ಉತ್ತರಪ್ರಭ ಸುದ್ದಿ

ನರೆಗಲ್ಲ:ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ ಹಾಗೂ ದೈಹಿಕವಾಗಿ ಮಾನಸಿಕವಾಗಿ ಮನುಷ್ಯ ಯೋಗವನ್ನು ಪ್ರತಿದಿನ ಮಾಡುವುದರಿಂದ ಆರೋಗ್ಯಕರ ಜೀವನ ಪಡೆಯಬಹುದು ಎಂದು ಉಪನ್ಯಾಸಕ ಡಾ:ರಾಕೇಶ್ ತಿಳಿಸಿದರು.

ಅವರು ಪಟ್ಟಣದ ಶ್ರೀ ಅನ್ನದಾನ ಪಿ,ಯು,ಸಿ,ಕಾಲೇಜಿನಲ್ಲಿ ನಡೆದ ಭಾರತ ಸ್ವಾತಂತ್ರ್ಯೋತ್ಸವದ 75 ನೆಯ ವರ್ಷಾಚರಣೆ ನಿಮಿತ್ಯ ಆಜಾದಿ ಅಮೃತ ಮಹೋತ್ಸವ ಅಂಗವಾಗಿ ಯೋಗಾಸನ ಪ್ರಾತ್ಯಕ್ಷಿಕೆಯನ್ನು ರೋಣದ ಆಯುರ್ವೇದ ಕಾಲೆಜಿನ ಸ್ವಸ್ತ ವೃತ್ತಿಪರ ವಿಭಾಗದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಧುಮೇಹ, ಹೃದಯದ ತೊಂದರೆ ಗಳು, ಶ್ವಾಸಕೋಶದ ತೊಂದರೆಗಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವಂಥ ಅವರಲ್ಲಿ ಪರಿಣಾಮ ಹೆಚ್ಚು. ಕೆಲವರು ನ್ಯುಮೋನಿಯಾದಂಥ ಬಲು ತೀವ್ರವಾದ ಸಂಕಟದಿಂದ ನರಳುತ್ತಾರೆ. ಸೋಂಕು ತಗಲಿ ಸಂಪೂರ್ಣ ಚಿಕಿತ್ಸೆಯ ಅನಂತರ ಅನೇಕ ಜನರು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಖನ್ನತೆಗೆ ಒಳಗಾಗುತ್ತಾರೆ.ಚಿಕಿತ್ಸೆಯ ಅನಂತರ ನಮ್ಮ ಜೀವನ ಶೈಲಿಯನ್ನು, ಆಹಾರ ಕ್ರಮವನ್ನು ಬದಲಾಯಿ ಸುವುದು ಸೂಕ್ತವಾಗಿರುತ್ತದೆ. ದೈಹಿಕವಾಗಿ, ಮಾನಸಿಕವಾಗಿ ದೈನಂದಿನ ಚಟುವಟಿಕೆಗಳನ್ನು ಸರಳವಾಗಿ ನಿರ್ವಹಿಸಲು ಯೋಗಾಭ್ಯಾಸವು ಅತೀ ಆವಶ್ಯಕವಾಗಿದೆ ಎಂದರು.

ಡಾ:ಎಸ್,ಎ,ರೋಣದ ಮಾತನಾಡಿ ಯೋಗವೆಂಬುದು ಕೇವಲ ವ್ಯಾಯಾಮವಲ್ಲ ಅದೊಂದು ಜೀವನಶೈಲಿ. ಯೋಗ ಭಾರತದ 5,000 ವರ್ಷಗಳಷ್ಟು ಹಿಂದಿನ ಪುರಾತನ ತಣ್ತೀ. ಯೋಗದ ಪ್ರಕಾರ ದೇಹವು ಪಂಚಕೋಶಗಳಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ ಅನ್ನಮಯಕೋಶ, ಪ್ರಾಣಮಯ ಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಹಾಗೂ ಆನಂದಮಯಕೋಶ. ಈ ಪಂಚಕೋಶಗಳಲ್ಲಿ ಉಂಟಾದ ಆರೋಗ್ಯದ ವ್ಯತ್ಯಾಸವನ್ನು ಯೋಗ ಚಿಕಿತ್ಸೆಯ (ಇಂಟಿಗ್ರೇಟೆಡ್‌ ಅಪ್ರೋಚ್‌ ಆಫ್ ಯೋಗ ಥೆರಪಿ) ಮೂಲಕ ಗುಣಪಡಿಸಬಹುದು.

  ವಿಭಾಗೀಯ ಪ್ರಾಣಾಯಾಮ

ವಿಭಾಗೀಯ ಪ್ರಾಣಾಯಾಮದಲ್ಲಿ ಮೂರು ಹಂತಗಳಿವೆ. ಮೊದಲನೆಯದಾಗಿ ಉದರ ಭಾಗದ ಉಸಿರಾಟದ ಕ್ರಿಯೆ. ಎದೆಯ ಭಾಗದ ಉಸಿರಾದ ಕ್ರಿಯೆ, ಮೂರನೆಯದಾಗಿ ಭುಜಭಾಗದ ಉಸಿರಾಟ ಕ್ರಿಯೆ. ಈ ಎಲ್ಲ ಅಭ್ಯಾಸಗಳನ್ನು ಅ. ಉ. ಮ ಕಾರದೊಂದಿಗೆ ಅಭ್ಯಾಸ ಮಾಡುವುದರಿಂದ ಅನೇಕ ಉಪಯೋಗಗಳನ್ನು ಪಡೆಯಬಹುದು.
-  ಮಾನಸಿಕ ಒತ್ತಡ ನಿವಾರಣೆಗೊಳ್ಳುತ್ತದೆ.
-  ಉಸಿರಾಟದ ಕ್ರಿಯೆ ಸುಧಾರಣೆಯಾಗುತ್ತದೆ.
-  ಉರಿಯೂತ ಕಡಿಮೆಯಾಗುವುದರೊಂದಿಗೆ ದೇಹಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.

ಈ ಸಂಧರ್ಭದಲ್ಲಿ ಅನ್ನದಾನ ಪಿ,ಯು,ಕಾಲೇಜು ಪ್ರಾಂಶುಪಾಲರಾದ ಅನುಸೂಯಾ ಪಾಟೀಲ. ಡಾ:ಬಸವರಾಜ ಪೋಲಿಸಪಾಟೀಲ.ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ರೈಲು ಹಳಿಗೆ ತಲೆ ಕೊಟ್ಟು ಗದಗ ಜಿಲ್ಲೆ ಯುವಕ ಯಲವಿಗಿಯಲ್ಲಿ ಆತ್ಮಹತ್ಯೆ

ಹುಬ್ಬಳ್ಳಿ: ರೈಲ್ವೆ ಹಳಿಗೆ ತೆಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣೂರು ತಾಲೂಕಿನ ಯಲವಿಗಿಯಲ್ಲಿ ನಡೆದಿದೆ.…

ಕಲ್ಯಾಣ ಕರ್ನಾಟಕದಲ್ಲಿ ಪ್ರತ್ಯೇಕ ಧ್ವಜ ಹಾರಿಸಲು ಪ್ರಯತ್ನ – ಹಲವರ ಬಂಧನ!

ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ರೋಣ ಸಾಹಿತ್ಯ ಭವನದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ

ರೋಣ: ಸಾಹಿತ್ಯ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ…