ಉತ್ತರಪ್ರಭ
ಆಲಮಟ್ಟಿ:
ಜಿಲ್ಲೆಯ ಎಲ್ಲ ಏತ ನೀರಾವರಿ ಯೋಜನೆಗಳ ವ್ಯಾಪ್ತಿಗೆ ಬರುವ ಎಲ್ಲಾ ಕಾಲುವೆಗಳಿಗೆ ಏಪ್ರಿಲ್ 30ರ ವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬರುವ ಸೋಮವಾರದಿಂದ ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಬೇಕಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.


ಆಲಮಟ್ಟಿಯಲ್ಲಿ ಅಖಂಡ ಕನಾ೯ಟಕ ರೈತ ಸಂಘದ ಆಶ್ರಯದಲ್ಲಿ ಸಂಘದ ಕಾರ್ಯಕರ್ತರು ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಬುಧವಾರದಿಂದ ಆರಂಭಿಸಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು ಆ ಧರಣಿಯಲ್ಲಿ ರೈತರನ್ನುದ್ದೇಶಿಸಿ ಅವರು ಮಾತನಾಡಿದರು.
ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯವಿದೆ. ನಾವೇನು ನಿಮಗೆ ಭಿಕ್ಷೆ ಕೇಳುತ್ತಿಲ್ಲ. ಆಣೆಕಟ್ಟು ನಿರ್ಮಿಸಿರುವುದು ರೈತರಿಗಾಗಿ ನೀರಿನ ಮೇಲೆ ರೈತರಿಗೆ ಸಂಪೂರ್ಣ ಹಕ್ಕಿದೆ. ಈ ಸದ್ಯ ನೀರು ಕೊಡುವುದಿಲ್ಲ ಎನ್ನುವುದಕ್ಕೆ ಇವರ್ಯಾರು ? ರೈತರಿಂದಲೇ ಆಯ್ಕೆಯಾಗಿ ಹೋದವರು ಇವರು. ರೈತರ ಹಾಗೂ ಜನಸಾಮಾನ್ಯರ ಬೇಡಿಕೆಗೆ ಸ್ಪಂದಿಸುವುದು ಇವರ ಕರ್ತವ್ಯ. ಒಂದು ವೇಳೆ ನೀರು ಹರಿಸಲು ಪ್ರಾರಂಭಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ಕೂಡಬೇಕಾಗುತ್ತದೆ. ರೈತರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಹಂತಗಳ ನೆಪ ಹೇಳದೆ ಎಟಿಎಂ ತರಹ ನೀರು ಕೊಡಬೇಕು ಎಂದು ಅವರು ಖಡಾತುಂಡವಾಗಿ ಆಗ್ರಹಿಸಿದರು.

ಧರಣಿಗೆ ಇಂಗಳೇಶ್ವರ ರೈತರ ಬೆಂಬಲ: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಎರಡನೇ ದಿನ ಧರಣಿಗೆ ಇಂಗಳೇಶ್ವರ ಗ್ರಾಮದ ರೈತರು ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದರು. ರೇವಣಸಿದ್ದ ದಳವಾಯಿ ಮಾತನಾಡಿ, ಈ ಸದ್ಯ ರೈತರಿಗೆ ನೀರು ಅಗತ್ಯವಿದ್ದು ಬೇಸಿಗೆ ಸಂದರ್ಭದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯವಿದೆ. ಕೂಡಲೇ ಕಾಲುವೆಗೆ ನೀರು ಹರಿಸಿ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು. ಹಾಗೂ ಬೇಸಿಗೆಯ ಬೆಳೆಗಳಿಗೆ ನೀರಿನ ಅನುಕೂಲತೆ ಕಲ್ಪಿಸಬೇಕೆಂದು ಆಗ್ರಹಿಸಿದರು. ಒಂದು ವೇಳೆ ಹೋರಾಟಕ್ಕೆ ಸ್ಪಂದಿಸದಿದ್ದರೆ ನೂರಾರು ರೈತರು ಬೆನ್ನಿಗೆ ಬೆಂಬಲ ನೀಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎರಡನೇ ದಿನದ ಧರಣಿಯಲ್ಲಿ ರೈತ ಮುಖಂಡರಾದ ವಿಠ್ಠಲ ಬಿರಾದಾರ, ಎಸ್.ಎಂ.ಬೂದಿಹಾಳ, ಯಲ್ಲಪ್ಪ ಮನ್ಯಾಳ, ಅಂಬರೀಶ ಚಿಕ್ಕಮಠ, ಸಿದ್ದಲಿಂಗಪ್ಪ ಬಿರಾದಾರ, ಚನಬಸಪ್ಪ ಸಿಂಧೂರ, ಮಲ್ಲಪ್ಪ ಮಾಡ್ಯಾಳ, ರಾಜೇಸಾಬ ವಾಲಿಕಾರ, ಅಂಬಣ್ಣ ಹಡಪದ, ಗುರಲಿಂಗಪ್ಪ ಪಡಸಲಗಿ, ಶಿವಪ್ಪ ಸುಂಗಠಾಣ, ಚನ್ನಪ್ಪ ನಾಟೀಕಾರ, ಸೋಮಯ್ಯ ಇಂಬ್ರಾಹಿಂಪೂರ, ಮೇಲಪ್ಪ ಹರಿಜನ, ಸಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ಅಪ್ಪು ಪತಂಗೆ, ಸಿದ್ದು ಬೊಮ್ಮನಳ್ಳಿ, ಉಮೇಶ ಹಡಪದ, ಶಂಕರ ಹದಿಮೂರ, ದಿಲೀಪ ಯಾಳವಾರ, ರಾಉ ಕಾರಬಾರಿ ಅರವಿಂದ ಕುಲಕರ್ಣಿ, ಹೋರಾಟಗಾರರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ರೈತನ ಬಾಳು ಕಣ್ಣೀರಿನ ಗೋಳಾಗಿದೆ

ಭಾರತ ಹಳ್ಳಿಗಳ ದೇಶ, ಕೃಷಿಯನ್ನೇ ಅವಲಂಭಿಸಿ ದೇಶದಅಂದಾಜು ಶೇ.67 ರಷ್ಟು ಜನಸಂಖ್ಯೆ ಬದುಕುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆ ಬೆಲೆ ಬಾರದೇ ರೈತನ ಬಾಳು ಕಣ್ಣಿರಿನ ಗೋಳಾಗಿದೆ.

ಆಕಸ್ಮಿಕ ಬೆಂಕಿಗೆ ಬಣಿವೆ ಭಸ್ಮ

ವರದಿ: ವಿಠಲ ಕೆಳೂತ್ಮಸ್ಕಿ: ತಾಲೂಕಿನ ಜಕ್ಕೇರಮಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೇವಿನ ಬಣಿವೆ ಸುಟ್ಟು…

ನರೇಗಲ್, ಹೊಳೆಯಾಲೂರು ಹೋಬಳಿ: ರೈತರಿಂದ ತಾಡಪತ್ರಿಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆಯಿಂದ ನರೇಗಲ್ ಹಾಗೂ ಹೊಳೆಆಲೂರ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಲಾಟರಿ ಮುಖಾಂತರ ತಾಡಪತ್ರಿಗಳನ್ನು ವಿತರಿಸಲು ಅರ್ಜಿ ಕರೆಯಲಾಗಿದೆ.

ತೋಟಗಾರಿಕೆ ಬೆಳೆಗಳಿಗೆ ವಿಮಾ ಕಂತು ಪಾವತಿಗೆ ಜೂನ್ 30 ಕೊನೆಯ ದಿನ

ಪ್ರಸಕ್ತ ಸಾಲಿನ ಮುಂಗಾರು ಅವಧಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ದಾಳಿಂಬೆ ಮತ್ತು ಪಪ್ಪಾಯ (ಪರಂಗಿ) ಬೆಳೆಗೆ ವಿಮೆ ಸೌಲಭ್ಯ ಅಂತಿಮಗೊಳಿಸಲಾಗಿದ್ದು, ಬಜಾಜ್ ಅಲೆನ್ಸ್ ಇನ್ಸೂರೆನ್ಸ ಕಂಪನಿ ವಿಮೆ ನೀಡಲಿದೆ.