ಉತ್ತರಪ್ರಭ
ಶಿರಹಟ್ಟಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಮುಂಡರಗಿ ಇವುಗಳ ವತಿಯಿಂದ 2022 ರ “ಕದಳಿಶ್ರೀ” ಪ್ರಶಸ್ತಿಗೆ, ಶಿರಹಟ್ಟಿ ಪಟ್ಟಣದ, ಲೇಖಕರು, ಅತ್ಯುತ್ತಮ ವಾಗ್ಮಿಗಳಾಗಿರುವ ಎಫ್ ಎಂ ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಮುಂಡರಗಿಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನೆರವೇರಲಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
