ಉತ್ತರಪ್ರಭ ಸುದ್ದಿ
ಆಲಮಟ್ಟಿ:
ನಿಸರ್ಗ ಸಹಜ ಕ್ರಿಯೆಗೆ ಹೊತ್ತು ಗೊತ್ತಿಲ್ಲ. ಅದು ಹೇಳಿ ಕೇಳಿ ಬರದು. ಶೌಚಾಲಯಕ್ಕೆ ಕಾಲಿರಿಸುವ ಮುನ್ನ ನೀರಿನ ವ್ಯವಸ್ಥೆ ಇದಿಯೋ ಇಲ್ಲೋ ಎಂಬುದನ್ನು ಗಮನಿಸಿ! ನೀರುಂಟು ಎಂದು ತರಾತುರಿಯಲ್ಲಿ ಧಾವಿಸಿದಿರಿ ಜೋಕೆ! ಯಾವುದಕ್ಕೂ ಮೊದಲು ವಿಚಾರಿಸಿ ಕಾಲಿರಿಸಿ! ಏನು ಪರಿಶೀಲಿಸದೇ ಗಡಿಬಿಡಿಯಲ್ಲಿ ತೆರಳಿ ಫಜೀತಿಗೆ ಒಳಗಾದಿರಿ ಹುಷಾರು! ಒಂದೊಮ್ಮೆ ಸಹಜ ಕ್ರಿಯೆ ಕರೆಗೆ ಧಾವಿಸಿದಾಗ ಅಲ್ಲಿ ನೀರಿಲ್ಲದಿದ್ದರೆ? ಹೇಗಾಗಬೇಡ ಶೌಚಾಲಯಕ್ಕೆ ತೆರಳಿದವರ ಪರಸ್ಥಿತಿ? ಮನಸ್ಥಿತಿ? ಮಾನ ಮಯಾ೯ದೇ ಪ್ರಶ್ನೆ ನಿಮಗೆ ಕಾಡದೇ ಬಿಡದು! ಛೇ… ಥೂ…ಎಂದು ಮನದಲ್ಲಿ ಶಪಿಸಿ ಉಮ್ಮಳಿಸಿ ಎದುರಾದ ಅಸಹನೀಯ ಕಷ್ಟ-ಗೋಳು ತೆಪ್ಪಿಗೆ ಮನ ಕರಗಿ ನೀರಾದೀತು! ಮನಸ್ಸಿನ ಅಂತರಂಗದಲ್ಲಿ ಉದ್ಬಯಿಸುವ ಕಸಿವಿಸಿ ತಳಮಳದ ಸಂಚಲನದಿಂದ ಮುಜುಗರ ಪಡಬೇಕಾದೀತು! ಹಿಡಿಶಾಪವೋ ಶಾಪ ಹಾಕಿ ಶಪಿಸದೇ ಇರದಂಥ ಪರಸ್ಥಿತಿ ಎದುರಾದೀತು!!!

ಇಂಥದೊಂದು ಪರದಾಟ, ಫಜೀತಿ, ಪ್ರಯಾಸದ ಪ್ರಸಂಗ ಉದ್ಯಾನ ನಗರಿ ಖ್ಯಾತಿಯ ಹಸಿರು ವಸುಂಧರೆ ಆಲಮಟ್ಟಿಯಲ್ಲಿ ಪ್ರವಾಸಿ ಜನತೆಗೆ ಅನುಭವಿಸುವಂತಾಯಿತು! ಪ್ರವಾಸಿ ತಾಣ ಆಲಮಟ್ಟಿಯ ರಾಕ್ ಉದ್ಯಾನದ ವಾಹನಗಳು ನಿಲ್ಲುವ ಪಾರ್ಕಿಂಗ್ ಸ್ಥಳದಲ್ಲಿಯ ಶೌಚಾಲಯದಲ್ಲಿ ಬುಧವಾರ ಇಡೀ ದಿನ ನೀರು ಬಾರದೇ ಪ್ರವಾಸಿಗರು ಪರದಾಡಿದ ಘಟನೆ ನಡೆದಿದೆ. ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಇತ್ತ ನಿತ್ಯ ಲಗ್ಗೆಯಿರಿಸುತ್ತಾರೆ. ಹಸಿರು ರಮ್ಯ ನೋಟ ಕಣ್ತುಂಬಿಸಿಕೊಂಡು ಆಲಮಟ್ಟಿ ವ್ಯಯಾರದ ಅಂದ ಚೆಂದಕ್ಕೆ ಬೆರಗಾಗುತ್ತಾರೆ‌. ಆದರೆ ಬುಧವಾರ ಪ್ರವಾಸಿಗರು ಇಲ್ಲಿ ಬೆರಗಾಗಿ ದಂಗಾಗಿದ್ದು ಶೌಚಾಲಯದಲ್ಲಿ ನೀರಿಲ್ಲದ ಅವಸ್ಥೆ ಕಂಡು! ಪಾರ್ಕಿಂಗ್ ಸ್ಥಳದಲ್ಲಿ ಶೌಚಾಲಯವಿದೆ. ಶೌಚಾಲಯದ ಸಿಬ್ಬಂದಿಗಳ ನೇಮಕ ಹಾಗೂ ಮೇಲ್ವಿಚಾರಣೆಯನ್ನು ಹೊರಗುತ್ತಿಗೆ ನೀಡಲಾಗಿದೆ. ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಶೌಚಾಲಯಕ್ಕೆ ನೀರು ಬಂದಿಲ್ಲ. ಹೀಗಾಗಿ ಶೌಚಾಲಯಕ್ಕೆ ಹೋಗುವ ಜನ ಪ್ರವಾಸಿಗರು ನೀರಿಲ್ಲದೇ ಪರದಾಡಿದರು.

ನಾನಾ ಮಹಿಳಾ ಪ್ರವಾಸಿಗರು ಶೌಚಕ್ಕೆ ಹೋಗಿ ನೀರಿಲ್ಲದೇ ಪರದಾಡಿದ ಘಟನೆ ಜರುಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಜಯಪುರ ಹಾಗೂ ಬೆಂಗಳೂರಿನಿಂದ ಬಂದಿದ್ದ ಮಹಿಳಾ ಪ್ರವಾಸಿಗರು ಶೌಚಾಲಯಕ್ಕೆ ಪರದಾಡಬೇಕಾಯಿತು. ಅದರ ಜತೆ ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿಯ ಶೌಚಾಲಯಕ್ಕೂ ನೀರಿಲ್ಲದೇ ಗಬ್ಬೆದ್ದು ನಾರುವ ಪ್ರಸಂಗ ಬಂದೊದಗಿದೆ. ಆ ಶೌಚಾಲಯ ಪರಸ್ಥಿತಿ ಅಯ್ಯೋಮಯ. ಅಲ್ಲಿಯೂ ಮೇಲ್ವಿಚಾರಣೆ ಸಮರ್ಪಕವಾಗಿಲ್ಲ.

ವಿದ್ಯುತ್ ಇಲ್ಲ:
ಸಂಜೆಯಾದೊಡಣೆ ಶೌಚಾಲಯಕ್ಕೆ ಹೋಗಲು ವಿದ್ಯುತ್ ಬೆಳಕಿನ ವ್ಯವಸ್ಥೆಯಿಲ್ಲ, ಕತ್ತಲೆಯಲ್ಲಿಯೇ, ಮೊಬೈಲ್ ಬ್ಯಾಟರಿಯಲ್ಲಿಯೇ ಶೌಚಾಲಯಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಬಿಜೆಎನ್ ಎಲ್ ಅಧಿಕಾರಿ ತಕ್ಷಣವೇ ಈ ಬಗ್ಗೆ ಪರಿಶೀಲಿಸಿ ಶೌಚಾಲಯಕ್ಕೆ ನೀರು ಬಿಡುವ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇನ್ನೂ ಪೆಟ್ರೋಲ್ ಪಂಪ್ ಹತ್ತಿರದ ಶೌಚಾಲಯಕ್ಕೆ ಇಷ್ಟು ದಿನ ಖಾಸಗಿ ವ್ಯಕ್ತಿಗಳಿಂದ ನೀರನ್ನು ಪಡೆಯಲಾಗುತ್ತಿತ್ತು. ಈಗ ಅವರು ನೀರು ಕೊಡುವುದನ್ನು ನಿಲ್ಲಿಸಿದ್ದಾರೆ, ಈಗಿರುವ ರಾಕ್ ಉದ್ಯಾನದ ಹತ್ತಿರದಿಂದ ನೀರು ಒಯ್ಯಲು ರೈಲ್ವೆ ಹಳಿ ಅಡ್ಡವಾಗಿದೆ. ಹೀಗಾಗಿ ಶೌಚಾಲಯಕ್ಕೆ ನೀರು ಪೂರೈಸುವಂತೆ ಆಲಮಟ್ಟಿ ಗ್ರಾಮ ಪಂಚಾಯ್ತಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು. ಸಂಜೆ 7 ರ ನಂತರ ಶೌಚಾಲಯಕ್ಕೆ ಮತ್ತೇ ನೀರಿನ ಪೂರೈಕೆ ಆರಂಭಗೊಂಡಿತು.

ಪ್ರವಾಸಿ ತಾಣ, ನಾನಾ ಉದ್ಯಾನಗಳ ಕಾರಣ, ರಾಜ್ಯದ ನಾನಾ ಕಡೆಯಿಂದ ಪ್ರವಾಸಿಗರು ಇಲ್ಲಿ ಬರುತ್ತಾರೆ. ಶೌಚಾಲಯದ ಸ್ವಚ್ಛತೆ, ಮೇಲ್ವಿಚಾರಣೆಯತ್ತ ಹೆಚ್ಚಿನ ಗಮನಹರಿಸಬೇಕಿದೆ. ಅದರಲ್ಲಿಯೂ ತಕ್ಷಣವೇ ಸಮಸ್ಯೆ ಬಗೆಹರಿಸಲು ಫುಲಿಯಪ್ಪ. ವಡ್ಡರ್ ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

You May Also Like

ಮುಂಬೈ ಎಕ್ಸಪ್ರೆಸ್ ನಲ್ಲಿ ಬಂದಿಳಿದರು 124 ಜನ..!

ಮುಂಬೈನಲ್ಲಿದ್ದ ಜನರು ಇಂದು ಮುಂಬೈ-ಗದಗ ಎಕ್ಸಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದರು. ಇದರಲ್ಲಿ 124 ಜನರು ರೈಲಿನ ಮೂಲಕ ನಗರಕ್ಕೆ ಆಗಮಿಸಿದರು.

ಪ್ರಬುದ್ಧ ಜಾಣತನದ ನಿಲುವು ಪ್ರಕಟಿಸಲು ಪ್ರಧಾನಿಗೆ ಪತ್ರ

ಲಾಕ್ ಡೌನ್ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಮುಖಂಡ ಟಿ.ಈಶ್ವರ ಬಹಿರಂಗ ಪತ್ರ ಬರೆದಿದ್ದಾರೆ.

ಸುತಗುಂಡಾರ : ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ

ಆಲಮಟ್ಟಿ : ಸನಿಹದ ಸುತಗುಂಡಾರ ಶ್ರೀ ಕರವೀರೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.…

ರಾಜ್ಯದಲ್ಲಿಂದು 378 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 378 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾದಂತಾಗಿದೆ.