ಆಲಮಟ್ಟಿ : ಆಲಮಟ್ಟಿಯ ಕುವರಿ,ಪ್ರತಿಭಾನ್ವಿತೆ ಭಾಗ್ಯಶ್ರೀ ಬಿರಾದಾರ ಅವರ ಮದುವೆ ಸಮಾರಂಭ ವರ ಮಲ್ಲಿಕಾರ್ಜುನ ಅವರೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು.

ಮಳೆ,ಬಿಸಿಲಿನಲ್ಲಿ ರಕ್ಷಣೆ ಕೊಡುವ ಛತ್ರಿ(ಕೊಡೆ)ಯ ಆಸರೆಯಂತೆ ಜೀವನದ ಚಿಲುಮೆಯ ಉಸಿರಿನವರೆಗೂ ಸದಾ ಆಸರೆಯಾಗಿರಿ ಈ ನಿಮ್ಮ ಭಾಗ್ಯಕ್ಕೆ ಎಂಬ ಆಲವತ್ತಿನ ಕೊರಿಕೆಯೇ…? ಭಾಗ್ಯಶ್ರೀ- ಮಲ್ಲಿಕಾರ್ಜುನ ಸಂಗಾತಿ ಕಲರಮಯ ಛತ್ರಿಯಲ್ಲಿ ಹೀಗೆ ಮಿನುಗಿದ್ದು !


ಅದ್ದೂರಿ ಮದುವೆ ಸಮಾರಂಭದಲ್ಲಿ ಈ ನವ ಜೋಡಿಗಳು ಸಪ್ತಪತಿ ತುಳಿದು ಹೊಸಬಾಳಿಗೆ ಕಾಲಿರಿಸಿದರು. ಆಲಮಟ್ಟಿಯ ಶ್ರೀಮತಿ ಸುಮಿತ್ರಾ ಮತ್ತು ದಿ, ಪ್ರಭು ಕಲ್ಲಪ್ಪ ಬಿರಾದಾರ ಅವರ ಸುಪುತ್ರಿಯಾಗಿರುವ ಎಂಕಾಮ್ ಪದವೀಧರೆ ಭಾಗ್ಯಶ್ರೀ ಇವರ ಶುಭ ವಿವಾಹ ಕನಮಡಿಯ ಶ್ರೀಮತಿ ಶಾರದಾ ಮತ್ತು ರಾವಾಸಾಹೇಬ್ ಬಿರಾದಾರ ಅವರ ಜೇಷ್ಠ ಸುಪುತ್ರ ಚಿಕ್ಕೋಡಿ ಕಾಲೇಜೊಂದರ ಉಪನ್ಯಾಸಕ ಮಲ್ಲಿಕಾರ್ಜುನ ಅವರೊಂದಿಗೆ ನೆರವೇರಿತು.

ಪೋಟೋ ಪ್ರೇಮ…! ಮದುವೆ ವೇದಿಕೆಯಲ್ಲಿ ಭಾಗ್ಯಶ್ರೀ- ಮಲ್ಲಿಕಾರ್ಜುನ ನವ ದಂಪತಿಗಳು ತಮ್ಮ ಭಾವಚಿತ್ರ ಕೈಯಲ್ಲಿ ಹಿಡಿದು ಖುಷಿಯ ಭಾವ ದರ್ಪಣ ನಗೆ ಬೀರಿದ್ದು ಹೀಗೆ !


ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಶ್ರೀ ಧರಿದೇವರ ದೇವಸ್ಥಾನ ಮಂಗಲ ಕಾಯಾ೯ಲಯದಲ್ಲಿ ಜರುಗಿದ ವಿವಾಹ ಸಮಾರಂಭದಲ್ಲಿ ಈ ನವ ಜೋಡಿಗಳು ಸಹಸ್ರಾರು ಹಿತೈಷಿಗಳ ಸಮ್ಮುಖದಲ್ಲಿ ಸತಿಪತಿ ಬಾಳ ಸಂಗಾತಿಗಳಾಗಿ ಕೈಹಿಡಿದರು. ಹೊಸಬಾಳಿನ ಹೊಸಿಲಲಿ ನವ ಜೋಡಿಗಳು ಮಿನುಗಿ ಸಂತಸದ ಹೊನಲಿನಲ್ಲಿ ತೇಲಿ ದಾಂಪತ್ಯ ಜೀವನದ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.

ಮದುವೆಯ ಈ ಬಂಧ ಅನುರಾಗದ ಸಂಬಂಧ,ಅನುಬಂಧದಲ್ಲಿ ನವ ಜೋಡಿ ಭಾಗ್ಯಶ್ರೀ- ಮಲ್ಲಿಕಾರ್ಜುನ ಕ್ಯಾಮರಾ ಕಣ್ಣಂಚಿನಲ್ಲಿ ಸೆರೆಯಾದ ಬೇಸುಗೆ ನೋಟ….


ನವ ವಧು- ವರರನ್ನು ಗುರು,ಹಿರಿಯರು,ಬಂಧು,ಬಳಗ, ಆತ್ಮೀಯರು,ಒಟನಾಟಿ ಆಪ್ತಮಿತ್ರರು ಆಶೀರ್ವದಿಸಿ ನೂರಾರು ವಸಂತಕಾಲ ಸಹಬಾಳ್ವೆ ಹೊಂದಾಣಿಕೆಯಿಂದ ಹರುಷದಿಂದ ಬಾಳಿ ಬದುಕಲಿ ಎಂದು ಶುಭಹರಿಸಿದರು.

Leave a Reply

Your email address will not be published. Required fields are marked *

You May Also Like

ಗೋವಿನ ಪ್ರತಿ ಅಂಗಳದಲ್ಲಿಯೂ ದೇವ- ದೇವತೆಗಳು ನೆಲೆಸಿವೆ- ಸತ್ಯಾರ್ಥತೀರ್ಥ ಶ್ರೀ

“ಯಲಗೂರ ಗೋಶಾಲೆ ಪ್ರೇರಕ ಶಕ್ತಿ ಸುಧಾಮೂತಿ೯ ಕರುನಾಡಿಗೆ ಸ್ಪೂರ್ತಿ” ಉತ್ತರಪ್ರಭ ಆಲಮಟ್ಟಿ: ಗೋವುಗಳನ್ನು ಕಸಾಯಿಕಾನೆಗೆ ಕಳುಹಿಸಲು…

ಮನುಕುಲದ ಸೂರ್ಯ ಲಿಂ.ತೋಂಟದ ಸಿದ್ದಲಿಂಗ ಶ್ರೀ

ಆಲಮಟ್ಟಿ : ಲಿಂ, ತೋಂಟದ ಡಾ.ಸಿದ್ದಲಿಂಗ ಶ್ರೀ ಕರುನಾಡು,ದೇಶ ಕಂಡ ಅಪರೂಪದ ಜೀವ ದೈವ. ನಿಭೀ೯ಡೆ…

ನರೇಗಾದಡಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ

ಆಲಮಟ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ…

ಆಲಮಟ್ಟಿ 26 ಗೇಟ್ ಓಪನ್ – ಅಪಾರ ನೀರು ಹೊರಕ್ಕೆ

ಉತ್ತರಪ್ರಭ ಸುದ್ದಿಆಲಮಟ್ಟಿ: ನೆರೆಯ ಮಹಾರಾಷ್ಟ್ರ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಕೃಷ್ಣಾ ನದಿ ಹರಿವಿನಲ್ಲಿ…