ಗದಗ:ಜಿಲ್ಲೆಯಲ್ಲಿ ಕೂರೂನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎರಡೇ ದಿನದಲ್ಲಿ ಬರೋಬ್ಬರಿ 37 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಮಂಗಳವಾರ ಒಂದೇ ದಿನ 21 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 84 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಪತ್ತೆಯಾಗಿರುವ 84 ಸೋಂಕಿನ ಪ್ರಕರಣಗಳಲ್ಲಿ ಗದಗ ತಾಲ್ಲೂಕು ಒಂದರಲ್ಲೇ 51 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಮುಂಡರಗಿಯಲ್ಲಿ 21, ನರಗುಂದದಲ್ಲಿ 01, ರೋಣದಲ್ಲಿ 06, ಶಿರಹಟ್ಟಿಯಲ್ಲಿ 04 ಪ್ರಕರಣಗಳು ಪತ್ತೆಯಾಗಿವೆ.

ಗದಗನ ವಿಎನ್‌ಟಿ ರೋಡ್, ಗಾಂಧಿನಗರ(ಸೆಟ್ಲಮೆಂಟ್), ಸಂಕಣ್ಣವರ ಬಡಾವಣೆ, ಇಮಾಮ್‌ಹುಸೇನ್ ಕಾಲನಿ, ಗದಗ ತಾಲ್ಲೂಕಿನ ಅಡವಿಸೋಮಾಪುರ ದೊಡ್ಡತಾಂಡಾ, ಮಲ್ಲಸಮುದ್ರ, ನೀರಲಗಿ, ಮುಂಡರಗಿಯ ಸ್ವಾಮಿ ವಿವೇಕಾನಂದ ನಗರ, ಕೋಟೆಭಾಗ, ಮಂಜುನಾಥ ನಗರ, ಮುಂಡರಗಿ ತಾಲ್ಲೂಕಿನ ಕೋರ್ಲಹಳ್ಳಿ, ಬೀಡನಾಳ, ಬಸಾಪುರ, ನರಗುಂದದ ಟಿಎಲ್‌ಎಚ್ ಕಚೇರಿ, ರೋಣ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸವಡಿ, ರಾಂಪೂರ ಗ್ರಾಮದ ನಿವಾಸಿಗಳು ಸೇರಿದಂತೆ 21 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಮಂಗಳವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 6,97,019 ಮಾದರಿ ಸಂಗ್ರಹಿಸಿದ್ದು 6,70,857 ನಕಾರಾತ್ಮಕವಾಗಿವೆ. ಮಂಗಳವಾರದ 21 ಪ್ರಕರಣ ಸೇರಿ ಒಟ್ಟು 26,164 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ ಮೂವರು ಸೇರಿ ಒಟ್ಟು 25,761 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 84 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಎಸ್ಪಿ ಯತೀಶ ಎನ್ ವರ್ಗಾವಣೆ

ಉತ್ತರಪ್ರಭ ಸುದ್ದಿ ಗದಗ: ಗದಗ ಜಿಲ್ಲೆಗೆ ನೂತನ ಎಸ್ಪಿ ಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಅವರನ್ನು ನೂತನ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಆಗಮಿಸಲಿದ್ದು .ಎನ್ ಯತೀಶರವರನ್ನು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ .ಎನ್ ಯತೀಶರವರು ಕೊವಿಡ್ ಸಮಯದಲ್ಲಿ ಮಾಡಿದ ಕಾರ್ಯ ಗದುಗಿನ ಜನತೆ ಮರೆಯಲಾರರು.

ಮಾಧ್ಯಮ ಪ್ರತಿನಿಧಿ ಮೇಲೆ ತಹಶೀಲ್ದಾರ ದರ್ಪ ಖಂಡಿಸಿ ರೋಣದಲ್ಲಿ ಮನವಿ

ಗಜೇಂದ್ರಗಡ ತಹಶೀಲ್ದಾರ್ ತೋರಿದ ಪತ್ರಿಕಾ ಪ್ರತಿನಿಧಿ ಮೇಲೆ ತೋರಿದ ದರ್ಪ ಖಂಡಿಸಿ ರೋಣ ತಾಲೂಕ ಕಾರ್ಯ ನಿರತ ಪತ್ರಕರ್ತ ಸಂಘದಿಂದ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ನಾಯಕ ಖರ್ಗೆ ಕುಟುಂಬಕ್ಕೆ ಜೀವಬೆದರಿಕೆ..!

ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಜೀವ ಬೆದರಿಕೆಯ ಕರೆ ಬಂದಿದೆ…