ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಇಲ್ಲಿನ ವಿವಿಧ ಬಡಾವಣೆಯಲ್ಲಿ ಗಣೇಶ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಲ ಗಜಾನನ ಯುವಕ ಮಂಡಳಿಗಳು ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಟಾಪಿಸಿರುವ ಗಣೇಶ ಮೂತಿ೯ಗಳ ವೈವಿಧ್ಯ ದರ್ಶನ ನೋಡುಗರ ಕಣ್ಮನ ಸೆಳೆಯುತ್ತಿವೆ. ವಿನಾಯಕ ಮೂತಿ೯ಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಟಾಪಿಸಿ ಅದ್ದೂರಿ ಮೆರವಣಿಗೆ ಮೂಲಕ ಕೃಷ್ಣಾ ನದಿ ಹಿನ್ನೀರಿನಲ್ಲಿ ವಿಸಜಿ೯ಸಲಾಗುತ್ತಿವೆ. ವಿಶೇಷ ಪೂಜೆ ಪುರಸ್ಕಾರ ಗಣೇಶನಿಗೆ ಸಲ್ಲುತ್ತಿವೆ. ಮೋದಕ ಪ್ರಿಯ ಭಕ್ತರು ಶೃಧ್ಧಾಭಕ್ತಿಯಿಂದ ಆರಾಧಿಸುತ್ತಿದ್ದಾರೆ. ವಿಘ್ನನಿವಾರಕನ ಕೃಪೆಗೆ ಹವಣಿಸಿ ಭಕ್ತಿ ನಮನ ಸಲ್ಲಿಸಿದರು. ಮನೆ,ಮನಗಳಲ್ಲಿ ಈಗ ಗಣಪತಿ ಬಪ್ಪಾ ಮೋರಯಾ ರಾರಾಜಿಸುತ್ತಿದ್ದಾನೆ.‌ ಸಾರ್ವಜನಿಕ ಗಣೇಶೋತ್ಸವ ಕಳೆ ಕಟ್ಡಿದೆ. ಚಂದ್ರಮ್ಮಾ ದೇವಸ್ಥಾನ ಸನಿಹದ ನಾಗಪ್ಪನ ಕಟ್ಟೆ ಬಳಿ ಶ್ರೀ ಅಶ್ವಥ ನಾರಾಯಣ ಗಜಾನನ ಯುವಕ ಮಂಡಳಿ ಭವ್ಯ ಗಣೇಶ ಮೂತಿ೯ ಪ್ರತಿಷ್ಟಾಪನೆ ಮಾಡಿ ಸಾಂಸ್ಕೃತಿಕ, ಧಾಮೀ೯ಕ, ಅನ್ನದಾಸೋಹ ಕಾರ್ಯಕ್ರಮ ನಡೆಸಿ ಭಕ್ತಿ ಮೆರೆದಿದ್ದಾರೆ. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೃತ್ಯ, ಹಾಡು, ವಿವಿಧ ಕೌಶಲ್ಯ ಪ್ರದಶಿ೯ಸಿ ರಂಜಿಸಿದರು.

ನಾಗಪ್ಪಕಟ್ಟೆ ಬಳಿ ಕೂರಿಸಿದ್ದ ಐದನೆ ದಿನದ ಗಣೇಶ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ಸಾಗಿತು.‌ ಪಟಾಕಿ ಸದ್ದು ಜೋರಾಗಿತ್ತು. ಆಕರ್ಷಣೀಯ ಗೀತ, ರಾಗದ ಹಾಡುಗಳಿಗೆ ಯುವ ಪಡೆ ಹೆಜ್ಜೆ ಹಾಕಿ ನೃತ್ಯಗಳ ಝೇಂಕಾರ ಸೃಷ್ಟಿಸಿದರು. ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ದೃಶ್ಯ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತು ನೋಡಿ ಸಂತಸ ಪಟ್ಟರು. ಮೆರವಣಿಗೆಯಲ್ಲಿ ಸಾಗುತ್ತಿದ್ದ ಗಣೇಶ ವಿಗ್ರಹಕ್ಕೆ ಕೈಮುಗಿದು ನಮಿಸಿ ಕಣ್ತುಂಬಿಸಿಕೊಂಡರು. ವಕ್ರತುಂಡನ ಜಯಘೋಷ ಮೊಳಗಿದವು. ವೈಭವದ ಮೆರವಣಿಗೆ ಮೂಲಕ ಸಾಗಿದ ಗಣೇಶ ಕೊನೆಗೆ ಕೃಷ್ಣಾ ನದಿ ಪವಿತ್ರ ಜಲರಾಶಿಯಲ್ಲಿ ಲೀನವಾಗಿ ಮರೆಯಾದ.

