ವರದಿ : ವಿಠಲ‌ ಕೆಳೂತ್


ಮಸ್ಕಿ: ಬೆಂಗಳೂರುನಲ್ಲಿನ ಪುನೀತ ರಾಜಕುಮಾರ ಸಮಾಧಿವರೆಗೆ ಪಾದಯಾತ್ರೆ ನಡೆಸಿರುವ ಅಪ್ಪು ಅಭಿಮಾನಿಗೆ ಇಲ್ಲಿನ ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಐಕೂರು ಗ್ರಾಮದ ವಿಶೇಷ ಚೇತನ ರವಿಕುಮಾರ ಎಂಬ ಯುವಕ ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿನ ಅಪ್ಪುವಿನ ಸಮಾಧಿವರೆಗೆ ಪಾದಯಾತ್ರೆ ಕೈಗೊಂಡಿದ್ದನ್ನು ಕಂಡು ಸ್ಥಳೀಯ ಬಿಜೆಪಿ ಮುಖಂಡರು ಪಟ್ಟಣದ ಹಳೇ ಬಸ್ ನಿಲ್ದಾಣದ‌‌‌ ಬಳಿ ಸನ್ಮಾನಿಸಿ ಶುಭ ಹಾರೈಸಿದರು.
ರಾಜಧಾನಿ ಬೆಂಗಳೂರುವರೆಗೆ ನಿಮ್ಮ ಪಾದಯಾತ್ರೆ ಸುಗಮವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರವಿಗೌಡ ಪಾಟೀಲ, ಚೇತನ ಪಾಟೀಲ, ಶರಣಬಸವ ಸೊಪ್ಪಿಮಠ, ಮಲ್ಲಿಕಾರ್ಜುನ ಬ್ಯಾಳಿ, ಸಂತೋಷ ಪತ್ತಾರ, ಮೌನೇಶ ನಾಯಕ, ದುರ್ಗಾಪ್ರಸಾದ ತೋರಣದಿನ್ನಿ ಶಿವರಾಜ ಹರಸೂರ, ಶರಣಗೌಡ ಪೊಲೀಸ ಪಾಟೀಲ, ಅಮರಯ್ಯ ಸೊಪ್ಪಿಮಠ, ಮಲ್ಲಿಕಾರ್ಜುನ ಬೈಲಗುಡ್ಡ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ ಆರು ಕಂಟೇನ್‍ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

ಇಂದು ಮತ್ತೆ ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ.

ರಾಜಕೀಯ ಹಗ್ಗ ಜಗ್ಗಾಟ: ಪಾಳುಬಿದ್ದ ಆಶ್ರಯ ಮನೆಗಳ ಪ್ರವೇಶಿಸಿದ ಜನರು

ನರೇಗಲ್ಲ: ರಾಜಕೀಯ ನಾಯಕರ ಹಗ್ಗ ಜಗ್ಗಾಟದಲ್ಲಿ 10 ವರ್ಷಗಳಿಂದ ಪಾಳುಬಿದಿದ್ದ ಆಶ್ರಯ ಮನೆಳಿಗೆ ಜನಸಾಮಾನ್ಯರು ಪ್ರವೇಶ ಪಡೆದಿದ್ದಾರೆ. ಇರುವ ಆಶ್ರಯ ಮನೆಗಳು ತಮ್ಮ ಹೆಸರಿಗೆ ಬಾರದಿದ್ದರೂ ಆಡಳಿತ ಯಂತ್ರದ ನಿರ್ಲಕ್ಷ್ಯ ಹಾಗೂ ತಮ್ಮ ಸಂಕಷ್ಟ ಸಹಿಸಲಾರದೆ ಮನೆಗಳನ್ನು ಸ್ವಚ್ಛಗೊಳಿಸಿಕೊಂಡು ಪ್ರವೇಶಿಸಿದ್ದಾರೆ.

ಡ್ರಗ್ಸ್ ಕೇಸ್ ಬಗ್ಗೆ ನನಗೆ ಗೊತ್ತಿಲ್ಲ ಎಂದ ಮಾಜಿ ಸಚಿವ ರುದ್ರಪ್ಪ ಲಮಾಣಿ!

ಬೆಂಗಳೂರು : ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ಪುತ್ರ ದರ್ಶನ್ ಬಗ್ಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಸೂರ್ಯ ನಮಸ್ಕಾರವೇ ಜೀವನ ಶಕ್ತಿಯ ಆಧಾರ

ಮುಳಗುಂದ : ಸಮೀಪದ ಸೊರಟೂರ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸಂಕ್ರಾಂತಿಯ ದಿನ…