ಉತ್ತರಪ್ರಭ ಸುದ್ದಿ

ಕೊಪ್ಪಳ: ತಾಲೂಕಿನ ಲೆಬಗೇರಿ ಗ್ರಾಮದ ನಾಗರಾಜ (೩೫) ಜಡಿಯಪ್ಪ ಚಿಲವಾಡಗಿ ಎಂಬಾತನು ಬ್ಯಾಂಕ್ ಸಾಲ ತೀರಿಸಲಾಗದೇ ಜಮೀನಿನಲ್ಲಿ ನೇಣಿಗೆ ಶರಣಾದ ಘಟನೆ ನಿನ್ನೆ ಸಾಯಂಕಾಲ ನಡೆದಿದೆ.


ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ ಇದ್ದಾರೆ. ಈ ಹಿಂದೆ ಇತನು ಅಂಚೆ ಕಚೇರಿಯಲ್ಲಿ ಕೆಲಸ ಮಾಡಿ ನಂತರ ಖಾಸಗಿ ಬ್ಯಾಂಕಿನಲ್ಲಿ ಕೊಪ್ಪಳ ಹಾಗೂ ಇರಕಲ್ಗಡದಲ್ಲಿ ಪಿಗ್ಮಿ ಏಜೆಂಟ್ ರಾಗಿ ಕೆಲಸ ಮಾಡುತ್ತಿದ್ದನು ಎನ್ನಲಾಗುತ್ತಿದೆ.
ಬ್ಯಾಂಕಿನಲ್ಲಿ ಒಟ್ಟು 28 ಲಕ್ಷಗಳ ಸಾಲ ಮಾಡಿದ್ದು, ಬ್ಯಾಂಕ್ ಸಾಲ ಕಟ್ಟಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿದ್ದಾನೆ. ಬ್ಯಾಂಕ್ ನವರ ಸಾಕಷ್ಟು ಕಿರುಕುಳದಿಂದ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು ತಿವ್ರಗೊಂಡ ಸೋಂಕು, ಸಾವು!: 2738 ಪಾಸಿಟಿವ್, 73 ಸಾವು

ದಿನೇ ದಿನೇ ರಾಜ್ಯದಲ್ಲಿ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದು, ಇನ್ನೊಂದು ಕಡೆ ಸತತ ನಾಲ್ಕು ದಿನಗಳಿಂದ ಪ್ರತಿ ದಿನ 70ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಈ ಮೂಲಕ ಕೇಸ್ ಲೋಡ್ ನಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿ ಮುಂದುವರೆದಿದೆ.

ಹೊರಗಿನಿಂದ ಬರುವ ಪ್ರತಿಯೊಬ್ಬರಿಗೂ ಕ್ವಾರಂಟೈನ್ ಕಡ್ಡಾಯ!

ಲಾಕ್ ಡೌನ್ ವಿನಾಯಿತಿ ಬೆನ್ನಲ್ಲಿಯೇ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆಗಮಿಸುವ ಎಲ್ಲರನ್ನೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದಾಗಿ ಆದೇಶಿಸಿದೆ.

ರಷ್ಯಾ ಪ್ರಧಾನಿಯನ್ನೂ ಬಿಡಲಿಲ್ಲ ಕೊರೊನಾ!

ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೂ ಕೊರೊನಾ ಮಹಾಮಾರಿ ಬೆನ್ನು ಹತ್ತಿದೆ ಎಂದು ತಿಳಿದು ಬಂದಿದೆ.

ಪಿಯು ಪರೀಕ್ಷೆಗೆ ನಿಯಮವೇನು?

ಬೆಂಗಳೂರ: ಇದೆ ಜೂ.18 ರಂದು ನಡೆಯಲಿರುವ ಪಿಯು ಇಂಗ್ಲೀಷ್ ಪರೀಕ್ಷೆ‌ ನಡೆಯಲಿದೆ. ಪರೀಕ್ಷೆಗೆ ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ತಮ್ಮ ಊರು ಅಥವಾ ಸಮೀಪದ ಊರುಗಳಲ್ಲೆ ಪರೀಕ್ಷೆ ಬರೆಯಲು ಪಿಯು ಬೋರ್ಡ್ ಅವಕಾಶ ನೀಡಿದೆ. ತಮ್ಮ ಹೆಸರು ಇರುವ ಆನ್ ಲೈನ್ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಆಯ್ಕೆ ಮಾಡಿಕೊಂಡ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಈ ಬಗ್ಗೆ ಇಂದು ರಾಜ್ಯದ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದ್ದು ಜೂ.7 ರ ಒಳಗಾಗಿ ಹೊರರಾಜ್ಯದ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಹೊರಬೀಳಲಿದೆ.