ವರದಿ : ಗುಲಾಬಚಂದ ಜಾಧವ
ಆಲಮಟ್ಟಿ : ಧಾಮಿ೯ಕತೆಯ ವೈಚಾರಿಕ ನೆಲೆಯಿಂದ ಎಲ್ಲರನ್ನೂ ಪ್ರೀತಿಯಿಂದ ಕಂಡಿರುವ ಲಿಂಗೈಕ್ಯ ತೋಂಟದ ಡಾ.ಸಿದ್ದಲಿಂಗ ಶ್ರೀಗಳು ಅಕ್ಷರ ದಾಸೋಹದ ಕೈಂಕರ್ಯ ಪ್ರಾಂಜಲ್ಯ ಮನದಿಂದ ಗೈದಿದ್ದಾರೆ. ಪೂಜ್ಯರ ಕೃಪೆಯಿಂದ ರಾಜ್ಯದ ವಿವಿಧೆಡೆ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ಶೈಕ್ಷಣಿಕ ಪ್ರಗತಿ ಪಥದಲ್ಲಿಂದು ಸಾಗುತ್ತಲ್ಲಿವೆ ಎಂದು ಗದುಗಿನ ತೋಂಟದಾರ್ಯ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್.ಎಸ್.ಪಟ್ಟಣಶೆಟ್ಚರ ಹೇಳಿದರು.
ಇಲ್ಲಿನ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾಷಿ೯ಕ ಸ್ನೇಹ ಸಮ್ಮೇಳನದಲ್ಲಿ ಉಪನ್ಯಾಸಕ ಬಳಗ ನೀಡಿದ ಗೌರವ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.
ರಾಜ್ಯದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಧಾಮಿ೯ಕ ದಾಸೋಹದೊಂದಿಗೆ ಮಕ್ಕಳ ಅಕ್ಷರ ಜ್ಞಾನದ ಹಸಿವು ಶ್ರೀಗಳು ನೀಗಿಸಿದ್ದಾರೆ ಎಂದರು.


ವೈಚಾರಿಕ ಭಾವೋದ್ರೇಕ ಹುಮ್ಮಸ್ಸು ಸೃಜನಶೀಲವಾಗಿ ಸಮಾಜದಲ್ಲಿ ಸೃಷ್ಟಿಸಿರುವ ಶ್ರೀಗಳು ಸಾಗಿಬಂದ ದಾರಿಯ ಹೆಜ್ಜೆ ಗುರುತುಗಳು ಅಪರೂಪ.ಅವು ಎಂದೆಂದಿಗೂ ಮರೆಯಲಾಗದು. ಮೆಲುಕು ಹಾಕುವುದೇ ನಮ್ಮೆಲ್ಲರ ಭಾಗ್ಯ. ಅಗಲಿರುವ ಪೂಜ್ಯರು ಬೆಳಕಿನಷ್ಟೆ ಸತ್ಯ. ಶ್ರೀಗಳ ಸಮಾಜಮುಖಿ ಕಥಾ ಹಂದರ ವಣಿ೯ಸಲಾಸಾಧ್ಯ.ಶಿಕ್ಷಣದ ಬಗೆಗೆ ಹೊಂದಿದ್ದ ಅಪಾರ ಕಳಕಳಿ, ಪ್ರೇಮದಿಂದ ನಾವುಗಳು ಲಿಂ,ಸಿದ್ದಲಿಂಗ ಶ್ರೀಗಳ ವ್ಯಕ್ತಿತ್ವ ಪ್ರಭಾವ ಎಂಥದ್ದು ಎಂಬುದುನ್ನು ಅರಿಯಬಹುದು ಎಂದರು.


