ಬೋಧನಾ ಕೌಶಲ್ಯ ಪ್ರೇರಣಾತ್ಮಕವಾಗಿರಲಿ ಡಿಡಿಪಿಐ ಎನ್.ವಿ.ಹೊಸೂರ ಅಭಿಮತ
ವರದಿ : ಗುಲಾಬಚಂದ ಜಾಧವ
ವಿಜಯಪುರ:
ಕಾಲಚಕ್ರಗಳು ಬದಲಾದಂತೆ ಸಮಾಜದಲ್ಲಿ ವ್ಯವಸ್ಥೆಗಳು ಬದಲಾಗುತ್ತಲ್ಲಿವೆ. ಹೊಸ ಶಿಕ್ಷಣ ವ್ಯವಸ್ಥೆಯಲ್ಲಿಗ ಅಮೂಲಾಗ್ರ ನವನಾವಿನ್ಯ ಕೌಶಲ್ಯಗಳ ಪರಧಿಗಳಿವೆ. ಆ ದಿಸೆಯಲ್ಲಿ ಮಕ್ಕಳನ್ನು ಸಶಕ್ತ ವಿದ್ಯಾವಂತರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿದೇ೯ಶಕ ಎನ್.ವಿ.ಹೊಸೂರ ನುಡಿದರು.
ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ) ಸಭಾಭವನದಲ್ಲಿ ಜಿಲ್ಲಾ ಸರಕಾರಿ ಚಿತ್ರಕಲಾ ಶಿಕ್ಷಕರ ಸಂಘಟನೆ ಆಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಚಿತ್ರಕಲಾ,ಸಂಗೀತ, ವೃತ್ತಿ ವಿಶೇಷ ಶಿಕ್ಷಕರಿಗಾಗಿ ಆಯೋಜಿಸಿದ್ದ ಎನ್.ಇ.ಪಿ.2020 ಹಾಗು ಕಲಿಕಾ ಚೇತರಿಕೆ ಕಾರ್ಯಕ್ರಮದ ಪರಿಕಲ್ಪನೆ ಮೂಡಿಸುವ ಒಂದು ದಿನದ ಕಾಯಾ೯ಗಾರದಲ್ಲಿ ಮಾತನಾಡಿದ ಅವರು, ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಶಿಕ್ಷಕರ ಪಾತ್ರ ಬಹು ಅಮೂಲ್ಯ ಅಗಿದೆ ಎಂದರು.


ವಿಶೇಷ ಶಿಕ್ಷಕರು ಮೊದಲು ಹಿಂಜರಿಕೆ, ಕೀಳರಮೆ ಭಾವ ತೋರೆಯಬೇಕು.‌ಶಿಕ್ಷಣ ವ್ಯವಸ್ಥೆಯಲ್ಲಿ ಆಸಕ್ತಿಯಿಂದ ಕೆಲಸ ನಿರ್ವಹಿಸಿ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಮುಂದಾಗಬೇಕು. ಮಕ್ಕಳಿಗಾಗಿ ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಆತ್ಮತೃಪ್ತಿಯುಳ್ಳ ಮೌಲ್ಯಯುತ ಪಾಠ ಧನಾತ್ಮಕತೆಯಿಂದ ಮಾಡಬೇಕು. ತಮ್ಮಲ್ಲಿನ ಬೋಧನಾ ಕೌಶಲ್ಯ ವರ್ಗಕೊಣೆಗಳಲ್ಲಿ ಸಾದರಪಡಿಸಿ ಮಕ್ಕಳಲ್ಲಿ ಕಲಿಕಾ ಚೇತರಿಗೆ ಮೂಡಿಸಬೇಕು. ಗುರುಗಳು ಮೊದಲು ಚೇತರಿಕೆವಾದರೆ ಇಡೀ ಕ್ಲಾಸ್ ರೂಮ್ ಚೇತರಿಗೊಳ್ಳುತ್ತದೆ.ವಿಶೇಷ ಶಿಕ್ಷಕರ ವಿಶಿಷ್ಟ ಕಲೆಗಳು ಬಹಳಷ್ಟು ಅರ್ಥಪೂರ್ಣ ವಿಷಯಗಳಾಗಿವೆ. ಮಕ್ಕಳಿಗೆ ಎಲ್ಲ ವಿಷಯಗಳು ಮಹತ್ವಪೂರ್ಣವಾಗಿವೆ. ನಿಮ್ಮ ಹೊಣೆಗಾರಿಕೆ ಸಮರ್ಪಕವಾಗಿ ನಿಭಾಯಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದ ಅವರು,ಅಜೀಂ ಪ್ರೇಮಜೀ ಫೌಂಡೇಶನ್ ಎನ್.ಜಿ.ಓ.ಸಂಸ್ಥೆ ಶಿಕ್ಷಣ ರಂಗದ ಒಲವು ಹೊಂದಿ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಯಾ೯ಗಾರಕ್ಕೆ ಚಾಲನೆ ನೀಡಿದ ಡಯಟ ಪ್ರಭಾರಿ ಪ್ರಾಚಾರ್ಯ ಎಸ್.ಎ. ಮುಜಾವರ, ಕಲಿಕೆಯಿಂದ ದೂರುಳಿದ ಮಕ್ಕಳಲ್ಲಿ ಪುನಃ ಕಲಿಕಾಂಶ ಭರಿಸಲು ಕಲಿಕಾ ಚೇತರಿಕೆ ಪೂರಕವಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಮಕ್ಕಳಲ್ಲಿ ಒಂದಿಲ್ಲೊಂದು ಕಲಿಕಾ ಹಿನ್ನಡೆ, ನಷ್ಟ ಉಂಟಾಗಿದೆ. ಸುಮಾರು 5 ಕೋಟಿ ಮಕ್ಕಳಲ್ಲಿ ಕಲಿಕಾ ಕೊರತೆ ಎದ್ದು ಕಾಣುತ್ತಿದೆ ಎಂಬುದು ಅಜೀಂ ಪ್ರೇಮ್ ಫೌಂಡೇಶನ್ ಸಂಸ್ಥೆ ಮಾಡಿರುವ ಸವೆ೯ಯಿಂದ ತಿಳಿದು ಬಂದಿರುವ ಅಂಶ ಕಳವಳಕಾರಿಯಾಗಿದೆ. ಅದಾಗ್ಯೂ ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಕಲಿಕಾ ಅಂಶಗಳನ್ನು ಹೊರೆಯಾಗದಂತೆ ಆದರ್ಶವಾಗಿ ಬಿಂಬಿಸಲಾಗಿದೆ. ಪರಿಣಾಮ ಇಂದು ಮಕ್ಕಳಿಗೆ ಅನುಭವನಾತ್ಮಕವಾಗಿ ಕಲಿಕಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೋಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಮಕ್ಕಳ ಕಲಿಕೆಗೆ ಯಾವುದೇ ನಿರ್ಬಂಧಗಳಿಲ್ಲ. ಸ್ವವೇಗದಲ್ಲಿ ಕಲಿಕಾ ಸ್ವಯಂ ಸಾಮಥ್ರ್ಯದ ಕಲ್ಪನೆಯಿಂದ ಮುಂದೆ ಬರಲು ಮಕ್ಕಳಿಕೆ ಪ್ರಫುಲ್ ಅವಕಾಶ ಕಲ್ಪಿಸಲಾಗಿದೆ ಎಂದರು.
ಅಜೀಂ ಪ್ರೇಮಜೀ ಫೌಂಡೇಶನ್ ರಾಜ್ಯ ಸಂಪನ್ಮೂಲ ವ್ಯಕ್ತಿ ಓಂ ಪ್ರಕಾಶ ಗುಪ್ತಾ, ಕಲಿಕಾ ಚೇತರಿಕೆಯ ಗುರಿ, ಉದ್ದೇಶ, ವಿದ್ಯಾರ್ಥಿ,ಶಿಕ್ಷಕ ಹಾಗು ಪಾಲಕರ ಸಹಭಾಗಿತ್ವದಲ್ಲಿ ವಿಶೇಷ ಶಿಕ್ಷಕರ ಹೊಣೆಗಾರಿಕೆ ವಿವರ ಮಾಹಿತಿ ಪಿಪಿಟಿಯೊಂದಿಗೆ ಚಚಿ೯ಸಿದರು.
ಡಯಟಿನ ಹಿರಿಯ ಉಪನ್ಯಾಸಕ ಡಾ.ಅಶೋಕ ಲಿಮಕರ, ಪ್ರಸ್ತುತ ಶೈಕ್ಷಣಿಕ ವರ್ಷ ಕಲಿಕಾ ಚೇತರಿಕೆ ವರ್ಷವಾಗಿದೆ. ಮಕ್ಕಳಿಗೆ ಇದೀಗ ಅಗಿರುವ ವಿದ್ಯಾನಷ್ಟ ತುಂಬಬೇಕಾಗಿದೆ. ಕನಿಷ್ಠ ಮಟ್ಟದ್ದಾದರೂ ಅಗತ್ಯ ಸಾಮಥ್ರ್ಯಗಳು ಮಕ್ಕಳಿಗೆ ಲಭಿಸಬೇಕು. ಮಕ್ಕಳ ಕಲಿಕೆಗೆ ಅದು ಭಾವನಾತ್ಮಕವಾಗಿ ದೊರೆಯಬೇಕು. ಮಾನಸಿಕವಾಗಿ ಉತ್ತೇಜಿಸುವ ಕಾಯಕದಲ್ಲಿ ಗುರುಬಳಗ ಸಿದ್ದರಾಗಬೇಕು. ಹೊಸ ಶಿಕ್ಷಣದ ಒಳ ಹೊರ ನೀತಿ ಅಥೈ೯ಸಿಕೊಂಡು ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಅಣಿಗೊಳ್ಳಬೇಕು ಎಂದ ಅವರು, ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಗಳ ಅನುಷ್ಠಾನದಲ್ಲಿ ತಮ್ನೆಲ್ಲರ ವಿಶೇಷ ಶಿಕ್ಷಕರ ಪಾತ್ರ ಹಿರಿಮೆಯದಾಗಿದೆ ಎಂದರು.
ರಾಜ್ಯ ಸಂಪನ್ಮೂಲ ವ್ಯಕ್ತಿ, ಸಂಯೋಜಕ ಮಂಜುನಾಥ್ ಮಾನೆ, ಜಿಲ್ಲೆಯ ವಿಶೇಷ ಶಿಕ್ಷಕರಿಗೆ ವಿಶೇಷ ಯೋಜನೆಗಳ ಪರಿಕಲ್ಪನೆಯ ಮಾಹಿತಿ ಒದಗಿಸುವ ಹಾಗು ಸಾಂಕೇತಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಯಾ೯ಗಾರ ಸಂಯೋಜಿಸಲಾಗಿದೆ ಎಂದರು. ಪಿಪಿಟಿ ಮೂಲಕ ಎನ್.ಇ.ಪಿ. 2020 ರ ಹಿನ್ನೋಟ,ಮುನ್ನೋಟ ಹಾಗು ಪ್ರಮುಖ ಅಂಶಗಳ ಎನ್.ಇ.ಪಿ.ಗುರಿ, ಉದ್ದೇಶ ಹಾಗು ಸಫಲತೆಯ ಮೇಲೆ ವಿಸ್ತೃತ ಬೆಳಕು ಅವರು ಚೆಲ್ಲಿದರು.
ಕಾಯಾ೯ಗಾರದಲ್ಲಿ ಜಿಲ್ಲೆಯ 158 ಕ್ಕೂ ಹೆಚ್ಚು ವಿಶೇಷ ಶಿಕ್ಷಕರು ಪಾಲ್ಗೊಂಡು ಶೈಕ್ಷಣಿಕ ಮಾಹಿತಿ ವಿನಿಮಯ ಮಾಡಿಕೊಂಡರು. ‌
ಡಯಟಿನ ಉಪನ್ಯಾಸಕ ಹಿರೇಮಠ, ದೊಡ್ಡಗಿ, ರವೀಂದ್ರ ಯಲ್ಲಡಗಿ, ವೃತ್ತಿ ಶಿಕ್ಷಣ ವಿಭಾಗದ ರಾಠೋಡ ಇತರರಿದ್ದರು.
ಮುರಳೀಧರ ಭಜಂತ್ರಿ ಪ್ರಾಥಿ೯ಸಿದರು. ಜೆ.ಎಂ.ಹೊನ್ನಳಿ ನಿರೂಪಿಸಿದರು. ಸಂಯೋಜಕ ಮಂಜುನಾಥ್ ಮಾನೆ ಕಾಯಾ೯ಗಾರ ಅಚ್ಚುತನದಿಂದ ನಿರ್ವಹಿಸಿದರು.

Leave a Reply

Your email address will not be published. Required fields are marked *

You May Also Like

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ಬಾಲೆ ಸೃುಷ್ಟಿ ಜಾಧವ

ಉತ್ತರಪ್ರಭವಿಜಯಪುರ: ಅವಳಿಗೆ ಅಜ್ಜಿಯಂದರೆ ಪ್ರಾಣ. ಕಾಕಾ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಅಕ್ಕರೆಯ ಸಿಹಿ ಸಿಂಚನದ…

ಆಲಮಟ್ಟಿಯಲ್ಲಿ ಆದ್ದೂರಿ ವಾಷಿ೯ಕ ಸ್ನೇಹ ಸಮ್ಮೇಳನ- ಮನರಂಜನಾ ಲೋಕ ಅನಾವರಣ ಸಾಂಸ್ಕೃತಿಕ ಕಲರವ…ಮಕ್ಕಳ ಸಂಭ್ರಮ..!

ವರದಿ: ಗುಲಾಬಚಂದ ಜಾಧವಆಲಮಟ್ಟಿ : ಇಲ್ಲಿನ ಎಸ್.ವ್ಹಿ. ವ್ಹಿ ಸಂಸ್ಥೆಯಡಿಯಲ್ಲಿನ ವಿವಿಧ ಶಾಲಾ,ಕಾಲೇಜುಗಳ ವಾಷಿ೯ಕ ಸ್ನೇಹ…

ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಗದಗ: ಶ್ರೀ ವೆಂಕಟೇಶ್ವರ ಪ್ರೌಡ್ ಶಾಲೆ ಬೇಳಧಡಿ ಯಲ್ಲಿ ಸನ್ 1995-1996 ನೇ ಸಾಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ…

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2021-22ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ…