ಉತ್ತರಪ್ರಭ
ಆಲಮಟ್ಟಿ: ಸ್ಥಳೀಯ ಎಂ.ಎಚ್.ಎಂ.ಪ.ಪೂ. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಟಿ.ಬಿ.ಕರದಾನಿ ಅವರ ಪುತ್ರಿ ಚೈತನ್ಯ ಕರದಾನಿ ಚಿತ್ರಕಲೆಯಲ್ಲಿ ಮಿನುಗಿದ್ದಾಳೆ.
ದಾವಣಗೆರೆಯಲ್ಲಿ ಈಚೆಗೆ ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಚಿತ್ರಸಂತೆಯಲ್ಲಿ ಚೈತನ್ಯ ಕರದಾನಿ ಬಿಡಿಸಿದ ಪರಿಸರ ಕುರಿತಾದ ನಿಸರ್ಗ ಚಿತ್ರ ಆಯ್ಕೆಗಾರರ ಮನ ಸೆಳೆದು ದ್ವೀತಿಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ದ್ವೀತಿಯ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ ಹಾಗು ₹ 1000 ನಗದು ಬಹುಮಾನ ಈ ಪ್ರತಿಭಾನ್ವಿತ ಬಾಲಿಕೆಗೆ ನೀಡಿ ಪ್ರೋತ್ಸಾಹಿಸಲಾಗಿದೆ.

ಬಾಲ್ಯದಿಂದಲೇ ಕಲಾಸಕ್ತಿ ಮೈಗೊಡಿಸಿಕೊಂಡಿರುವ ಚೈತನ್ಯ ಸದ್ಯ ಗದಗ ಜಿಲ್ಲೆಯ ಹುಲಕೊಟಿಯ ಶ್ರೀ ರಾಜೇಶ್ವರಿ ವಿದ್ಯಾ ನಿಕೇತನ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲೆಯ ಸಾಧನೆಗೆ ಶಾಲಾ ಸಿಬ್ಬಂದಿ ಹಾಗು ಕಲಾಸಕ್ತರು ಅಭಿನಂದಿಸಿದ್ದಾರೆ.