ಉತ್ತರಪ್ರಭ ಸುದ್ದಿ

ಗದಗ: ಪ್ರಧಾನ ಮಂತ್ರಿ ಕೃಷಿ ಸನ್ಮಾನ ನಿಧಿ ಯೋಜನೆಯಡಿ ಮುಂದಿನ ಕಂತುಗಳನ್ನು ರೈತರ ಆರ್ಥಿಕ ನೆರವಿಗಾಗಿ ರೈತ ಬಾಂಧವರು ಇ- ಕೆವೈಸಿ ಮಾಡಿಸಲು ಸೆಪ್ಟೆಂಬರ್ 7 ರ ವರೆಗೆ ವಿಸ್ತರಿಸಿ ಅಂತಿಮ ಗಡುವು ನೀಡಲಾಗಿದೆ. ಸೆಪ್ಟೆಂಬರ್ 7 ರ ಒಳಗಾಗಿ ಇ – ಕೆವೈಸಿ ಮಾಡಿಸಿಕೊಂಡು ರೈತರಿಗೆ ಮಾತ್ರ ಸೆಪ್ಟೆಂಬರ್ 15 ರಂದು ಮುಂದಿನ ಕಂತು ಬಿಡುಗಡೆ ಮಾಡಲಾಗುವುದು.

ಈ ದಿನಾಂಕದೋಳಗೆ ಎಲ್ಲಾ ರೈತ ಬಾಂಧವರು ಕೂಡಲೇ ಇ – ಕೆವೈಸಿಯಲ್ಲಿ ರೈತರು ತಮ್ಮ ಆಧಾರ ಸಂಖ್ಯೆ ಯೊಂದಿಗೆ ಜೋಡಣೆ ಯಾಗಿರುವ ಮೋಬೈಲ್ ಸಂಖ್ಯೆಯನ್ನು ದಾಖಲಿಸಿ ಒಟಿಪಿ ಮುಖಾಂತರ ಇ- ಕೆವೈಸಿ ಮಾಡಿಸಬಹುದು. ಹಾಗೂ ತಮ್ಮ ಹತ್ತಿರ  ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ನಾಗರಿಕ ಸೇವಾ ಕೇಂದ್ರ, ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ  ಇ- ಕೆವೈಸಿ ಮಾಡಿಸಿಕೋಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಗದಗ ಬೆಟಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡದ ರೈತ ಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 1498 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 1498 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 26815 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 571. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 11098 ಕೇಸ್ ಗಳು. ರಾಜ್ಯದಲ್ಲಿ 15297 ಸಕ್ರೀಯ ಪ್ರಕರಣಗಳಿವೆ.

ಕೋವಿಡ್-19 ನಿಯಂತ್ರಣ : ಜಿಲ್ಲೆಯಲ್ಲಿ 2 ವಾರ ಪ್ರತಿಬಂಧಕಾಜ್ಞೆ ಮುಂದುವರಿಕೆ

ಕೋವಿಡ್ -19 ಹರಡದಂತೆ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದನ್ವಯ ಮುಂದಿನ ಎರಡು ವಾರಗಳವರೆಗೆ ನಿಗದಿತ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚಾರ ನಿಷೇಧಿಸಿದೆ.

ರೋಣದಲ್ಲಿ ಭೀಕರ ಅಪಘಾತ, ಕಾರ ಬ್ಲಾಸ್ಟ್ : 3 ಜನರ ಸಾವು

ಉತ್ತರಪ್ರಭರೋಣ: ರೋಣದಿಂದ ಹೊರಟ್ಟಿದ್ದ ಕಾರು ನಿಯಂತ್ರಣ ತಪ್ಪಿ ಗಿಡಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ…