ಉತ್ತರ ಪ್ರಭ ಸುದ್ದಿ
ರೋಣ :
ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ರೋಣ ತಾಲೂಕಾ ಭಾರತೀಯ ಕಿಶಾನ್ ಸಂಘದವತಿಯಿಂದ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ರಿಗೆ ಮನವಿ ಸಲ್ಲಿಸಿದರು.
ರೈತರ ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ನೀಡದೇ ಅನ್ನದಾತರನ್ನು ಸಾಲಗಾರನ್ನಾಗಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿವೆ ಈಗಿನ ಸರ್ಕಾರಗಳು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಎಷ್ಟೋ ಕಂಪನಿಗಳು ತಾವು ತಯಾರಿಸಿದ ಉತ್ಪನ್ನಗಳಿಗೆ ತಾವೇ ದರ ನಿಗಧಿ ಮಾಡಿಕೊಳ್ಳುತ್ತವೆ ಅವುಗಳಂತೆ ನಮ್ಮ ಕೃಷಿ ಉತ್ಪನ್ನಗಳಿಗೆ ಬೆಳೆದ ರೈತರೇ ಬೆಲೆ ನಿಗದಿಮಾಡುವಂತಹ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮನವಿ ಮಾಡಿದರು.
ಇಲ್ಲವಾದರೆ ಸರ್ಕಾರ ರೈತರ ಖರ್ಚು ವೆಚ್ಚ ಪರಿಶೀಲನೆ ಮಾಡಿ ದುಡಿಮೆಗೆ ತಕ್ಕ ಒಂದು ಒಳ್ಳೆಯ ಲಾಭದಾಯಕ ಬೆಲೆ ಘೋಷಣೆ ಮಾಡಬೇಕು, ಸರ್ಕಾರ ಘೋಷಣೆ ಮಾಡಿದ ಬೆಲೆಗಿಂತ ಕಡಿಮೆ ಬೆಲೆಗೆ ಕಡಿಮೆ ಕೊಂಡುಕೊಳ್ಳದಂತೆ ನಿಯಮ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖ ಮಾಡಿ ಆಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿ ಜಿ ಪಾಟೀಲ ಅಧ್ಯಕ್ಷರು ಭಾರತೀಯ ಕಿಶಾನ್ ಸಂಘ ರೋಣ ತಾಲೂಕ, ಬಿ ಎ ಅವಾರಿ, ಎಂ ಎಸ್ ಉದ್ದುರೂ, ಎಸ್ ಕೆ ಕಾಜಗಾರ್, ವಿ ಎಂ ಪಾಟೀಲ, ಎಂ ಸಿ ಅವಾರಿ.

Leave a Reply

Your email address will not be published. Required fields are marked *

You May Also Like

NEET 2021 :ವೈದ್ಯಕೀಯ ಕಾಲೇಜು ಪ್ರವೇಶ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಒಂದು ತಿಂಗಳ ವಿಳಂಭ ಸಾಧ್ಯತೆ !

ಉತ್ತರಪ್ರಭ ಸುದ್ದಿ ದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2021 ಫಲಿತಾಂಶವನ್ನು ಘೋಷಿಸಿದ…

ಕೆ.ಎಸ್.ಆರ್.ಟಿ.ಸಿ ನೌಕರರ ವಿರುದ್ಧ ಹುನ್ನಾರ!: ಸಂಬಳವಿಲ್ಲದೇ ಒಂದ್ ವರ್ಷ ರಜೆಗೆ ನಿರ್ಧಾರ!

ಕರ್ನಾಟಕ ರಾಜ್ಯ ಸಾರಿಗೆ ನಿಗಮದಲ್ಲಿ ನೌಕರರ ಹಕ್ಕುಗಳನ್ನು ದಮನ ಮಾಡಲು ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಚಾಲಕರು ಮತ್ತು ನಿರ್ವಾಹಕರು ಆತಂಕಗೊಂಡಿದ್ದಾರೆ.

ಎಷ್ಟು ವಿರೋಧಿಸುತ್ತಾರೋ ಅಷ್ಟು ಗಟ್ಟಿಯಾಗುತ್ತೇನೆ

ರಮೇಶ್ ಜಾರಕಿಹೊಳಿ ಅವರನ್ನು ನಾವೇ ಮಂತ್ರಿ ಮಾಡಿದ್ದೇವೆ. ಹೈಕಮಾಂಡ್ ಗೆ ನಾವೇ ಶಿಫಾರಸು ಮಾಡಿದ್ದೇವೆ. ನಾನು ನನ್ನಿಂದ ಅಂದವರೆಲ್ಲ ಹೆಸರು ಇಲ್ಲದಂಗೆ ಹೋಗಿದ್ದಾರೆ. ಅವರು ಎಷ್ಟು ವಿರೋಧಿಸುತ್ತಾರೆಯೋ ನಾನು ಅಷ್ಟು ಗಟ್ಟಿಯಾಗುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.