ಚಿತ್ರ ವರದಿ: ಗುಲಾಬಚಂದ ಜಾಧವ
ಆಲಮಟ್ಟಿ : ಹೊಸ ಶಿಕ್ಷಣ ನೀತಿ ಬಂದಿದೆ. ಸ್ಪಧಾ೯ತ್ಮಕ ಮನೋಭಾವ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಬೆಳೆಸಿ ಮೌಲ್ಯಗಳನ್ನು ಬಿತ್ತಿ. ಸರ್ವ ಜೀವಿಗಳಲ್ಲೇ ಮನುಷ್ಯ ಜನ್ಮ ಶ್ರೇಷ್ಠ. ಈ ಮಾನವ ಜನ್ಮಕ್ಕೆ ವಿದ್ಯೆಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ ಎಂದು ಗದುಗಿನ ತೋಂಟದಾರ್ಯ ವಿದ್ಯಾಪೀಠದ ಹಾಗು ಆಲಮಟ್ಟಿ ಎಸ್.ವ್ಹಿ.ವ್ಹಿ. ಸಂಸ್ಥೆಯ ಕಾರ್ಯದರ್ಶಿ, ವಿಶ್ರಾಂತ ಪ್ರಾಚಾರ್ಯ ಶಿವಾನಂದ ಪಟ್ಟಣಶೆಟ್ಚರ ಅಭಿಪ್ರಾಯಿಸಿದರು.


ಸ್ಥಳೀಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜಿನ ವಾಷಿ೯ಕ ಸ್ನೇಹ ಸಮ್ಮೇಳನ,ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶುಭ ಕೋರುವ,ಪ್ರತಿಭಾ ಪುರಸ್ಕಾರ, ಮತ್ತು ನೂತನ ಪ್ರಾಚಾರ್ಯರರಿಗೆ, ನಿವೃತ್ತರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆ,ಕಾಲೇಜು, ಆಸ್ಪತ್ರೆಗಳೇ ಇಂದಿನ ಆಧುನಿಕ ದಿನಮಾನದ ನಿಜವಾದ ದೇವಾಲಯಗಳು. ಒಳ್ಳೆಯ ಡಾಕ್ಟರೇ ದೇವರು. ವ್ಯೆದ್ಯರು ಸಮಾಜದಲ್ಲಿ ದೇವ ಸ್ವರೂಪಿಗಳಾಗಿ ಕೆಲಸ ಮಾಡುತ್ತಲ್ಲಿದ್ದಾರೆ.ಧನಾತ್ಮಕ ಚಿಂತನೆ,ಸಕಾರಾತ್ಮಕ ಆಲೋಚನೆ ವೃತ್ತಿ ಬದುಕಿಗೆ ಚೈತನ್ಯ ನೀಡುತ್ತದೆ. ಶಿಕ್ಷಕರು ಬದ್ದತೆ ಹಾಗು ಬೋಧನಾ ಕೌಶಲ್ಯದಿಂದ ಪ್ರಬುದ್ಧ ಭಾಷೆ ಸುಲಲಿತವಾಗಿ ಬಳಸಿ ಪಾಠ ಪ್ರವಚನ ಸಾಗಿಸಿದರೆ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.ಮಕ್ಕಳಿಗೆ ಬೋಧಕರು ಮಾದರಿಯಾಗಿ ಮಿನುಗಬೇಕು ಎಂದರು.