ಈ ವೇಳೆ ಪ್ರಥಮ ಪೂಜಿತನಿಗೆ ಸಂಭ್ರಮದ ವಿದಾಯ ಹೇಳಿ ಪೂಜಿಸಿ ವಿಸಜಿ೯ಸಲಾಯಿತು. ಅಶ್ವಥ್ ನಾರಾಯಣ ಗಜಾನನ ಯುವಕ ಮಂಡಳಿ ಸದಸ್ಯರಾದ ಚನ್ನಪ್ಪ ತಳವಾರ, ರಾಮಣ್ಣ ಕೋರಿ, ಗೂಳಪ್ಪ ತಳವಾರ, ಹುಲಿಗೆಪ್ಪ ತಳವಾರ, ಗದ್ದೆಪ್ಪ ತಳವಾರ, ಶವಕತ್ ಮುಲ್ಲಾ, ಬಾಬು ಬಡಿಗೇರ, ಚಂದ್ರು ತಳವಾರ, ಚಂದ್ರಶೇಖರ ಆಲಮಟ್ಟಿ, ರಾಮು ಲಮಾಣಿ, ಶ್ರೀಧರ ಬಾಂಡವಾಲಕರ್, ಅಪ್ಪು ಲಾಯದಗುಂದಿ, ಪವನ ತಳವಾರ, ಕಿರಣ ತಳವಾರ, ಸಂತೋಷ ತಳವಾರ,ನಾಗೇಶ್ ತಳವಾರ, ಆಕಾಶ ತಳವಾರ, ಶಿವು ಆಲಮಟ್ಟಿ, ಪುಂಡಲೀಕ ಎಂಟಮನಿ,ಅರುಣ ತಳವಾರ, ಶ್ರೀನಿವಾಸ ಶಹಾಪುರ ಇತರರು ಅಚ್ಚುಕಟ್ಟಾಗಿ ಗಣೇಶ ಉತ್ಸವ ಕಾರ್ಯಕ್ರಮ ಸಂಘಟಿಸಿದರು. ಪ್ರತಿಷ್ಟಾಪನೆ, ವಿಸರ್ಜನೆ ಇವರುಗಳ ಮಾರ್ಗದರ್ಶನದಲ್ಲಿ ಸಾಂಗವಾಗಿ ನೆರವೇರಿದವು.

Leave a Reply

Your email address will not be published. Required fields are marked *

You May Also Like

ಕ್ರೀಡೆಗಳಿಂದ ಆರೋಗ್ಯಕರ ಭಾವನೆ

ಉತ್ತರಪ್ರಭ ಸುದ್ದಿನಿಡಗುಂದಿ: ಹಲ ಬಗೆಯ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಲು ಸಾಧ್ಯ…

ಗಾಯನ ನಿಲ್ಲಿಸಿದ ಎಸ್ ಪಿಗೆ ಗಣ್ಯರಿಂದ ಸಂತಾಪ!

ಬೆಂಗಳೂರು : ಉಸಿರು ಚೆಲ್ಲಿದ ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಸಿಎಂ ಬಿ.ಎಸ್.…

ಸರ್ಕಾರಿ ನೌಕರಸ್ಥರಿಗೆ ಆರೋಗ್ಯ ಸೇತು ಆಪ್ ಕಡ್ಡಾಯ!

ಕೇಂದ್ರ ಸರ್ಕಾರ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಕೆಲಸಗಾರರು ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷರಾಗಿ ಸೋಮಣ್ಣ ಬೆಟಗೇರಿ ನೇಮಕ

ಲಕ್ಷ್ಮೇಶ್ವರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಹಕ್ಕುಗಳು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ರಾಜ್ಯ ಆರೋಗ್ಯ ಘಟಕ…