ಉತ್ತರ ಪ್ರಭ ಸುದ್ದಿ
ರೋಣ :
ತಾಲೂಕಾ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತದವತಿಯಿಂದ 73 ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.
ಕಂದಾಯ ಶಿಕ್ಷಣ ಸಮಾಜ ಕಲ್ಯಾಣ ಇನ್ನುಳಿದ ಕೆಲ ಇಲಾಖೆಗಳ ಸಹಯೋಗದಲ್ಲಿ 73 ನೇ ಗಣರಾಜ್ಯೋತ್ಸವವನ್ನು ಸರಳಾತಿಸರಳ ಆಚರಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ತಹಸೀಲ್ದಾರರಾದ ಜಿ ಬಿ ಜಕ್ಕನಗೌಡರ ವಹಿಸಿ ನೆರದಿದ್ದ ಅಲ್ಪ ಜನರಿಗೆ ಶುಭಸಂದೇಶ ವಾಚನ ಮಾಡಿ ತಿಳಿಸಿದರು.


ಬಳಿಕ ಮುಖ್ಯ ಅತಿಥಿ ಸ್ಥಾನ ವಹಿಸಿ ಬಿ ಎಂ ಮಾಳೇಕೊಪ್ಪ ಶಿಶು ಅಭಿವೃದ್ಧಿ ಅಧಿಕಾರಿ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯ ನಂತರ ಸುಭದ್ರ ಆಡಳಿತ ನಡೆಸುವ ವಿಚಾರದಲ್ಲಿ ಜನೇವರಿ 26 1950 ರಂದು ಡಾ ಬಿ ಆರ್ ಅಂಬೇಡ್ಕರವರು ರಚಿಸಿದ ಸಂವಿಧಾನದ ಜಾರಿಗೆ ತರಲಾಯಿತು. ಸಂವಿಧಾನವು ಪ್ರಜಾಪ್ರಭುತ್ವದ ತಳಪಾಯವಾಗಿದೆ ಶಾಸಕಾಂಗ ಕಾರ್ಯಂಗ ನ್ಯಾಯಾಂಗಗಳ ಅಧೀನದಲ್ಲಿ ಆಡಳಿತ ಮಾಡುತ್ತಾ ದೇಶದ ಅಭಿವೃದ್ಧಿಗೆ ಮುನ್ನುಡಿಯಾಗಿದೆ.
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ಆಯ್ಕೆ ಮಾಡಿ ಪ್ರಜೆಗಳಿಗೋಸ್ಕರ ಆಳ್ವಿಕೆ ನಡೆಸುವ ಒಂದು ಮಹತ್ವದ ದೇಶ ನಮ್ಮದಾಗಿದೆ, ಹಲವಾರು ಪರಿಛೇದಗಳು ಹಲವಾರು ಕಲಂಗಳನ್ನೊಳಗೊಂಡ ಸಂವಿಧಾನ ನಮ್ಮದು ಪ್ರತಿಯೊಬ್ಬ ಪ್ರಜೆಗೂ ಮೂಲ ಭೂತ ಹಕ್ಕುಗಳನ್ನು ನೀಡುವ ದೇಶ ನಮ್ಮದು ಎಂದರು.
ತದನಂತರ ಸಂತೋಷ ಪಾಟೀಲ ಅತಿಥಿ ಸ್ಥಾನದಲ್ಲಿ ಉಪಸ್ಥಿರಿದ್ದು ಗಣರಾಜ್ಯೋತ್ಸವವನ್ನು ಉದ್ದೇಶಿಸಿ ಮಾತನಾಡಿ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗಳಿಗೂ ಮೂಲಭೂತ ಸೌಕರ್ಯ ಒದಗಿಸಿಕೊಡುವುದಲ್ಲದೆ ಪ್ರತಿಯೂಬ್ಬ ಪ್ರಜೆಗೂ ಎಲ್ಲಾ ತರಹದ ಸ್ವಾತಂತ್ರ್ಯ ನೀಡಿರುತ್ತದೆ ನಮ್ಮ ಡಾ ಬಾಬಾ ಸಾಹೇಬ್ ಅಂಬೇಡ್ಕರವರು ರಚಿಸಿದ ಈ ಸಂವಿಧಾನ ಇಲ್ಲದಿದ್ದರೆ ಎಷ್ಟೋ ದೇಶಗಳಲ್ಲಿ ಏಕಾಧಿಪತ್ಯದಲ್ಲಿ ನಡೆಯುವ ಆಡಳಿತದಲ್ಲಿ ಮರು ಚುನಾವಣೆ ನಡೆದು ಯಾವುದೇ ಒಂದು ಚೌಕಟ್ಟಿಯಿಲ್ಲದೆ ಸರ್ವಾಧಿಕಾರಿಯಾಗಿ ಮೆರೆಯುವಂತಾಗುವವು. ಆದರೆ ನಮ್ಮ ದೇಶದಲ್ಲಿ ಆ ರೀತಿಯಾಗದೆ ಜನರೇ ಆಯ್ಕೆ ಮಾಡುವದರೊಂದಿಗೆ ಯಾವುದೇ ತರಹದ ಜಾತಿ ಭೇದ ಬಡವ ಬಲ್ಲಿದ ಎಂಬ ತಾರತಮ್ಯ ಇರದೇ ಎಲ್ಲರೂ ಒಂದೇ ಎನ್ನುವ ಏಕತಾ ಭಾವನೆಯಿಂದ ಕೂಡಿರುವ ರಾಷ್ಟ್ರ ನಮ್ಮದು ಆದ್ದರಿಂದ ಒಬ್ಬ ದಲಿತ ಪ್ರತಿಭಾವಂತ ವ್ಯಕ್ತಿ ರಾಷ್ಟ್ರಪತಿ ಯಾಗಿರುವುದು ಎಷ್ಟೋ ಪ್ರಮುಖ ಹುದ್ದೆಗಳಲ್ಲಿ ಇರುವುದು ನಮ್ಮ ದೇಶದಲ್ಲಿದೇ ಎಂದರೆ ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯೇ ಅಲ್ಲವೇ ಎಂದರು.
ಈ ಸಂದರ್ಭದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣ ಗಡಗಿ ಸಿಪಿಐ ಸುಧೀರ್ ಬೆಂಕಿ ಸಮಾಜಕಲ್ಯಾಣ ಅಧಿಕಾರಿ ಬಿರಾದಾರ ವೇಧಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಬಸವರಾಜ ಅಂಗಡಿ ಅಕ್ಷರ ದಾಸೋಹ ಅಧಿಕಾರಿ ನಡೆಸಿದರೆ ಗವಿ ಗುರುಗಳು ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *

You May Also Like

ಶಾಲೆ ತೆರೆಯಬಾರದು ಎನ್ನುವುದಕ್ಕೆ ಸಿದ್ದರಾಮಯ್ಯ ಕೊಟ್ಟ ಉತ್ತರವೇನು ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಮೂರು ಸಿ.ಬಿ.ಎಸ್.ಇ ಶಾಲೆಗಳ ಫಲಿತಾಂಶ ಶೇ.100 ಕ್ಕೆ 100 ರಷ್ಟು

ಗದಗ : ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ವತಿಯಿಂದ ಗದಗ, ಮುಂಡರಗಿ ಹಾಗು ಗಜೇಂದ್ರಗಡ ಪಟ್ಟಣದಲ್ಲಿ…

ಈಶಾನ್ಯ ದೆಹಲಿ ಹೊರತು ಪಡಿಸಿ ದೇಶದಲ್ಲಿ 10ನೇ ತರಗತಿ ಸಿಬಿಎಸ್ಇ ಪರೀಕ್ಷೆಗೆ ತಾತ್ಕಾಲಿಕ ತಡೆ

ಹತ್ತನೇ ತರಗತಿ ಸಿಬಿಎಸ್ಇ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.

ಅಗ್ನಿ ಅವಘಡ ತಪ್ಪಿದ ಬಾರಿ ದುರಂತ

ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಸ್ಪರ್ಶಗೊಂಡು ಹೊಟ್ಟಿನ ಬಣವಿ ಸುಟ್ಟು ಕರಕಲಾದ ಘಟನೆ ಜರುಗಿದೆ.