2021-22 ನೇ ಸಾಲಿನ ಬಜೆಟ್ ಮಂಡನೆ, ಮೂಲ ಸೌಲಭ್ಯಕ್ಕೆಆಧ್ಯತೆ

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಪಂಚಾಯ್ತಿ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ 2021-22 ನೇ ಸಾಲಿನ ಬಜೆಟ್ ಮಂಡಿಸಿದರು.

ಕಳೆದ 2020-21 ನೇ ಸಾಲಿಗೆ ಒಟ್ಟೂ 1024.44 ಲಕ್ಷಆದಾಯ ನಿರೀಕ್ಷೆಇದ್ದು 991.56 ಲಕ್ಷ ವೆಚ್ಚ ಅಂದಾಜಿಸಲಾಗಿದೆ. ಮೂಲ ಸೌಕರ್ಯಅಭಿವೃದ್ದಿ ಸೇರಿದಂತೆ ಪ್ರತ್ಯೇಕಚಿಕನ್ ಮಾರುಕಟ್ಟೆ, ತುಂಗಭದ್ರಾಕುಡಿಯುವ ನೀರಿನಯೋಜನೆ ಹಾಗೂ ರಸ್ತೆ ಅಗಲಿಕರಣಕ್ಕೆ ಅನುದಾನ ಕಾಯ್ದಿರಿಸಲಾಗಿದೆ. ಎಂದು ಮುಖ್ಯಾಧಿಕಾರಿಎಂ.ಎಸ್.ಬೆಂತೂರ ಸಭೆಗೆ ತಿಳಿಸಿದರು.

ನಂತರ ಸದಸ್ಯದ್ಯಾಮಣ್ಣ ನೀಲಗುಂದ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯ ಹಳೆಹುಡಾ ಗುಡ್ಡದ ಹತ್ತಿರ ಕೆರೆ ಜಾಗದಲ್ಲಿ ಅಕ್ರಮವಾಗಿ ಮನೆಗಳು ನಿರ್ಮಾಣವಾಗುತ್ತಿವೆ ಈ ಬಗ್ಗೆ ಅಧಿಕಾರಿಗಳು ಕ್ರಮಹಿಸುತ್ತಿಲ್ಲ, ಶುದ್ದಕುಡಿಯುವ ನೀರಿನಘಟಕದ ದುರಸ್ತೆ ಗುತ್ತಿಗೆ ಒಂದೇ ಕಂಪನಿಗೆ ನೀಡಲಾಗುತ್ತಿದೆ. ಎಂದುಆಕ್ಷೇಪಣೆ ವ್ಯಕ್ತಪಡಿಸಿದರು. ಇದಕ್ಕೆ ಮುಖ್ಯಾಧಿಕಾರಿ ಉತ್ತರಿಸಿ ಗುಡ್ಡ ಮತ್ತು ಕೆರೆ ಕಂದಾಯ ಇಲಾಖೆಗೆ ಸಂಬಂಧಿಸಿದೆ. ನೀರು ಶುದ್ದಿಕರಿಸುವ ಘಟಕ ದುರಸ್ತೆಗೆ ಟೆಂಡರ್‌ ಕರೆದು ಕಾಮಗಾರಿ ನೀಡಲಾಗಿದೆ. ಎಂದು ಉತ್ತರಿಸಿದರು.

ಘನತ್ಯಾಜ್ಯ ವಸ್ತು ನಿರ್ವಹಣೆ ಮನೆ ಮತ್ತು ವಾಣಿಜ್ಯ ಆಸ್ತಿಗಳಿಗೆ ವಿಧಿಸುವಕರ ಪರಿಸ್ಕರಿಸಿ ದರ ನಿಗಧಿ, ಸಾರ್ವಜನಿಕ ಶೌಚಾಲಯ ನಿರ್ವಹಣೆ ಕುರಿತು ಚರ್ಚಿಸಲಾಯಿತು. ನಂತರ ಕೆ.ಎಲ್.ಕರಿಗೌಡ್ರ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಕಡ್ಡಾಯವಾಗಿದ್ದು ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನ ಪರಿಸೀಲಿಸಿ ಪರವಾನಿಗೆ ಇಲ್ಲದವರಿಗೆ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.

 14 ನೇ ಹಣಕಾಸು ಅನುದಾನದಲ್ಲಿ ಮುಕ್ತಿವಾಹಿನಿ ಖರೀದಿ ಟೆಂಡರ್‌ ದರಕ್ಕೆ, ಕೆರೆಯಲ್ಲಿ ಮೀನು ಸಾಕಾಣಿಗೆ ಹಾಗೂ ಸಂತೆಕರ ವಸೂಲಿ ಜಾಹೀರ ಲೀಲಾವಿಗೆ ಮತ್ತು 2020-21 ನೇ ಸಾಲಿನ ಎಸ್.ಎಪ್.ಸಿ, ಸಾಮಾನ್ಯ ನಿಧಿ ಅನುದಾನದಡಿ, ಪೌರಕಾರ್ಮಿಕರ ಸುರಕ್ಷಾ ಸಾಮಗ್ರಿ ಪೂರೈಕೆಗೆ ಕರೆದಿದ್ದ ಟಿಂಡರಗಳಿಗೆ ಸಭೆಯಲ್ಲಿ ಅನುಮೋದನೆ ನೀಡಿದರು.

ಸಭೆಯಲ್ಲಿ ಪ.ಪಂ ಉಪಾಧ್ಯಕ್ಷೆ ಖುರ್ಷಿದಾ ಕಲ್ಲಣ್ಣವರ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಬಡ್ನಿ, ಸದಸ್ಯರಾದ ಎನ್.ಆರ್.ದೇಶಪಾಂಡೆ, ವಿಜಯ ನೀಲಗುಂದ, ಐ.ಎಂ.ಶೇಖ, ಮಹಾಂತೇಶ ನೀಲಗುಂದ, ಬಸವರಾಜ ಹಾರೋಗೇರಿ, ಮಹಾದೇವಪ್ಪ ಗಡಾದ, ಯಲ್ಲಪ್ಪ ಚವ್ಹಾಣ, ನೀಲಮ್ಮಅಸುಂಡಿ, ಅನುಸುಯಾ ಸೋಮಗಿರಿ, ಲಕ್ಷ್ಮವ್ವ ಕುಂದಗೋಳ, ಉಮಾ ಮಟ್ಟಿ, ಯಲ್ಲಮ್ಮಕವಲೂರ, ಪಾರವ್ವ ಅಳ್ಳಣ್ಣವರ ಹಾಗೂ ಪಪಂ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರದಲ್ಲಿ ಹತ್ತಿ ಗಿರಣಿಗೆ ಬೆಂಕಿ: ಲಕ್ಷಾಂತರ ರೂ. ಹಾನಿ..!

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹತ್ತಿ ಗಿರಣಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹತ್ತಿ, ಬೆಂಕಿಗೆ ಆಹುತಿಯಾದ ಘಟನೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಕನಕ ದುರ್ಗಾದೇವಿಯ ರಥೋತ್ಸವ

ಸಮೀಪದ ಕೊಡಗಾನೂರ ಗ್ರಾಮದಲ್ಲಿ ಆದಿ ದೇವತೆ ಕನಕ ದುರ್ಗಾದೇವಿಯ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

ಶಿವಮೊಗ್ಗದಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ವೈರಸ್ ಪತ್ತೆ

ಕೊರೊನಾ ವೈರಸ್ ಬೆನ್ನಲ್ಲೇ ಶಿವಮೊಗ್ಗದಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ಕೊರೊನಾ ವೈರಸ್ ಪ್ರಕರಣವೊಂದು ದೃಢಪಟ್ಟಿದೆ.