಿ


ಸುಮಾರು ವರ್ಷಗಳಿಂದ ಸಾರ್ವಜನಿಕರಿಂದ ಅನಧಿಕೃತ ಟೋಲ್‌ನ್ನು ಕಟ್ಟಿ, ವಸೂಲಿ ಮಾಡುತ್ತಾ ಬಂದಿದ್ದು. ಆದರೆ ಯಾವೋಬ್ಬ ಟೋಲ್ ಅಧಿಕಾರಿಗಳು ಇನ್ನೂವರೆಗೂ ಟೋಲ್ ಸಂಬoಧಿಸಿದ ದಾಖಲೆಗಳನ್ನು ತೋರಿಸಿಲ್ಲ, ಹಾಗಾಗಿ ಸಾರ್ವಜನಿಕರು ಟೋಲ್‌ನಿಂದ ಬೆಸತ್ತು ಅಹೋ ರಾತ್ರಿ ಧರಣಿಯನ್ನು ಮಾಡುತ್ತಿದ್ದಾರೆ. 4ನೇ ದಿನದ ಅಹೋರಾತ್ರಿ ಧರಣಿಯ ಒತ್ತಡಕ್ಕೆ ಮಣಿದ ಕೆಆರ್‌ಡಿಸಿಎಲ್ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿದಾಗ ರೊಚ್ಚಿಗೆದ್ದ ಸಾರ್ವಜನಿಕರು ಅಧಿಕಾರಿಗಳನ್ನು ರೂಮ್‌ನೋಳಗೆ ಕೂಡಿ ಹಾಕಿ ಧರಣಿ ಮುಂದುವರಿಸಿದರು.
ಧರಣಿ ನಿರತರಿಗೆ ಅಧಿಕಾರಿಗಳು ಸಮಾಜಾಯಿಷಿ ನೀಡಲು ಮುಂದಾದಾಗ ಸಾರ್ವಜನಿಕರು ಅಧಿಕಾರಿಗಳಿಗೆ ನಾಲ್ಕು ದಿನzದಿಂದ ಧರಣಿ ಮಾಡುತ್ತಿದ್ದು, ಯಾವೋಬ್ಬ ಅಧಿಕಾರಿಗಳು ಬರದೆ ಇರುವುದು ಅಧಿಕಾರಿಗಳ ಬೇಜಬ್ದಾರಿ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡ ಪ್ರಸಂಗವು ನಡೆಯಿತು.
ಈ ಸಂದರ್ಭದಲ್ಲಿ ಲಾರಿ ಮಾಲಿಕರ ಸಂಘದ ಸದಸ್ಯರು, ಜಯಕರ್ನಾಟಕ ಸಂಘಟನೆಯ ಸದಸ್ಯರು, ಕೆ ಆರ್ ಎಸ್ ಪಕ್ಷದ ಪದಾಧಿಕಾರಿಗಳು ಮತ್ತು ಸಾರ್ವಜನಿಕರಿದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಾದ್ಯಂತ ನಿರಂತರ ಮಳೆ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

ಉತ್ತರಪ್ರಭ ಗದಗ: ಗದಗ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಇಂದು…

ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಇಲಾಖೆ ಬಸ್ ಪಲ್ಟಿ

ಉತ್ತರಪ್ರಭ ಸುದ್ದಿ ಗದಗ: ಪಟ್ಟಣದ ದಿಂದ ಬಳಗಾನೂರು ಗ್ರಾಮಕ್ಕೆ ಹೊರಟ್ಟಿದ್ದ NWKSRTC ಬಸ್ ವೊಂದು ಪಲ್ಟಿಯಾಗಿ…

ಮೆಕ್ಕೆಜೋಳದ ಬೆಳೆಗೆ ಬೆಂಕಿ ಇಟ್ಟ ಕಿಡಗೇಡಿಳು

ಲ್ಲೂಕಿನ ಕುಂಟೋಜಿ ಗ್ರಾಮದ ಗುಡ್ಡದ ಮೇಲಿನ ಹೊಲದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳದ ಬೆಳೆಗೆ ಕಿಡಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕಟಾವಿಗೆ ಬಂದಿದ್ದ ಫಸಲು ಹೊಲ್ಲದಲ್ಲೇ ಸುಟ್ಟು ಕರಕಲಾಗಿದೆ. ಸಾಲಾ ಮಾಡಿ ಕೃಷಿ ಮಾಡಿದ್ದ ಗಜೇಂದ್ರಗಡ ಪಟ್ಟಣದ ಲಂಬಾಣಿ ತಾಂಡಾದ ರೈತ ಮಹಿಳೆ ಲಕ್ಷ್ಮವ್ವ ಉಮಲಪ್ಪ ರಾಠೋಡ ಕೈಗೆ ಬಂದ ಜೋಳ ಸುಟ್ಟು ಬೂದಿಯಾದ ಕಾರಣ ಕಣ್ಣೀರು ಇಡುತ್ತಾ ಕಿಡಗೇಡಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾಳೆ.

ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂ. ಬ್ಯಾಂಕ್ ಗೆ ವಂಚನೆ

ಉತ್ತರಪ್ರಭ ಸುದ್ದಿ, ಗದಗ: ನಗರದ ಐಡಿಬಿಐ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ…