ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ 2 ಸ್ಥಾನಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಶನಿವಾರ ಒಟ್ಟು 7 ಜನ ನಾಮಪತ್ರ ಸಲ್ಲಿಸಿದರು.


ಅರ್ಬನ್ ಬ್ಯಾಂಕ್ ನ ಹಾಲಿ ಅಧ್ಯಕ್ಷರಾಗಿದ್ದ ಸಿ.ಬಿ.ಬಡ್ನಿ ಹಾಗೂ ನಿರ್ದೇಕರಾಗಿದ್ದ ಆರ್.ಎನ್.ದೇಶಪಾಂಡೆ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.


2 ಸ್ಥಾನಗಳ ಪೈಕಿ ಸಾಮಾನ್ಯ ಕ್ಷೇತ್ರದಿಂದ ಮುರಳಿಧರ ದುರ್ಗಿಗುಡಿ, ಎಂ.ಡಿ.ಬಟ್ಟೂರ, ಅಶೋಕ ಹುಣಸಿಮರದ, ಎನ್.ಆರ್.ದೇಶಪಾಂಡೆ ನಾಮಪತ್ರ ಸಲ್ಲಿಸಿದ್ದಾರೆ. ಹಿಂದುಳಿದ ಅ ವರ್ಗದ ಮೀಸಲಿರುವ ಕ್ಷೇತ್ರಕ್ಕೆ ಹೊನ್ನಪ್ಪ ನೀಲಗುಂದ, ಎಸ್.ಸಿ. ಬಡ್ನಿ, ಮಹಾಂತಪ್ಪ ಬಡ್ನಿ ಸೇರಿ ಒಟ್ಟು 7 ನಾಮಪತ್ರಗಳು ಸಲ್ಲಿಕೆ ಆಗಿವೆ.


ಜ.9 ರಂದು ಪರಿಶೀಲನೆ, ಜ.10 ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶವಿದ್ದು, ಜ.16 ರಂದು ಮತದಾನ ನಡೆದು ಆವತ್ತೇ ಫಲಿತಾಂಶ ಪ್ರಕಟವಾಗಲಿದೆ. ಎಂದು ಚುನಾವಣಾಧಿಕಾರಿ ಪ್ರಶಾಂತ ಮುಧೋಳ ತಿಳಿಸಿದರು.

ಮುಳಗುಂದ ಅರ್ಬನ್ ಬ್ಯಾಂಕನ ಉಪ ಚುನಾವಣೆಗೆ ಹೊನ್ನಪ್ಪ ನೀಲಗುಂದ ಅವರು ಚುನಾವಣಾಧಿಕಾರಿ ಪ್ರಶಾಂತ ಮುಧೋಳ ಅವರಿಗೆ ನಾಮಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು ಮತ್ತೆ 69 ಕೊರೋನಾ ಕೇಸ್..!

ಇಂದು ಸಂಜೆ ಬಿಡುಗಡೆ ಮಾಡಿದ ಹೆಲ್ಥ್ ಬುಲಿಟಿನ್ ನಲ್ಲಿ ರಾಜ್ಯದಲ್ಲಿ ಇಂದು ಮತ್ತೆ 69 ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ 1056ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ವೈದ್ಯಕೀಯ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ರಾಜ್ಯದಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ..!

ಉತ್ತರಪ್ರಭ ಸುದ್ದಿ ಕೊಪ್ಪಳ: ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ಪಠ್ಯಕ್ರಮಗಳು ನಡೆಯಬೇಕಿತ್ತು. ಆದರೆ…

ಕೋರೊನಾ ನಿರ್ವಹಣೆ ಸರಿಯಾಗಿದೆ, ಆತಂಕ ಬೇಡ: ಸಚಿವ ಸಿ.ಸಿ. ಪಾಟೀಲ್

ಕೋರೊನಾ ನಿವ೯ಹಣೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಕಾ೯ರ ಹಾಗೂ ಜಿಲ್ಲಾಡಳಿತ ಸಮಥ೯ವಾಗಿವೆ. ಯಾವುದೆ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಬೈಕ್ ಡಿಕ್ಕಿ: ಪಾದಚಾರಿ ಸಾವು

ಹಿಂದಿನಿಂದ ಬಂದ ಬೈಕ್ ಹರಿದು ವಾಯುವಿಹಾರಿ ಸ್ಥಳದಲ್ಲೇ ಸಾವಿನಪ್ಪಿದ ಘಟನೆ ತಾಲೂಕಿನ ರಾಮಗೇರಿ ಗ್ರಾಮದಲ್ಲಿ ನಡೆದಿದೆ. ಶನಿವಾರ ಬೆಳಗಿನ ಸಮಯದಲ್ಲ್ಲಿ ವಾಯುವ ವಿಹಾರಕ್ಕೆ ತೆರಳಿದ್ದ ಹನಮಂತಪ್ಪ ಕಾಳೆ(52) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.