ನಿಡಗುಂದಿ: ಕಲ್ಯಾಣ ಕ್ರಾಂತಿ ಯಲ್ಲಿ ಮಾಚಿದೇವರು ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ಜವಾಬ್ಧಾರಿ ವಹಿಸಿದ್ದರಿಂದ ತಾಡೋಲೆಯಲ್ಲಿದ್ದ ವಚನಗಳ ಇಂದಿಗೂ‌ ಉಳಿದಿವೆ ಎಂದು ಮಡಿವಾಳರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಅಮರ ಮಡಿವಾಳರ ಹೇಳಿದರು.
ತಾಲ್ಲೂಕು ಆಡಳಿತ ತಹಶೀಲ್ದಾರ್ ‌ಕಚೇರಿಯಲ್ಲಿ ಹಮ್ಮಿಕೊಂಡಿದ ಶರಣ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಅವರು ಮಾತನಾಡಿದರು.


ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , ‘ಮಡಿ’ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಘನತೆಗೆ ಸಾಕ್ಷಿಯಾಗಿದೆ ಎಂದರು.
ಉಪತಹಶೀಲ್ದಾರ್ ಕೆ.ವೈ. ಹೊಸಮನಿ, ಹನಮಂತ ಮಡಿವಾಳರ ,ಸಂತೋಷ ಮಡಿವಾಳರ,ವೀರೇಶ ಮಡಿವಾಳರ, ರವಿ
ಮಡಿವಾಳರ , ಎಸ್.ಎಚ್. ರಾಠೋಡ, ಎಸ್.ಡಿ. ಮಾಶ್ಯಾಳ, ಆರ್.ಎಸ್. ಇಸ್ಲಾಂಪುರ, ಹೇಮಂತ ನಾಗನೂರ , ರಾಜಶೇಖರ ಮಿಣಜಗಿ ಇದ್ದರು.


ಪಟ್ಟಣ ಪಂಚಾಯ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ‌‌ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಸಿದ್ದು ಗೌಡರ, ಪ್ರಶಾಂತ ಪಾಟೀಲ, ರುದ್ರೇಶ ಮುಗಳೊಳ್ಳಿ, ಲಕ್ಷ್ಮಿ ಶೆಟ್ಟಿ, ಗಾಯತ್ರಿ ವಾಲಿಕಾರ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಕೊವಿಡ್-19 ಸೋಂಕು: ಉಸಿರಾಟದ ಸಮಸ್ಯೆ ಸ್ಥಳದಲ್ಲೇ ಪರೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

ಗದಗ : ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ 9…

ನಾಳೆ ಆಲಮಟ್ಟಿ ಎಂ.ಎಚ್.ಎಂ.ಪಿಯು ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಆಲಮಟ್ಟಿ : ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ…

ಗ್ರಾಪಂ ಚುನಾವಣೆ : ಮತಗಟ್ಟೆ ಅಧಿಕಾರಿ ನೇಮಕಕ್ಕೆ ನಿಯಮಗಳು

ವಿದ್ಯುತ್ ಸರಬರಾಜು ಕಂಪನಿಗಳ ಖಾಸಗಿಕರಣ ಸಂಬಂಧ ಕೇಂದ್ರ ಇಂಧನ ಮಂತ್ರಾಲಯವು ಹೊರಡಿಸಿರುವ ಕರಡು(Standard bidding Documents) ಅಭಿಪ್ರಾಯ ನೀಡುವ ಕುರಿತು ಈ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಈ ವಿಷಯವನ್ನು ಪರಿಗಣಿಸಿ, ಎಲ್ಲ ವಿದ್ಉತ್ ಸರಬರಾಜು ಕಂಪನಿಗಳು ಮತ್ತು ಕೆಪಿಟಿಸಿಎಲ್ ರವರಿಂದ ಅಭಿಪ್ರಾಯವನ್ನು ಪಡೆದು ದಿನಾಂಕ 01-10-2020 ರೊಳಗೆ ಕ್ರೂಢಿಕೃತ ಅಭಿಪ್ರಾಯವನ್ನು ಇಂಧನ ಇಲಾಖೆಗೆ ಸಲ್ಲಿಸುವಂತೆ ಕೋರಲಾಗಿದೆ ಎಂದು ಇಂಧನ ಇಲಾಖೆಯ ಸರ್ಕಾರದ ಅಧಿನ ಕಾರ್ಯದರ್ಶಿ ಎನ್.ಮಂಗಳಗೌರಿ ಸುತ್ತೋಲೆ ಹೊರಡಿಸಿದ್ದಾರೆ.