ಆಜ್ಞಾತ ಮಹಾತ್ಮ ಶರಣ ಮಂಜಪ್ಪ ಹಡೇ೯ಕರ ಜೀವನ ಚರಿತ್ರೆ ರೋಚಕವಾಗಿದೆ.ಎಲ್ಲರೂ ಅರಿಯಬೇಕು. ಗಾಂಧಿಯವರ ಆದರ್ಶವನ್ನಾಗಿಸಿಕೊಂಡು ಸನ್ಯಾಸಿ ಜೀವನ ಸ್ವೀಕರಿಸಿ ಗೈದ ಅಪೂರ್ವ ಕೊಡುಗೆಗಳು ಅನನ್ಯವಾಗಿವೆ. ಈ ಪುಣ್ಯ ಪುರುಷನ ಆಸ್ಥಿಪಂಜರ ಸ್ಥಳಾಂತರ ಮಾಡಿದ್ದು ಒಂದು ಐತಿಹ್ಯ. ಲಿಂ.ಸಿದ್ದಲಿಂಗ ಶ್ರೀಗಳು ತೋರಿದ ಅಭಿಮಾನದಿಂದ ಈ ಕಾರ್ಯ ಅಂದು ಐತಿಹಾಸಿಕವಾಗಿ ನಡೆದಿದೆ. ಬುದ್ದನ ಆಸ್ಥಿಪಂಜರ ಬಿಟ್ಟರೆ ಮಂಜಪ್ಪನವರ ಆಸ್ಥಿಪಂಜರ ಸ್ಥಳಾಂತರ ಮಾಡಿದ್ದು ದೇಶದಲ್ಲೇ ಎರಡನೆಯದ್ದು.ಇಲ್ಲಿ ಕೃಷ್ಣೆಯ ಹಿನ್ನೀರಿನಲ್ಲಿ ಮೂಳುಗಿ ಅವಸಾನದ ಅಂಚಿನಲ್ಲಿದ್ದ ಮಂಜಪ್ಪನವರ ಸಮಾಧಿಯಲ್ಲಿದ್ದ ಆಸ್ಥಿಪಂಜರ ರಕ್ಷಿಸಲಾಗಿದೆ. ಆಲಮಟ್ಟಿಯಲ್ಲಿ ಸಮಾಧಿ ಸ್ಥಳಾಂತರಿಸಿ ಭವ್ಯ ಸ್ಮಾರಕ ನಿಮಿ೯ಸಿಲಾಗಿದ್ದು ಇತಿಹಾಸದ ಪುಟಗಳಲ್ಲಿ ಸೇರಿದೆ. ಈ ಕ್ರಾಂತಿಕಾರಕ ಕೆಲಸ ಸಿದ್ದಲಿಂಗ ಪೂಜ್ಯರಿಂದ ಅಗಿದೆ. ಮಂಜಪ್ಪನವರಿಗೆ ಹಾಗು ವಚನ ಪಿತಾಮಹ ಫ.ಗು.ಹಳಕಟ್ಟಿಯವರಿಗೆ ಸಿದ್ದಲಿಂಗ ಶ್ರೀಗಳು ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದರು.


ಸರ್ವ ಸಮಾಜದವರೊಂದಿಗೆ ಒಳ್ಳೆಯ ಅನನ್ಯತೆಯ ಬಾಂಧವ್ಯ ಹೊಂದಿ ಸಮಾಜದ ಕಣ್ಣಾಗಿದ್ದ ಶ್ರೀಗಳು ನಮ್ಮ ಜತೆಗಿಲ್ಲ ಎಂಬುದೇ ಕೊರಗು. ಅವರು ಹಾಕಿ ಕೊಟ್ಟಂಥ ತತ್ವಾದರ್ಶಗಳ ಮಾರ್ಗ ಸದಾಕಾಲವೂ ಅಜರಾಮರ. ಎಲ್ಲರೂ ನೆನೆಯಲೇ ಬೇಕು ಎಂದು ಪೂಜ್ಯರ ಗುಣಗಾನ ಬಣ್ಣಿಸಿ ಸ್ಮರಿಸಿಕೊಂಡರು.
ಧಾಮಿ೯ಕ, ಸಾಮಾಜಿಕ ಕ್ಷೇತ್ರದಲ್ಲಿ ತನುಮನದಿಂದ ನಿರ್ವಹಿಸಿದ ಕೆಲಸಗಳು ಜನಾನುರಾಗಿವೆ. ಅವರೊಂದಿಗಿನ ತಮ್ಮ ಒಡನಾಟ ಉಸಿರಿನಲ್ಲಿ ಸ್ಮರಣೀಯವಾಗಿ ಬೆರೆತಿವೆ. ಗ್ರಾಮೀಣ ಭಾಗದಲ್ಲಿನ ಬಡ ವಿದ್ಯಾರ್ಥಿಗಳು ಆಥಿ೯ಕ ಸಬಲತೆ ಹೊಂದದೇ ಇರದ ಕಾರಣ ಅವರ ಶಿಕ್ಷಣ ಅನಾನುಕೂಲತೆಯಿಂದ ಶಿಕ್ಷಣ ಕುಂಠಿತವಾದಿತು. ಜೀವನದಲ್ಲಿ ಯಾವುದು ಶಾಶ್ವತವಲ್ಲ.ಒಳ್ಳೆಯ ಕೆಲಸಗಳೇ ಉಳಿಯುವುದು ಎಂಬ ಸದುದ್ದೇಶದಿಂದ ಬಡ ಮಕ್ಕಳಿಗೆ ಧ್ವನಿಯಾಗಿ ಶೈಕ್ಷಣಿಕ ಸಂಸ್ಥೆ, ಕಟ್ಟಡಗಳನ್ನು ಸ್ಥಾಪಿಸಲು ಪ್ರೇಪಿಸಿದ್ದಾರೆ. ಆಲಮಟ್ಟಿಯಲ್ಲೂ ಪೂಜ್ಯರ ಕೃಪೆಯಿಂದ ಸುಂದರ ಶಾಲಾ,ಕಾಲೇಜುಗಳ ಕಟ್ಟಡಗಳು ಕಂಗೋಳಿಸುತ್ತಲ್ಲಿವೆ. ಬ್ರಹತ್ ಕಾಂಪೌಂಡ್ ನಿಮಿ೯ಸಲಾಗಿದೆ. ಶರಣರ,ದಾರ್ಶನಿಕರ ಈ ಪುಣ್ಯ ಭೂಮಿಯಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯುತ್ತಲ್ಲಿದೆ ಎಂದು ಅವರು ಹೇಳಿದರು.


ಶಾಲಾ,ಕಾಲೇಜುಗಳ ಗುಣಮಟ್ಟಕ್ಕಾಗಿ ಇಲ್ಲಿ ಮೂಲಭೂತ ಸೌಕರ್ಯಗಳನ್ನು ಸಂಸ್ಥೆಯಿಂದ ಕಲ್ಲಿಸಲಾಗಿದೆ. ಕೊಠಡಿಗಳ ಸ್ಥಿತಿಗತಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಸ್ಮಾಟ್೯ಕ್ಲಾಸ್ ಕಂಪ್ಯೂಟರ್ ಗಳ ಪ್ರತ್ಯೇಕ ಕೊಠಡಿ,ಡಿಜಿಟಲ್ ಕ್ಲಾಸ್ ರೂಂ ಸೌಲಭ್ಯ, ಮಕ್ಕಳಿಗೆ ಆಸನದ ಡೆಸ್ಕ್ ವ್ಯವಸ್ಥೆ,ಆಟದ ಮೈದಾನ, ಹೀಗೆ ಹಲವಾರು ಸೌಲಭ್ಯಗಳನ್ನು ಕಲ್ಲಿಸಲಾಗಿದ್ದು ಇಲ್ಲಿನ ಅರಣ್ಯ ಇಲಾಖೆಯ ಸಹಕಾರದಿಂದ ಶಾಲಾವರಣದ ಕ್ಯಾಂಪಸ್ ಗಿಡ,ಮರ,ಸಸ್ಯಗಳ ಹಸಿರು ಶ್ಯಾಮಲೆಯಿಂದ ಶಿಕ್ಷಣ ಪ್ರೇಮಿಗಳ ಗಮನ ಸೆಳೆಯುತ್ತಿವೆ. ಉತ್ತಮ ಶಿಕ್ಷಣಕ್ಕಾಗಿ ಈ ಪ್ರಾಕೃತಿಕ ಹಸಿರು ಪರಿಸರ ಪೂರಕವಾಗಿದೆ. ಗುಣಾತ್ಮಕ ಕಲಿಕೆಗೆ ತೊಂದರೆವಾಗದಂತೆ ಮಕ್ಕಳಿಗೆ ಅನುವು ಮಾಡಿಕೊಡಲು ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣಕ್ಕೆ ರೂಪಿಸಿದ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.‌
ಜನರುದ್ಧಾರಕ್ಕಾಗಿ ಸೇವಾ ಜೀವನ ಮಡುಪಾಗಿಸಿದ್ದ ಸಿದ್ದಲಿಂಗ ಶ್ರೀಗಳು ಹಾಗು ಪೂಜ್ಯರ ಕನಸುಗಳನ್ನು ಸಾಕಾರಗೊಳಿಸುತ್ತಿರುವ ಪರಮಪೂಜ್ಯ ತೋಂಟದ ಡಾ.ಸಿದ್ದರಾಮ ಶ್ರೀಗಳ ಮಾರ್ಗದರ್ಶನದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ ಸಂಸ್ಥೆ ವತಿಯಿಂದ ಶಿಕ್ಷಣ ದಾಸೋಹ ನಿರಂತರ ನಡೆಯುತ್ತಿದೆ. ಇಲ್ಲಿ ಸಮಾಜೋದ್ಧಾರಕ ಕರುನಾಡು ಗಾಂಧಿ ಶರಣ ಮಂಜಪ್ಪ ಹಡೇ೯ಕರ ಅವರ ಹಾಗು ವಚನ ಸಂಗ್ರಹದ ಚಿರಶಕ್ತಿ, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಈ ಮಹಾನ ಇಬ್ಬರು ಶರಣರ ನಾಮಾಂಕಿತದಿಂದ ಎಲ್.ಕೆ.ಜಿ.ಯಿಂದ ಪದವಿ ವರೆಗೆ ತೆರೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸಹಸ್ರಾರು ಮಕ್ಕಳು ಜ್ಞಾನಾರ್ಜನೆ ಪಡೆಯುತ್ತಿದ್ದಾರೆ. ಕಾಯಕದ ಮೂಲಕ ಮಾದರಿ ಮಾನವ ತತ್ವಾದರ್ಶಗಳ ಸತ್ಕಾರ್ಯಗಳನ್ನು ನಮ್ಮ ಗದುಗಿನ ತೋಂಟದ ಉಭಯ ಶ್ರೀಗಳ ಸತ್ಯ,ಶುದ್ಧ,ಕಾಯಕದ ಅನುಗ್ರಹದಿಂದ ಶಾಲೆಗಳ ಶ್ರೇಯೋಭಿವೃದ್ಧಿ ಪರ ಕೆಲಸ ಕಾರ್ಯಗಳು ಸಾಗಿವೆ.
ಸಾಮಾಜಿಕ ಸ್ವಾಸ್ಥ್ಯಕ್ಕೆ ಅನುಪಮ ನೆನಪುಗಳನ್ನು ಉಭಯ ಪೂಜ್ಯರು ನೀಡಿದ್ದಾರೆ. ಪುಷ್ಟಿಭರಿತ ಕಾಯಕ ನಿರ್ವಹಿಸಿದ್ದಾರೆ ಎಂದರು.
ಇಲ್ಲಿ ಕಲಿಯುತ್ತಿರುವ ಮಕ್ಕಳು ಆದರ್ಶ ಗುಣಗಳನ್ನು ಹೊಂದಬೇಕು. ತಮ್ಮ ಬುದ್ದಿಮತ್ತೆ ಗ್ರಹಣ ಶಕ್ತಿಯ ದ್ಯೋತಕದಿಂದ ಪರೀಕ್ಷೆಗಳಲ್ಲಿ ಸಾಧನೆ ತೋರಿ ಕಲಿಸಿದ ಗುರುಗಳಿಗೆ, ಸಂಸ್ಥೆಗೆ,ಊರಿಗೆ ಕೀತಿ೯ ತರಬೇಕು.ಶೈಕ್ಷಣಿಕ ಹಿರಿಮೆಯಲ್ಲಿ ಆಲಮಟ್ಟಿ ಮಿನುಗಬೇಕು. ಇಂಥದೊಂದು ಮುನ್ನುಡಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವ ಮೂಲಕ ಸಾಬೀತುಪಡಿಸಬೇಕು ಎಂದು ಶಿವಾನಂದ ಪಟ್ಟಣಶೆಟ್ಚರ ಆಶಿಸಿದರು.

Leave a Reply

Your email address will not be published. Required fields are marked *

You May Also Like

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು..!

ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಭಾನುವಾರ ರಾತ್ರಿ ಎದೆನೋವಿನ ಕಾರಣದಿಂದ ದೆಹಲಿಯ ಏಮ್ಸ್‌…

ನೂತನ 52 ತಾಲೂಕುಗಳಲ್ಲಿ ಬಿಇಒ ಕಚೇರಿ ಮರೀಚಿಕೆ ? ಆರಂಭದ ಸುಳಿವೇ ಇಲ್ಲ ! ಪ್ರಾರಂಭ ಎಂದು ? ಬಿಇಒ ಕಚೇರಿ, ಸಿಬ್ಬಂದಿ ಮಂಜೂರಾತಿಗೆ ಆಗ್ರಹ

ಆಲಮಟ್ಟಿ : ಹೊಸ ಭರವಸೆಯ ಆಶಾ ಕಿರಣದೊಂದಿಗೆ ನೂತನವಾಗಿ ತೆಲೆಯತ್ತಿದ್ದ ರಾಜ್ಯದ 52 ನವ ತಾಲೂಕುಗಳು…

ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಶಿಕ್ಷಣ ಸಚಿವ

ಖಾಸಗಿ ಶಿಕ್ಷಣ ಸಂಸ್ಥೆಗಳ ವರ್ತನೆಯಿಂದ ಆತಂಕಗೊಂಡಿರುವ ಶಿಕ್ಷಣ ಇಲಾಖೆ, ಇದೀಗ ಮಕ್ಕಳ ಹಿತ ಕಾಪಾಡಲು ಮುಂದಾಗಿದೆ. ಹೀಗಾಗಿ ಶಾಲಾ ಶುಲ್ಕದ ವಿಚಾರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಸಂಭ್ರಮದಿಂದ ತೇಜಸ್ವಿ ಸೂರ್ಯ ಹುಟ್ಟು ಹಬ್ಬ ಆಚರಣೆ

ಉತ್ತರಪ್ರಭ ಸುದ್ದಿ ಮುಂಡರಗಿ: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರ ದಕ್ಷಿಣ ಲೋಕಸಭಾ…