ಗದಗ: ಸೇವಾಲಾಲ್ ಮಹಾರಾಜರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಹಾಗೂ ತೇರನ್ನು ಎಳೆಯುವ ಮುಖಾಂತರ ವಿಶೇಷ ಸೇವಾಲಾಲ ಮಹಾರಾಜರಿಗೆ ಪೂಜೆಯನ್ನು ಸಲ್ಲಿಸಿ ಆಚರಿಸಲಾಯಿತು.


ಜಯಂತಿಯ ಸಮಾರಂಭದಲ್ಲಿ ಸಾಮೂಹಿಕ ಮದುವೆಯ ಕಾರ್ಯಕ್ರಮ ಗಳು ಜರುಗಿದವು. ಸಮಾರಂಭದ ಮುಖ್ಯ ಅತಥಿಗಳಾಗಿ ಭಾಗವಹಿಸಿದ ಮಾಜಿ ಶಾಸಕರು ಹಾಗೂ ಗದಗ್ ಜಿಲ್ಲಾ ಕೆಪಿಸಿಸಿ ಅಧ್ಯಕ್ಷರಾಗಿರುವ ಶ್ರೀ ಜಿಎಸ್ ಪಾಟೀಲ್ ರವರು ಜ್ಯೋತಿ ಬೆಳಗಿಸುವ ಮೂಲಕ ಮಾತನಾಡಿ ಬಂಜಾರ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ , ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದರು ತಮ್ಮ ಸಂಸ್ಕೃತಿ, ಸಂಪ್ರದಾಯ, ಧರ್ಮ ಪಾಲನೆಯಿಂದ ಹಾಗೂ ಶ್ರೇಷ್ಠ ಹೃದಯವಂತಿಕೆ ಯಿಂದ ಶ್ರೀಮಂತವಾಗಿರುವ ಸಮಾಜ ವಾಗಿರುತ್ತದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು . ಸಂತಶ್ರೀ ಸೆವಾಲಾಲ ಮಹಾರಾಜರು ಬಂಜಾರ ಸಮುದಾಯಕ್ಕೆ ಅಷ್ಟೇ ಸೀಮಿತವಾಗಿಲ್ಲ ಅವರ ವಿಚಾರಗಳು ಆದರ್ಶಗಳು ವಿಶ್ವದ ಜನಾಂಗಕ್ಕೆ ಮಾರ್ಗದರ್ಶನ ವಾಗಿರುತ್ತವೆ ಎಂದು ಹೇಳಿ ನಾಡಿನ ಜನತೆಗೆ ಜಯಂತಿಯ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದ ಅತಿಥಿಗಳಾದ ಗೋರ್ ಸೇನಾ ರಾಜ್ಯಾಧ್ಯಕ್ಷರಾದ ಶ್ರೀ ರವಿಕಾಂತ್ ಅಂಗಡಿ ಅವರು ಬಂಜಾರ ಸಮುದಾಯವು ಕರ್ನಾಟಕವಲ್ಲದೆ ಭಾರತ ದೇಶದ ಎಲ್ಲ ರಾಜ್ಯಗಳಲ್ಲಿ ವಾಸ ಮಾಡುತ್ತಿರುವ ಸಮುದಾಯವಾಗಿದೆ. ಆದರೆ ಸಂಸ್ಕೃತಿ, ಸಂಪ್ರದಾಯ, ವೇಷಭೂಷಣ, ಧರ್ಮ ಪಾಲನೆಯಿಂದ ಹಾಗು ಒಂದೇ ಭಾಷೆ ಮಾತನಾಮಾಡುವ ಸಮುದಾಯವಾಗಿದೆ ಆದರೂ ಸಹಿತ ಸರ್ಕಾರದ ಸೌಲಭ್ಯಗಳಿಂದ ವಂಚಿತ ವಾಗಿದೆ. ಈ ಬುಡಟ್ಟು ಸಮಾಜ ಸಿಂದು ನಾಗರಿಕತೆಯ ಕಾಲದಿಂದ ತನ್ನದೇ ಆದ ಇತಿಹಾಸ ಹೊಂದಿರುತ್ತದೆ. ಪ್ರಾಮಾಣಿಕತೆ ಮತ್ತು ಸ್ವಾಭಿಮಾನ ದಿಂದ ಬದುಕುವ ಶ್ರಮಜವಿಗಳ ಬಂಜಾರರು ಆಗಿರುತ್ತಾರೆ. ನಮ್ಮ ಸಮಾಜ ಎಳಿಗೆ ಆಗಬೇಕಾದರೆ ಶಿಕ್ಷಣ ಕಾಂತಿ ಅವಶ್ಯಕತೆವಿದೆ ಎಂದು ಹೇಳಿದರು. ಹಾಲಕೆರೆ ಅನ್ನಧಾನೆಶ್ವರ ಮಠದ ಶ್ರೀ . ಮುಪ್ಪಿನ ಬಸವಲಿಂಗ ಸ್ವಾಮಿಗಳುರವರು ತಮ್ಮ ಆಶೀರ್ವಚನ ದಲ್ಲಿ ಈ ಸಮಾಜ ಶೈಕ್ಷಣಿಕವಾಗಿ ಮುಂದು ವರೆಯಬೇಕಾಗಿದೆ. ಸೇವಾಲಾಲರ ತತ್ವಗಳನ್ನು ಪಾಲಿಸಬೇಕು. ಕಡುಬಡವ ಆಗಿರುವ ಈ ಸಮುದಾಯ ಧಾರ್ಮಿಕವಾಗಿ ಸಿರಿವಂತಿಕೆಯನ್ನು ಹೊಂದಿದೆ. ಬಂಜಾರರು ತ್ಯಾಗ ಮಾಯಿಗಳು. ಜಾತಿ ಧರ್ಮವೆಂದು ಹೊಡೆದಾಡುವ ಬದಲು ಮಾನವ ಕುಲ ಒಂದೇ ಆಗಿದ್ದು ಮೇಲೂ ಕೀಳು ಎಂಬ ಭಾವನೆ ನಮ್ಮಲ್ಲಿ ಇರಬಾರದು ಮನುಷ್ಯ ಜಾತಿ ಒಂದೇ ನಮ್ಮ ಇರುವ ಆಯುಷ್ಯ ದೊಳಗೆ ನಾವು ಏನಾದರೂ ಸಾಧನೆ ಮಾಡಬೇಕು ಎಂದು ನುಡಿದರು. ಕಾರ್ಯ್ರಮದಲ್ಲಿ ಸಾನಿಧ್ಯ ವನ್ನು ಕೊಪ್ಪಳ ಗೋಸಾವಿ ಹೇಮಗಿರಿ ಬಾವನವರು ತಮ್ಮ ಆಶೀರ್ವಚನ ದಲ್ಲೀ ಅಮಾರಗಟ್ಟ ತಾಂಡದ ಜನರು ಬಹಳ ಸ್ವಾಭಿಮಾನಿ ಜನರು, ಧಾರ್ಮಿಕವಾಗಿ ಒಕ್ಕಟ್ಟನ್ನು ತೋರಿಸಿದ್ದಾರೆ ಎಂದು ಹೇಳುತ್ತಾ ಸೇವಾಲಾಲ ಮಹಾರಾಜರ ಜೀವನ ಚರಿತ್ರೆ ಮತ್ತು ಜಗತ್ತಿಗೆ ಅವರು ಸಾರಿದ ಸಂದೇಶ ಗಳ ಕುರಿತು ಮಾತನಾಡಿದರು.

ಗುಳಗುಳ್ಳಿ ಪುಣ್ಯಾಶ್ರಮದ ಶ್ರೀ. ಋಷಿಕೆಸ ಸ್ವಾಮಿಗಳು ಧಾರ್ಮಿಕತೆಯ ಕುರಿತು ಆಶೀರ್ವನ ನೀಡಿದರು. ತಾಂಡಾ ನಿಗಮದ ನಿರ್ದೇಶಕರು ಶ್ರೀ ಭರತ ನಾಯಕ ರವರು ತಾಂಡಾ ನಿಗಮ ಹಾಗೂ ಸರಕಾರಿ ಸೌಲಭ್ಯ ಗಳ ಕುರಿತು ಮಾತನಾಡಿದರು. ಶ್ರಿ ಲಕ್ಷ್ಮಣ ನಾಯಕ್ ರವರು ಮಾತನಾಡಿ ಈ ಸಮುದಾಯಕ್ಕೆ ಹೆಚ್ಚಿನ ಸೌಲಭಯಗಲು ಸಿಗಬೇಕು ಸರ್ಕಾರ ಈ ಸಮಾಜದ ಅಭವೃದ್ಧಿಗಾಗಿ ಕಾಳಜಿ ವಹಿಸಬೇಕಿದೆ ಎಂದು ಹೇಳಿದರು. ಬಂಜಾರ ಸಮಾಜದ ಪ್ರಮುಖರಾದ ಶ್ರಿ . ಭೀಮ ಸಿಂಗ ರಾಠೋಡ್ ರವರು ಅತಿಥಿಗಳಾಗಿ ಭಾಗವಹಿಸಿ ನಮ್ಮ ಸಮಾಜವು ಆರ್ಥಿಕವಾಗಿ ಮತ್ತು ಸಾಮಾಜಕವಾಗಿ ಹಿಂದುಳಿದಿದೆ. ದೇವಸ್ಥಾನಗಳ ಅಭಿರುದ್ದಿ ಯಗಬೇಕಿದೆ ಮತ್ತು ಮೂಲ ಸೌಲ್ಯಗಳ ಈ ಸಮಾಜಕ್ಕೆ ಸಿಗಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಬಂಜಾರ ಸಮಾಜದ ಮುಖಂಡರಾದ ಶ್ರಿ ಈಶಪ್ಪ ರಾಠೋಡ ಹಾಗೂ ಪ್ರಶಾಂತ ರಾಠೋಡ್ ರವರು ಮಾತನಾಡಿದರು.ಕಾರ್ಯಕ್ರಮದ ಅಧ್ಯ್ಷತೆಯನ್ನು ವಹಿಸಿದ್ದ ಬಂಜಾರ ಮುಖಂಡರಾದ ಶ್ರಿ ಲಾಲಪ ರಾಠೋಡ್ ರವರು ನಮ್ಮ ಸಮಾಜ ಹಿಂದುಳಿದ ಸಮಾಜ ವಾಗಿದೆ ಸರ್ಕಾರ ಈ ಸಮುದಾ ಯದ ಅಭಿವುದ್ದಿಗೆ ಗಮನ್ ಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಂಜಾರಾ ಮುಖಂಡರಾದ ಉಮೇಶ್ ರಾಠೋಡ, ಉಧೈಮಿ ಶ್ರಿ ರಾಮಚಂದ್ರ ಪೂಜಾರ , ಪಡಿಯಪ್ಪ ರಾಠೋಡ, ಸಕ್ರಪ್ಪ ರಾಠೋಡ, ಪರಸಪ್ಪ ರಾಠೋಡ, ಹನಮಂತಪ್ಪ ರಾಠೋಡ, ರವಿ ರಾಠೋಡ ಸೇರಿದಂತೆ ಅಮರಗಟ್ಟಿ ತಾಂಡಾದ ಹಾಗೂ ಸುತ್ತುಮುತ್ತಲಿನ ತಾಂಡಾ ಗಳ ನಾಯಕ್ ,ಡಾವ,
ಕಾರಭಾರಿ, ಯುವಕರು, ನೌಕಾರಸ್ತರು ಸಮಾಜ ಸೇವಕರು ಗುರುಹಿರಿಯರು ಜನಪ್ರಿನಿಧಿ ಗಳು ಉಪಸ್ಥಿತರಿದ್ದರು. ಮಾಜಿ ತಾಲೂಕ್ ಪಂಚಾಯತ್ ಅಧ್ಕ್ಷರಾದ ಶ್ರಿ ರಮೇಶ್ ಚವಾಣ ರವರು ಹಾಗೂ ಕು.ಸೌಭಾಗ್ಯ ರಾಠೋಡ ರವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತ ಕೋರಿ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗದಗ ಜಿಲ್ಲಾ ಪಂಚಾಯತ ವ್ಯಾಪ್ತಿಯಡಿ ಬರುವ 57 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 57 ಖಾಲಿ ಇರುವ ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇನ್ಮುಂದೆ ಗ್ರಾಮ ಪಂಚಾಯತಿಯಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣ ಪತ್ರ

ರಾಷ್ಟ್ರೀಯ ಜನನ-ಮರಣ ಕಾಯ್ದೆ 1967ರ ಅಧ್ಯಾಯ 5ರ ಪ್ರಕರಣ 27 ರ ಅಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಜನನ ಮತ್ತು ಮರಣ ಪತ್ರಗಳ ವಿತರಣಾಧಿಕಾರಿ ಎಂದು ರಾಜ್ಯಪಾಲರ ಆದೇಶದ ಪ್ರಕಾರ ನೇಮಕ ಮಾಡಿ, ಸರ್ಕಾರದ ಅಧೀನ ಕಾರ್ಯದರ್ಶಿ (ಜಿಪಂ) (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) ಆದೇಶ ಹೊರಡಿಸಿದ್ದಾರೆ.

ಸೇವಾಲಾಲ್ ದೇವಸ್ಥಾನಕ್ಕೆ ದಕ್ಕೆ

ಅರೇಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಂತ ಸೇವಾಲಾಲ್ ದೇವಸ್ಥಾನದ ಅಡಿಪಾಯವನ್ನು ಕೆಡವಿಹಾಕಿದ್ದರಿಂದ ಬಂಜಾರ ಹಾಗೂ ಇನ್ನಿತರ ಸಮುದಾಯಗಳ ನಡುವೆ ನಡೆದ ಘರ್ಷಣೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಗದಗ ಜಿಲ್ಲೆಯ ಹಳ್ಳಿ ಗಳಲ್ಲಿ ಕೊರೊನಾ ಭಯ..!: ಗುಟಕಾ, ಸಿಗರೇಟ್ ಮಾರಿದ್ರೆ ದಂಡ ಗ್ಯಾರಂಟಿ..!

ಗದಗ: ಜಿಲ್ಲೆಯಲ್ಲಿ 180 ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನಲೆ ಹಳ್ಳಿ ಹಳ್ಳಿಗೂ ಕೊರೋನಾ ಭಯ ಶುರುವಾಗಿದೆ.…