ಆಲಮಟ್ಟಿ : ವಿಜಯಪುರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧೀಕ್ಷಕ ಪ್ರಕಾಶ ಗೊಂಗಡಿ ಅವರಿಗೆ 2021 ನೇ ಸಾಲಿನ ಅನುಪಮ ಸೇವಾ ಪ್ರಶಸ್ತಿ ಲಭಿಸಿದಕ್ಕೆ ಇಲ್ಲಿನ ಎಂ.ಎಚ್.ಎಂ.ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗಳು ಪ್ರಶಸ್ತಿ ಪುರಸ್ಕೃತರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.


ಅನುಪಮ ಸೇವಾ ಪ್ರಶಸ್ತಿಗೆ ಭಾಜನರಾಗಿರುವ ಅದಿಕ್ಷಕ ಪ್ರಕಾಶ ಗೊಂಗಡಿ ಅವರು ಪ.ಪೂ.ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿರುವ ಅನನ್ಯ ಸೇವಾ ಕೈಂಕರ್ಯವನ್ನು ವಿಜಯಪುರ ಜಿಲ್ಲಾ ನೌಕರರ ಸಂಘ ಗುರುತಿಸಿ ಪ್ರತಿಷ್ಟಿತ ಪುರಸ್ಕಾರ ನೀಡಿ ಸತ್ಕರಿಸಿದ್ದು ಔಚಿತ್ಯಪೂರ್ಣವಾಗಿದೆ. ನಮ್ಮೆಲ್ಲ ಉಪನ್ಯಾಸಕ ಬಳಗಕ್ಕೆ ಅತೀವ ಸಂತಸವಾಗಿದೆ. ಪ್ರಕಾಶ ಗೊಂಗಡಿ ಅವರಲ್ಲಿರುವ ಸರಳ ಮೃದು ಸ್ವಭಾವ, ಮಾನನೀಯ ಪಾರದರ್ಶಕ ಮೌಲ್ಯಾಧಾರಿತ ಗುಣಗಳು,ಎಲ್ಲರೊಂದಿಗೆ ಸಹನಾಶೀಲರಾಗಿ ಬೆರೆಯುವ ಸೃಜನಶೀಲ ಅಪರೂಪದ ನಡೆನುಡಿಗಳು ನಿಜಕ್ಕೂ ಆದರ್ಶಪ್ರಾಯವಾಗಿವೆ ಎಂದು ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜಿನ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಹೇಳಿದರು.
ಆಲಮಟ್ಟಿಯ ಎಂ.ಎಚ್.ಎಂ
ಪ.ಪೂ.ಕಾಲೇಜು ಉಪನ್ಯಾಸಕ ಬಳಗ ಪ್ರಾಂಶುಪಾಲ ಹೇಮಗಿರಿಮಠ ಅವರ ನೇತೃತ್ವದಲ್ಲಿ ವಿಜಯಪುರಕ್ಕೆ ತೆರಳಿ ಪ್ರಕಾಶ ಗೊಂಗಡಿ ದಂಪತಿ ಅವರನ್ನು ಶಾಲು ಹೊದಿಸಿ ಫಲಪುಷ್ಪವನ್ನು ನೀಡಿ ಅಭಿಮಾನಪೂರ್ವಕ ಹೃದಯ ಸ್ಪಶಿ೯ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಪಿ.ವೈ.ಧನಶೆಟ್ಚಿ, ಎಂ.ಎಸ್.ಸಜ್ಜನ, ಟಿ.ಬಿ.ಕರದಾನಿ,ದ್ವೀತಿಯ ದಜೆ೯ ಸಹಾಯಕ ಡಿ.ಟಿ.ಸಿಂಗಾರಿ ಇತರರಿದ್ದರು.

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ಇಂದು ನಾಲ್ಕು ಪಾಸಿಟಿವ್: ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ!

ಜಿಲ್ಲೆಯಲ್ಲಿ ಇಂದು 4 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಶಾಂತಿಯಿಂದ ಹೋಳಿ ಆಚರಿಸಿ

ಯಾರಿಗೂ ತೊಂದರೆಯಾಗದಂತೆ ಹೋಳಿ ಹಬ್ಬವನ್ನು ಆಚರಿಸಬೇಕು. ಹಬ್ಬದ ನೆಪದಲ್ಲಿ, ಸಾವರ್ಜನಿಕ ಸ್ಥಳಗಳಲ್ಲಿ ಅಶ್ಲೀಲ ಬರಹಗಳನ್ನು ಬರೆಯುವುದು, ಶಾಲಾ ಕಾಲೇಜುಗಳ ಗೋಡೆಗಳಿಗೆ ಬಣ್ಣ ಎರೆಚುವುದು ಕಂಡುಬಂದಲ್ಲಿ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದರೆ ಅಂತಹವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು.

ವಿದ್ಯುತ್ ಸ್ಪರ್ಷ : ಪೇಂಟರ್ ಸಾವು

ನರಗುಂದ: ವಿದ್ಯುತ್ ಸ್ಪರ್ಶಿಸಿ ಪೇಂಟರ್ ಕಾರ್ಮಿಕ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.…

ಕೊರೊನಾ ಭಯ : ಇಂದು ವಿಕಾಸಸೌಧಕ್ಕೆ ರಜೆ!

ಬೆಂಗಳೂರು: ವಿಕಾಸಸೌಧದಲ್ಲಿ ಕೊರೊನಾ ಆತಂಕ ಮನೆ ಮಾಡಿರುವುದರಿಂದಾಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಶುಕ್ರವಾರ ಕಚೇರಿ…