ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ರೂಮ್‌ನಲ್ಲಿ ಕೂಡಿ ಹಾಕಿ ಸಾರ್ವಜನಿಕರಿಂದ ಧರಣಿ

ಉತ್ತರಪ್ರಭ
ಗದಗ:
ಗದಗದಿಂದ ಮುಂಡರಗಿ ಹೋಗುವ ಮಾರ್ಗ ಮಧ್ಯೆ ಬರುವ ಪಾಪನಾಶಿ ಗ್ರಾಮದ ಹತ್ತಿರವಿರುವ ಅನಧಿಕೃತ ಟೊಲ್ ತೇರವುಗೋಳಿಸಬೇಕೆಂದು ಸಾರ್ವಜನಿಕರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸುಮಾರು ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ. ಧರಣಿ ನಡೆಯುತ್ತಿರುವುದರಿಂದ ಟೋಲ್ ಅಧಿಕಾರಿಗಳು ಯಾವೊಂದು ವಾಹನಗಳಿಂದ ಟೋಲನ್ನು ವಸೂಲಿ ಮಾಡುತ್ತಿರುವುದಿಲ್ಲಾ.

ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ರೂಮ್‌ನಲ್ಲಿ ಕೂಡಿ ಹಾಕಿ ಸಾರ್ವಜನಿಕರಿಂದ ಧರಣಿ


ಸುಮಾರು ವರ್ಷಗಳಿಂದ ಸಾರ್ವಜನಿಕರಿಂದ ಅನಧಿಕೃತ ಟೋಲ್‌ನ್ನು ಕಟ್ಟಿ, ವಸೂಲಿ ಮಾಡುತ್ತಾ ಬಂದಿದ್ದು. ಆದರೆ ಯಾವೋಬ್ಬ ಟೋಲ್ ಅಧಿಕಾರಿಗಳು ಇನ್ನೂವರೆಗೂ ಟೋಲ್ ಸಂಬoಧಿಸಿದ ದಾಖಲೆಗಳನ್ನು ತೋರಿಸಿಲ್ಲ, ಹಾಗಾಗಿ ಸಾರ್ವಜನಿಕರು ಟೋಲ್‌ನಿಂದ ಬೆಸತ್ತು ಅಹೋ ರಾತ್ರಿ ಧರಣಿಯನ್ನು ಮಾಡುತ್ತಿದ್ದಾರೆ. 4ನೇ ದಿನದ ಅಹೋರಾತ್ರಿ ಧರಣಿಯ ಒತ್ತಡಕ್ಕೆ ಮಣಿದ ಕೆಆರ್‌ಡಿಸಿಎಲ್ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿದಾಗ ರೊಚ್ಚಿಗೆದ್ದ ಸಾರ್ವಜನಿಕರು ಅಧಿಕಾರಿಗಳನ್ನು ರೂಮ್‌ನೋಳಗೆ ಕೂಡಿ ಹಾಕಿ ಧರಣಿ ಮುಂದುವರಿಸಿದರು.
ಧರಣಿ ನಿರತರಿಗೆ ಅಧಿಕಾರಿಗಳು ಸಮಾಜಾಯಿಷಿ ನೀಡಲು ಮುಂದಾದಾಗ ಸಾರ್ವಜನಿಕರು ಅಧಿಕಾರಿಗಳಿಗೆ ನಾಲ್ಕು ದಿನzದಿಂದ ಧರಣಿ ಮಾಡುತ್ತಿದ್ದು, ಯಾವೋಬ್ಬ ಅಧಿಕಾರಿಗಳು ಬರದೆ ಇರುವುದು ಅಧಿಕಾರಿಗಳ ಬೇಜಬ್ದಾರಿ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡ ಪ್ರಸಂಗವು ನಡೆಯಿತು.
ಈ ಸಂದರ್ಭದಲ್ಲಿ ಲಾರಿ ಮಾಲಿಕರ ಸಂಘದ ಸದಸ್ಯರು, ಜಯಕರ್ನಾಟಕ ಸಂಘಟನೆಯ ಸದಸ್ಯರು, ಕೆ ಆರ್ ಎಸ್ ಪಕ್ಷದ ಪದಾಧಿಕಾರಿಗಳು ಮತ್ತು ಸಾರ್ವಜನಿಕರಿದ್ದರು.

Exit mobile version