ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಆಲಮಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲ ವಯೋಮಾನದ ಗ್ರಾಮೀಣ ಕ್ರೀಡಾಸಕ್ತರಿಗಾಗಿ ದಿ,10 ರಂದು ಗ್ರಾಮೀಣ ಕ್ರೀಡಾಕೂಟ ಏರ್ಪಡಿಸಲಾಗಿದೆ. ಇಲ್ಲಿನ ಲಕ್ಷ್ಮೀ ದೇವಸ್ಥಾನ ಹತ್ತಿರದ ಮೈದಾನದಲ್ಲಿ ಜಿ.ಪಂ.ವಿಜಯಪುರ, ತಾ.ಪಂ.ನಿಡಗುಂದಿ ಹಾಗು ಸ್ಥಳೀಯ ಗ್ರಾ.ಪಂ. ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕ್ರೀಡಾಕೂಟದಲ್ಲಿ ಆಲಮಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿನ ಆಲಮಟ್ಟಿ, ಅರಳದಿನ್ನಿ, ಚಿಮ್ಮಲಗಿ ಭಾಗ-1(ಎ) ಹಾಗು (ಬಿ) ಗ್ರಾಮಸ್ಥರು ಭಾಗವಹಿಸಬಹುದಾಗಿದೆ.

ಶನಿವಾರ ಬೆಳಿಗ್ಗೆ 10ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತಿದೆ.ಭಾಗವಹಿಸುವ ಸ್ಪಧಾ೯ಳುಗಳು ತಮ್ಮ ಆಧಾರ ಕಾಡ್೯ ಝರಾಕ್ಸ್ ಪ್ರತಿಯೊಂದಿಗೆ ಸ್ಥಳೀಯ ಗ್ರಾಪಂ ದಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಇಲ್ಲಿ ವಿಜೇತರಾಗುವ ಕ್ರೀಡಾಪಟುಗಳಿಗೆ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುವುದು.

ಕಬಡ್ಡಿ, ಖೋಖೋ, ಕುಸ್ತಿ ಹಾಗು ಎತ್ತಿನ ಬಂಡಿಗಳ ಓಟದ ಸ್ಪರ್ಧೆಗಳು ನಡೆಯಲಿವೆ. ಸ್ಪಧೆ೯ಯಲ್ಲಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದು ವಿಜೇತರಾಗುವರಿಗೆ ತಲಾ ಒಂದೊಂದು ಶಿಲ್ಡ್ ಹಾಗು ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಮಂಜುನಾಥ್ ಹಿರೇಮಠ, ಉಪಾಧ್ಯಕ್ಷೆ ಮೀನಾಕ್ಷಿ ಉಪ್ಪಾರ, ಅಭಿವೃದ್ಧಿ ಅಧಿಕಾರಿ ಬಿ.ಬಿ.ಕಲ್ಯಾಣಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 918 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 918 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 11923…

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆ

ಇಂದು ಮತ್ತೆ ರಾಜ್ಯದಲ್ಲಿ ಐದು ಹೊಸ ಕೊರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ 606ಕ್ಕೆ ಏರಿಕೆ ಆಗಿದೆ.

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ

ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಡಿಪಿಇಪಿ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವನ್ನು ಶಾಲೆಯ ಪ್ರಧಾನ ಶಿಕ್ಷಕ ಎಂ.ಟಿ.ಕಟ್ಟಿಮನಿ ಸಸಿಗಳಿಗೆ ನೀರು ಹಾಕುವ ಮೂಲಕ ಆಚರಿಸಲಾಯಿತು.

ಶಾಲೆಗಳು ಪ್ರಾರಂಭವಾಗಲು ಕೂಡಿ ಬಂದಿದೆಯೇ ಮುಹೂರ್ತ!?

ಬೆಂಗಳೂರು : ಕೊರೊನಾ ಹಾವಳಿಯಿಂದಾಗಿ ರಾಜ್ಯದಲ್ಲಿ ಶಾಲೆಗಳು ಮುಚ್ಚಿವೆ. ಆದರೆ, ಸದ್ಯ ಕೊರೊನಾ ತಗ್ಗುತ್ತಿದ್ದು, ಶಾಲೆಗಳನ್ನು ತೆರೆಯುವ ಕುರಿತು ಚಿಂತನೆ ನಡೆಯುತ್ತಿದೆ.