ಉತ್ತರಪ್ರಭ

ಗದಗ: ಮಾರ್ಚ 11ರಂದು ಗದಗ ನಗರದ ಲಾಯನ್ಸ್ ಸ್ಕೂಲ್ ಸಮೀಪದ ಆಟದ ಮೈದಾನ ಒಂದರಲ್ಲಿ ಹುಡ್ಕೊ ಬಡಾವಣೆಯ ನಿವಾಸಿ ಅಪೂರ್ವಾ ಪುರಾಣಿಕ್ ಇವರು ದ್ವಿಚಕ್ರ ವಾಹನ ಕಲಿಯಲು ತೊಡಗಿದ್ದ ಸಂದರ್ಭದಲ್ಲಿ ಅವಳ ಮೇಲೆ ಇಜಾಜ್ ಶಿರೂರ್ ಅನ್ನೋ ವ್ಯಕ್ತಿ ಬರೋಬ್ಬರಿ 23 ಬಾರಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದನು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

         ಅಪೂರ್ವಾ ಹಾಗೂ ಇಜಾಜ್ ಇಬ್ಬರು ಪತಿ ಪತ್ನಿಯರಾಗಿದ್ದಾರೆ, ಅಪೂರ್ವ ಎಂಬಿಎ ಪದವಿಧರೆಯಾಗಿದ್ದು ಕಾಲೇಜು ಕಲಿಯುವ ಸಂದರ್ಭದಲ್ಲಿ ಇಜಾಜ್ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿ, ನಾಲ್ಕು ವರ್ಷದ ಹಿಂದೆ ವಿಜಯಪುರದ ದರ್ಗಾ ಒಂದರಲ್ಲಿ  ವಿವಾಹವಾಗಿದ್ದರು, ಇಜಾಜ್ ವೃತ್ತಿಯಿಂದ ಆಟೋ ಚಾಲಕನಾಗಿದ್ದಾನೆ ಮದುವೇಯ ನಂತರ ಅಪೂರ್ವಾನ ಹೇಸರನ್ನ ಅರ್ಫಾಬಾನು ಎಂದು ಬದಲಿಸಿಕೊಂಡಿದ್ದರು. ಮೋದ ಮೋದಲು ಇಬ್ಬರು ಅನ್ಯೊನ್ಯವಾಗಿದ್ದರು, ಅವರಿಗೆ ಮುದ್ದಾದ ಮಗು ಇದ್ದು ಇವರು ಹುಬ್ಬಳ್ಳಿಯ ಕೌಲಬಜಾರ್ನಲ್ಲಿ ವಾಸವಾಗಿದ್ದರು,

ಇಜಾಜ್ ಆರಂಭದಲ್ಲಿ ಗದಗ ನಗರದಲ್ಲಿ ಆಟೋ ಓಡಿಸಿಕೊಂಡಿದ್ದ ನಂತರ ಹುಬ್ಬಳ್ಳಿಗೆ ಹೋಗಿ ಸಣ್ಣದೊಂದು ಮೊಬೈಲ್ ಅಂಗಡಿಯನ್ನು ಇಟ್ಟುಕೊಂಡಿದ್ದ. ಅಪೂರ್ವಾಳಿಗೆ ತನ್ನ ಗಂಡನಿಗೆ ಈ ಮೊದಲು ಮದುವೆಯಾಗಿದೆ ಎಂದು ಗೊತ್ತಾದ ನಂತರ ಗಂಡನ ಮೊಸದ ಬಗ್ಗೆ ಅರಿತ ಅಪೂರ್ವಾ ವಿವಾಹ ವಿಚ್ಚೆದನಕ್ಕೆ ನಿರ್ಧರಿಸಿ ವಿಚ್ಚೆಧನಕ್ಕೆ ನ್ಯಾಯಾಲಯದಲ್ಲಿ ಅರ್ಜಿ  ಸಲ್ಲಿಸಿದ್ದಾಳೆ ಎಂಬ ಮಾಹಿತಿ ಇದೆ. ತದನಂತರ ತನ್ನ ತವರು ಮನೆಯಾದ ಗದಗ ನಗರದ ಹುಡ್ಕೋ ಕಾಲೋನಿಯಲ್ಲಿ ನಾಲ್ಕೈದು ತಿಂಗಳಿನಿಂದ ವಾಸವಿದ್ದಳು, ವಿಚ್ಚೆಧನಕ್ಕೆ ಅರ್ಜಿಸಲ್ಲಿಸಿದ್ದನ್ನು ತಿಳಿದ ಇಜಾಜ್ ಅವಳು ನನ್ನನ್ನು ಬಿಟ್ಟೆ ಹೋಗುತ್ತಾಳೆ ಹಾಗಾಗಿ ಅವಳನ್ನ ಏನಾದರು ಮಾಡಿ ಕೋಲೆ ಮಾಡುವ ಸಂಚಿನಿಂದ ದಿನಾಂಕ: 10.03.2022ರಂದು ಎಕಾಏಕಿಯಾಗಿ ಬಂದು ತನ್ನ ಪತ್ನಿಯ ಮೇಲೆ ಅಮಾನುಷವಾಗಿ ಮಚ್ಚಿನಿಂದ ಹಲ್ಲೇಗೈದು ಪರಾರಿಯಾಗಿದ್ದ. ಹಲ್ಲೇಯಾದ ಮಹಿಳೆಯನ್ನು ಆಸ್ಪತ್ರೆಗೆ  ಸಾಗಿಸಿ, ಚಿಕಿತ್ಸೆಯನ್ನು ನೀಡುತ್ತಿದ್ದಾರೆ, ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆಂದು ತಿಳಿದುಬಂದಿದೆ.

ಹಲ್ಲೇ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಗದಗ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರೀತಿ ಕೊಂದ ಕೊಲೆಗಾರ ಪೊಲೀಸರ ಅಥಿತಿಯಾಗಿದ್ದು ಯುವಜನತೆ ಈ ಘಟನೆಯಿಂದ ಏಚ್ಚೆತ್ತುಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಶಾಸಕ ರಾಮಣ್ಣ ಲಮಾಣಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಗದಗ ಜಿಲ್ಲೆಯ 48 ಕಂಟೈನ್ಮೆಂಟ್ ಝೋನ್ ಗಳ ವಿವರ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಬುಧವಾರದ ವರೆಗೆ…

ಗದಗ ನಗರದ ಹುಡ್ಕೋ ಕಾಲನಿ ಕಂಟೇನ್ಮೆಂಟ್ ಝೋನ್ ಘೋಷಣೆ

ಇಲ್ಲಿನ ವಾರ್ಡ 35ರ ಹುಡ್ಕೋ ಕಾಲನಿ 2ನೇ ಕ್ರಾಸ್ ಇದರ ಸುತ್ತಲಿನ 100 ಮೀ. ಪ್ರದೇಶವನ್ನು ತಕ್ಷಣದಿಂದ ಕೊವಿಡ್-19 ಸೋಂಕು ನಿಯಂತ್ರಿತ (ಕಂಟೇನ್ಮೆಂಟ) ಪ್ರದೇಶವೆಂದು