ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಡುವ ಸಂಬಂಧ ಆದಷ್ಟು ಬೇಗ ಕಾರ್ಯಕ್ರಮದ ದಿನಾಂಕ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪುನೀತ್ ರಾಜ್‌ಕುಮಾರ್ 47ನೇ ಹಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿರುವ ಬಸವರಾಜ ಬೊಮ್ಮಾಯಿ ಅವರು ಗುರುವಾರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಇದೆ. ಅವರು ಇದ್ದಿದ್ದರೆ ಸಂಭ್ರಮದಿಂದ ಆಚರಿಸುತ್ತಿದ್ದೆವು. ಆದರೆ, ಅವರನ್ನು ಕಳೆದುಕೊಂಡ ದುಃಖದಲ್ಲಿದ್ದೇವೆ. ಆದರೆ. ಅವರು ಪ್ರೇರಣೆ ಆಗಿದ್ದಾರೆ. ಅವರ ಆದರ್ಶದ ಬದುಕು, ಸಾರ್ವಜನಿಕವಾಗಿ ನಡೆದುಕೊಂಡ ರೀತಿ, ಬಡವರಿಗೆ ಸಹಾಯ, ದಾನ ಮಾಡಿದ ರೀತಿ ಎಲ್ಲರಿಗೂ ಪ್ರೇರಣೆ. ಚಿಕ್ಕ ವಯಸ್ಸಿಗೆ ಆದರ್ಶ ಪ್ರಾಯರಾಗಿ ಬದುಕಿದರು’ ಎಂದು ಹೇಳಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಶರವೇಗದಲ್ಲಿ ಸೋಂಕು: ಇಂದು 72 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 72 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 774…

ಕಂಟೈನ್ಮೆಂಟ್ ಬಿಟ್ಟು ಉಳಿದೆಡೆ ವಹಿವಾಟಿಗೆ ಅವಕಾಶ ನೀಡಬೇಕು

ನವದೆಹಲಿ: ದೇಶದಾದ್ಯಂತ ಸದ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಎಲ್ಲ ರೀತಿಯ…

ಗದಗ ಜಿಲ್ಲೆಯಲ್ಲಿಂದು 39 ಪಾಸಿಟಿವ್ : ಸೋಂಕಿನ ಮಿಂಚಿನ ಓಟ!

ಜಿಲ್ಲೆಯಲ್ಲಿಂದು 39 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 370 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 194.

ಸಾರ್ವಜನಿಕರ ಗಮನಕ್ಕೆ

ಬೆಟಗೇರಿ ನಗರಸಭೆ ವ್ಯಾಪ್ತಿಯ ಖಸಾಯಿ ಖಾನೆಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಾ.11 ರಂದು ಪ್ರಾಣಿವಧೆ ಹಾಗೂ ಮಾಂಸ ಮಾರಾಟ, ಜಾನುವಾರುಗಳ ವಧೆ ಮಾಡುವುದನ್ನು ನಿಷೇಧಿಸಲಾಗಿದೆ.