ಉತ್ತರಪ್ರಭ
ಗದಗ:ಟ್ರ್ಯಾಕ್ಟರ್ ಮತ್ತು ಕಾರ ನಡುವೆ ಮುಖಾಮುಖಿ ನಡೆದು ಟ್ರ್ಯಾಕ್ಟರ್ ತುಂಡಾದ ಘಟನೆ ಗದಗ ಸಮೀಪದ ಚಿಕ್ಕಟ್ಟಿ ಶಾಲೆಯ ಹತ್ತಿರ ನಿನ್ನೆ ರಾತ್ರಿ ನಡೆದಿದೆ.
ಟ್ರ್ಯಾಕ್ಟರ ಮತ್ತು ಕಾರು ರಭಸವಾಗಿ ಡಿಕ್ಕಿಯಾದ ಪರಿಣಾಮ ಟ್ರ್ಯಾಕ್ಟರ್ ತುಂಡು ತುಂಡಾಗಿ ಬಿದ್ದಿದೆ. ಟ್ರ್ಯಾಕ್ಟರ್ ಅಥವಾ ಕಾರಿನ ಚಾಲಕರ ಬಗ್ಗೆ ಮಾಹಿತಿ ಲಭ್ಯ ವಿಲ್ಲ, ಆದರೆ ಗುದ್ದಿದ ರಭಸ ನೋಡಿದರೆ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ.





ಟ್ರ್ಯಾಕ್ಟರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ್ದು ಎಂದು ತಿಳಿದು ಬಂದಿದೆ. ಕಾರು ಚೆನೈ ಮೂಲದಾಗಿದ್ದು ಕಾರಿನ ಮಾಲಕರ ಬಗ್ಗೆ ಯಾವುದೇ ರೀತಿಯ ಮಾಹಿತಿ ದೊರೆತಿರುವುದಿಲ್ಲ ಮತ್ತು ಗಾಯಾಳುಗಳ ಬಗ್ಗೆ ಮಾಹಿತಿ ಲಭ್ಯವಿಲ್ಲ ಈ ಕುರಿತು ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.