ಉತ್ತರಪ್ರಭ ಸುದ್ದಿ
ನಿಡಗುಂದಿ:
ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಹಾಗೂ ಬಿಜೆಪಿ ಬಸವನಬಾಗೇವಾಡಿ ಮಂಡಲ ವತಿಯಿಂದ ಉಚಿತ ಆರೋಗ್ಯ ಶಿಬಿರ,ಉಚಿತ ಔಷಧ ವಿತರಣೆ ಹಾಗೂ ರಕ್ತದಾನ ಶಿಬಿರ ನಿಡಗುಂದಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಕುರಿತು ಬುಧವಾರ ಪತ್ರಕರ್ತರಿಗೆ ಮಾಹಿತಿ ನೀಡಿದ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯ, ಪಟ್ಟಣ ಪಂಚಾಯ್ತಿ ನಾಮನಿರ್ದೇಶನ ಸದಸ್ಯ ಡಾ ಸಂಗಮೇಶ ಗೂಗಿಹಾಳ, ಇದೇ 23 ಶುಕ್ರವಾರ, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಆರೋಗ್ಯ ಶಿಬಿರ ನಡೆಯಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಸೆ 17 ರಿಂದ ಅ 2 ರವರೆಗೆ ಬಿಜೆಪಿ ವತಿಯಿಂದ ಜಿಲ್ಲೆಯ ನಾನಾ ಕಡೆ ಸೇವಾ ಪಾಕ್ಷಿಕ ಅಂಗವಾಗಿ ವಿವಿಧ ಆರೋಗ್ಯ ಶಿಬಿರಗಳು ನಡೆಯುತ್ತಿವೆ. ಅದರ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಶಿಬಿರದಲ್ಲಿ ಮಧುಮೇಹ ತಜ್ಞರು, ನೇತ್ರ ತಜ್ಞರು, ಮೆಡಿಸಿನ್ ತಜ್ಞರು, ಸರ್ಜನ್, ಶ್ವಾಸಕೋಶ ತಜ್ಞರು, ಮೂಲವ್ಯಾಧಿ ತಜ್ಞರು, ಉದರ ರೋಗ ಶಸ್ತ್ರಚಿಕಿತ್ಸಕರು, ಮೂಳೆರೋಗ ತಜ್ಞರು, ದಂತ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ವಿಜಯಪುರ, ಬಾಗಲಕೋಟೆ ತಜ್ಞರ ಜತೆಗೆ ನಿಡಗುಂದಿಯ ಎಲ್ಲಾ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ತಜ್ಞ ವೈದ್ಯರು ಬರೆದಿರುವ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದರು.

Leave a Reply

Your email address will not be published. Required fields are marked *

You May Also Like

ಗಜೇಂದ್ರಗಡ: ರೋಜಗಾರ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ಸಮೀಪದ ಲಕ್ಕಲಕಟ್ಟಿ ಗ್ರಾಮ ಪಂಚಾಯತಿಯ ಲಕ್ಕಲಕಟ್ಟಿ ತಾಂಡಾಕ್ಕೆ ತಾಂಡಾ ರೋಜಗಾರ ಮಿತ್ರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಲಮಟ್ಟಿ 26 ಗೇಟ್ ಓಪನ್ – ಅಪಾರ ನೀರು ಹೊರಕ್ಕೆ

ಉತ್ತರಪ್ರಭ ಸುದ್ದಿಆಲಮಟ್ಟಿ: ನೆರೆಯ ಮಹಾರಾಷ್ಟ್ರ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಕೃಷ್ಣಾ ನದಿ ಹರಿವಿನಲ್ಲಿ…

ನಿಡಗುಂದಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ
ಸದೃಢ ಮನಸ್ಸು ವಿಕಸನಕ್ಕೆ ಕ್ರೀಡೆಗಳು ಸಹಕಾರಿ- ಬಿ.ಟಿ.ಗೌಡರ

ಉತ್ತರಪ್ರಭ ಸುದ್ದಿ ನಿಡಗುಂದಿ: ಕ್ರೀಡೆಗಳಿಂದ ಸದೃಢ ದೇಹ,ಮನಸ್ಸು ಹೊಂದಬಹುದು. ಅವು ಶಾರೀರಿಕ ವಿಕಸನಕ್ಕೆ ಪ್ರೇರಕವಾಗಿವೆ ಎಂದು…

ರಾಜ್ಯದ 5400 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾರ್ಯಕ್ರಮ: ಕೆ.ಎಸ್.ಈಶ್ವರಪ್ಪ

ರಾಜ್ಯದ 5400 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿ ಆರಂಭಿಸಲಾಗಿದೆ. ಅಂತರ್ಜಲ ಹೆಚ್ಚಿಸುವ ಕಾಮಗಾರಿಗೆ ಆದ್ಯತೆ ನೀಡಿರುವುದರಿಂದ ರಾಜ್ಯದಲ್ಲಿ ನರೇಗಾ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.