ಸರಿಯಾದ ಪ್ರೇರೇಪಣೆ, ಒಳ್ಳೆಯ ದೃಷ್ಟಿಕೋನ,ಸತತ ಪರಿಶ್ರಮ ವ್ಯಕ್ತಿತ್ವ ರೂಪದ ಸಾಧನಗಳಾಗಿವೆ.ಮಕ್ಕಳಲ್ಲಿ ಆವಿಷ್ಕಾರದ ಗುಣ ಬೆಳೆಸಬೇಕು. ಈ ಜ್ಞಾನ ಇಂದಿನ ಅಗತ್ಯವಾಗಿದ್ದು ಹೊಸ ಅನ್ವೇಷಣೆಗಳ ವಿಚಾರ ಮಂಥನ ಮಕ್ಕಳಲ್ಲಿ ಶಿಕ್ಷಕರು ತುಂಬಬೇಕು.ಕಲಿಕೆಗೆ ಚುರುಕುತನ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪ್ರೀತಿ, ಕಾಳಜಿ,ಸಹಕಾರ, ನಂಬಿಕೆ,ಸಹಾನುಭೂತಿ, ಪ್ರೋತ್ಸಾಹ, ಬೆಂಬಲ ಶಿಷ್ಟಾಚಾರಗಳಂಥ ಮಾನವೀಯ ಮೌಲ್ಯಗಳನ್ನು ಮಕ್ಕಳ ಮನದಲ್ಲಿ ಭರಣಾ ಮಾಡಬೇಕು.ಸ್ಪಷ್ಟ ಗುರಿಯಿಂದ ಯಾವುದೇ ಸಾಧನೆ ಗೈಯಲು ಸಾಧ್ಯ. ಪರೀಕ್ಷೆ ಅಂಕಗಿಂತ ಜ್ಞಾನ ಗಳಿಕೆ ಅಂಕ ಅತೀ ಮುಖ್ಯ ಎಂದರು.
ಆಧುನಿಕತೆ ಹೆಚ್ಚಿದಂತೆ ಮನುಷ್ಯ ಸಂಬಂಧಗಳು ಹಳಸುತ್ತಿವೆ.ಜನತೆಯಲ್ಲಿ ವೈಚಾರಿಕತೆ ಮರೆಯಾಗುತ್ತಿವೆ. ವಿದ್ಯಾರ್ಥಿಗಳು ಮೌಲ್ಯಯುತ ಸುಸಂಸ್ಕೃತ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಮನಸಾಕ್ಷಿಯಿಂದ ಕಲಿಕೆಯಲ್ಲಿ ಶ್ರದ್ಧೆಯಿರಿಸಿ ಎಲ್ಲ ಪರಿಧಿಯನ್ನು ದಾಟಿ ಅಕ್ಷರ ಸ್ವಾನುಭವದ ಕುಲುಮೆಯಲ್ಲಿ ಯುವಜನತೆ ತನ್ಮಯರಾಗಿ ಬೆಳೆಯಬೇಕು ಎಂದು ಶಿವಾನಂದ ಪಟ್ಟಣಶೆಟ್ಚರ ನುಡಿದರು.


ಭೂಷಣರಾಗಿ ಆರೋಗ್ಯಕರ ವಾತಾವರಣಕ್ಕೆ ನೆರವಾಗಿ: ಹಸನ್ಮುಖ ಮನಸ್ಥಿತಿಯಿಂದ ಓದು ಬರಹದ ಭಾಷೆಗಳ ಮೇಲೆ ಪ್ರಾವೀಣ್ಯತೆ ಹೊಂದಿ. ಇಂಥ ಸೃಜನಾತ್ಮಕ ಕಾಯಕದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಭೂಷಣರಾಗಿ. ಆರೋಗ್ಯಕರ ವಾತಾವರಣಕ್ಕೆ ನೆರವಾಗಿ. ಅಗತ್ಯ ವಿಷಯಗಳಿಗೆ ಪ್ರಾಧಾನ್ಯತೆ ನೀಡಿ ಎಂದು ವಿದ್ಯಾರ್ಥಿ ಸಮೂಹಕ್ಕೆ ಅವರು ಸಲಹೆ ನೀಡಿದರು.
ಕ್ರಮಬದ್ಧ ಯೋಚನೆ,ಆಲೋಚನೆ,ವಿವೇಚನೆಯ ಶಿಸ್ತು,ಅಚ್ಚುಕಟ್ಟುತನದಿಂದ ಅಧ್ಯಯನದಲ್ಲಿ ಬಿಡುಬೀಸಾಗಿ ಸಾಗಿ. ಅವು ಬದುಕಿನ ನವದಿಸೆ ಚೇತನಕ್ಕೆ ಎಡೆ ಮಾಡಿಕೊಡುತ್ತವೆ. ಪ್ರಾಮಾಣಿಕತೆಯೊಂದಿಗೆ ಕಟ್ಟಿಕೊಳ್ಳುವ ಜವಾಬ್ದಾರಿ ಮನಸ್ಸಿನ ಆತ್ಮಾಭಿಮಾನ ಹೆಚ್ಚಿಸುತ್ತದೆ. ಅಧ್ಯಯನದ ಮನನ ಸದಾ ಪ್ರಸನ್ನತೆ ಭಾವದಿಂದ ಸಾಗಿದ್ದಾದರೆ ಪರೀಕ್ಷಾ ಭಯದ ದುಗುಡು ನಿರಾಳತೆವಾಗುತ್ತವೆ ಎಂದರು.


ಮೌಲ್ಯಗಳು ನಗರೀಕರಣದ ಭರಾಟೆಯಲ್ಲಿಂದು ನಶಿಸುತ್ತಿವೆ. ಅವು ಜೀವಂತವಾಗಿರಿಸಲು ಯುವ ಜನಾಂಗ ಉತ್ಸಾಹದ ಸಂಕಲ್ಪ ಗೈಯಬೇಕು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಇದು ಸಾಧ್ಯ. ಉತ್ತಮ ಚಿಂತನೆ,ಪರೋಪಕಾರ ಕಾರ್ಯಗಳು ಬದುಕು ಮಾದರಿಗೆ ಪೂರಕವಾಗಿವೆ ಎಂದು ಶಿವಾನಂದ ಪಟ್ಟಣಶೆಟ್ಚರ ಅಭಿಪ್ರಾಯಿಸಿದರು.
ಹಾವೇರಿ ಶಿವಲಿಂಗೇಶ್ವರ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪಾ ಹಿರೇಮಠ ಉಪನ್ಯಾಸ ನೀಡಿ,ವೈಚಾರಿಕತೆ ಧರ್ಮದ ನೆರಳಿನಲ್ಲಿ ವಿದ್ಯಾರ್ಥಿಗಳು ಕಠಿಣ ತಪಸ್ಸಿನಿಂದ ಅಧ್ಯಯನ ಗೈದು ಪ್ರಗತಿ ಕಂಡುಕೊಳ್ಳಬೇಕು. ಆತ್ಮಜ್ಞಾನದ ಕೊರತೆಯಿಂದ ಸಮಾಜದಲ್ಲಿಂದು ಧರ್ಮ,ಜಾತಿ,ಪಂಗಡಗಳಲ್ಲಿ ಹಲಾಹಲಾ ಸೃಷ್ಟಿಯಾಗುತ್ತಲ್ಲಿವೆ. ಕೇಸರಿ,ಹಿಜಾಬ್ ವರ್ತಮಾನದ ತಲ್ಲಣ ವಿದ್ಯಾ ಮಂದಿರದಲ್ಲಿ ನುಸುಳಿವೆ. ಮನುಕುಲದ ವಿನಾಶಕ್ಕೆ ಮನುಷ್ಯರೇ ಕಾರಣವಾಗುತ್ತಿರುವುದು ವಿಷಾದನೀಯ. ಅಣುವಸ್ತ್ರ ಸಂಗ್ರಹ ನಿಲ್ಲಬೇಕು.ಪರಿಸರ ಸಮತೋಲನ ದಾರಿ ತಪ್ಪುತ್ತಿದೆ. ಜನಸಂಖ್ಯಾ ಸ್ಫೋಟ ಹೆಚ್ಚಾಗುತ್ತಿವೆ. ಹೃದಯ ವಿದ್ಯೆಭಾವನೆ ಕಳೆದುಕೊಳ್ಳುತ್ತಲ್ಲಿದ್ದೆವೆ. ನಮಗೆಲ್ಲ ಇಂದು ಆತ್ಮಜ್ಞಾನದ ವಿದ್ಯೆ ಅತ್ಯಗತ್ಯವಾಗಿದೆ ಎಂದರು.
ದೀಪಕ್ಕೆ ಕತ್ತಲೆ ತೋಲಗಿಸುವ ಶಕ್ತಿಯಿರುವ ಹಾಗೆ ಶಿಕ್ಷಣಕ್ಕೆ ಆಜ್ಞಾನವನ್ನು ಹೋಗಲಾಡಿಸು ಅದ್ಭುತ ಶಕ್ತಿಯಿದೆ. ತಪಸ್ಸಿಗಳಾಗಿ ಅಭ್ಯಸಿಸಿ ಜೀವನ ಗುರಿ ತಲುಪಿ. ಮಕ್ಕಳಲ್ಲಿ ಮೊಬೈಲ್ ಹಾಗು ಬೈಕ್ ಸೆಳೆತ ಹೆಚ್ಚಾಗಿದೆ. ಸಮಾಜದಲ್ಲಿ ವಿಚಿತ್ರ ರೀತಿಯ ಹುಟ್ಟು ಹಬ್ಬಗಳ ಆಚರಣೆ ಸಾಗುತ್ತಿವೆ. ಸೆಲ್ಫಿ ಮೋಹದ ಲೋಕದಲ್ಲಿ ಚಿತ್ರ ವಿಚಿತ್ರಭಾವ ನೋಟಗಳು ರಾರಾಜಿಸುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಗೆ ಯುವಪೀಳಿಗೆ ಶರಣಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮನಸ್ಸಿಟ್ಟು ಪುಸ್ತಕದ ಸಂಗಾತಿಗಳಾಗಿ ಓದಿನಲ್ಲಿ ತನ್ಮಯರಾದರೆ ಎಲ್ಲಿಯೂ ತಲೆ ತಗ್ಗಿಸುವ ಪ್ರಮೇಯೇ ಇಲ್ಲ.‌ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಭುತ್ವ ಮೈಗೂಡಿಸಿಕೊಳ್ಳಬೇಕು ಎಂದರು.
ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಮಾತನಾಡಿ,ವಿದ್ಯಾರ್ಥಿ ಜೀವನದಲ್ಲಿ ಹುಡುಗಾಡಿಕೆ ಸಲ್ಲದು. ಪ್ರಜ್ಞಾಪೂರ್ವಕವಾಗಿ ವತಿ೯ಸುವ ಗುಣ ಹೊಂದಿ. ಒಳ್ಳೆ ಕನಸುಗಳನ್ನು ಬಿತ್ತಿಕೊಂಡು ನಿಷ್ಠೆಯಿಂದ ಅಕ್ಷರ ಕಲಿಕೆಗೆ ಮುಂದಾಗಿ. ಕಲಿಸಿದ ಗುರು ಹಿರಿಯರನ್ನು ಗೌರವದಿಂದ ಕಾಣಿ, ವಿನಯ ಸಂಸ್ಕೃತಿಯಲ್ಲಿರಿ.ಈ ಅಂಶಗಳು ಇಲ್ಲದಿದ್ದರೆ ಎಷ್ಟೇ ವಿದ್ಯೆ ಕಲಿತರು ಎಲ್ಲವೂ ವ್ಯರ್ಥ. ಪೂಜ್ಯಭಾವ ಹೊಂದಿ ಸಾರ್ಥಕ ಬದುಕು ತಮ್ಮದಾಗಿಸಿಕೊಳ್ಳಿ ಎಂದು ಯುವಜನಾಂಗಕ್ಕೆ ಕರೆಯಿತ್ತರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮೇಶ್ ಕಾರಜೋಳ ಅವರಿಗೆ ಸನ್ಮಾನಿಸಲಾಯಿತು.
ಸಾನಿಧ್ಯ ವಹಿಸಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿಪಿಐ ರಮೇಶ ರೊಟ್ಟಿ ಮಾತನಾಡಿದರು.
ಎಸ್.ಬಿ.ಪಾಟೀಲ, ಮಂಜುನಾಥ್ ಹಿರೇಮಠ, ಮೀನಾಕ್ಷಿ ಉಪ್ಪಾರ, ಸದಾಶಿವ ದಳವಾಯಿ, ಹಣಮಂತ ಗುಂಡಿನಮನಿ, ಸಂಜು ರಾಠೋಡ, ಜಂಬಕ್ಕ ವಿಭೂತಿ, ಶಂಕರ ಜಲ್ಲಿ, ಜಿ.ಎಂ.ಕೋಟ್ಯಾಳ, ಎಚ್.ಎನ್.ಕೆಲೂರ, ಎಸ್.ಆಯ್.ಗಿಡ್ಡಪ್ಪಗೋಳ, ಕಮಲಾಕ್ಷಿ ಹಿರೇಮಠ, ಜಿ.ಎಸ್.ಬಿರಾದಾರ, ಎಸ್.ಎಸ್.ಹಾಲಗಂಗಾಧರಮಠ, ವ್ಹಿ.ಎ.ಭಾಂಡವಾಲಕರ, ಈಯ್.ಬಿ.ಉಳ್ಳೇಗಡ್ಡಿ ಇತರರಿದ್ದರು.
ಪಿ.ಎ.ಹೇಮಗಿರಿಮಠ ಸ್ವಾಗತಿಸಿದರು. ಮಹೇಶ್ ಗಾಳಪ್ಪಗೋಳ, ಎನ್.ಎಸ್. ಬಿರಾದಾರ ನಿರೂಪಿಸಿದರು. ಟಿ.ಬಿ.ಕರದಾನಿ,ಎಂ.ಎಸ್.ಸಜ್ಜನ, ಮಮತಾ ಕರೇಮುರಗಿ ವಿವಿಧ ಸನ್ಮಾನ,ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

You May Also Like

ಸಂಭ್ರಮದಿಂದ ತೇಜಸ್ವಿ ಸೂರ್ಯ ಹುಟ್ಟು ಹಬ್ಬ ಆಚರಣೆ

ಉತ್ತರಪ್ರಭ ಸುದ್ದಿ ಮುಂಡರಗಿ: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರ ದಕ್ಷಿಣ ಲೋಕಸಭಾ…

ವಿಶೇಷ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ನಿಲ್ಲಿಸಲು ಶಿಕ್ಷಣ ಸಚಿವರಿಗೆ ಚಿತ್ರಕಲಾ ಶಿಕ್ಷಕರ ಮನವಿ

ಉತ್ತರಪ್ರಭಆಲಮಟ್ಟಿ: ಪ್ರಸಕ್ತ 2022-23 ನೇ ಸಾಲಿನಲ್ಲಿ ರಾಜ್ಯದ ಸಕಾ೯ರಿ ಪ್ರೌಢಶಾಲೆಗಳಲ್ಲಿ ಅವಶ್ಯ ಹೆಚ್ಚುವರಿ ವಿಶೇಷ ಶಿಕ್ಷಕರ…

ಪದವಿವೊಂದೇ ಸಾಲದು ಎಲ್ಲ ಜ್ಞಾನವೂ ಬೇಕು-ಡಾ.ಸಿ.ಎಂ.ಜೋಶಿ

ಉತ್ತರಪ್ರಭ ಸುದ್ದಿನಿಡಗುಂದಿ: ಅಧ್ಯಯನ ಕೇವಲ ಪದವಿ ಸಂಪಾದನೆಗೆ ಮಾತ್ರ ಸೀಮಿತವಾಗದೇ ಅದು ಸಮಗ್ರ ಜ್ಞಾನ ಪಡೆಯುವಂತಾಗಬೇಕು.…

ತೋಂಟದ ಶ್ರೀ, ಹಡೇ೯ಕರ, ಹಳಕಟ್ಟಿ ಜಗದ ಯುಗ ಪುರುಷರು- ಪಟ್ಟಣಶೆಟ್ಟರ

ವರದಿ: ಗುಲಾಬಚಂದ ಜಾಧವಆಲಮಟ್ಟಿ : ಶಾಂತ ಚಿತ್ತತೆ,ಬದ್ದತೆ ಖ್ಯಾತಿಯ ಕನ್ನಡದ ಕುಲದೇವರಾದ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳು,ಕರುನಾಡಿನ…