ಮುಳಗುಂದ : ಸಮೀಪದ ಚಿಂಚಲಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಕಾಂದಬರಿ ಪಿತಾಮಹ ಗಳಗನಾಥರ ಜನ್ಮದಿನಾಚರಣೆ, ಓದುವ ಬೆಳಕು ಕಾರ್ಯಕ್ರಮದಡಿ ಆಯೋಜಿಸಿದ್ದ ಸ್ಪರ್ಧೇಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್.ಎ.ಅರಮನಿ ಮಾತನಾಡಿ, ಗ್ರಂಥಾಲಯಗಳು ಜ್ಞಾನದ ಭಂಡಾರವಾಗಿದ್ದು, ಶಾಲೆ ಮಕ್ಕಳು ನಿತ್ಯ ಕೆಲ ಸಮಯ ಗ್ರಂಥಾಲಯಕ್ಕೆ ಭೇಟಿ ಕೊಟ್ಟು ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಎಂದರು.
ನಂತರ ಓದಿನ ಅಭಿರುಚಿ ಹೆಚ್ಚುಸುವ” ಮಕ್ಕಳ ನಡೆ ಓದಿನ ಮನೆಕಡೆ” ಎನ್ನುವ ವಿನೂತನ ಕಾರ್ಯಕ್ರಮದಡಿ ಶಾಲೆ ಮಕ್ಕಳಿಗೆ ಏರ್ಪಡಿಸಿದ್ದ ಕಥಾ ಸ್ಪರ್ಧೆ, ರಸಪ್ರಶ್ನೆ, ಪ್ರಬಂಧ, ಶುದ್ದ ಬರಹ, ಪುಸ್ತಕ ಓದು, ದೇಶ ಭಕ್ತಿ ಹಾಡುವುದು, ಚಿತ್ರಕಲೆ, ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಪ್ರಧಾನ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಮಂಜುನಾಥ ಹೂಗಾರ ಪ್ರಾಸ್ಥಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಎನ್.ಕತ್ತಿ, ಚನ್ನಯ್ಯ ನಂದಿಕೋಲ್ಮಠ, ಫಕ್ಕಿರಪ್ಪ ಬಾಲರಡ್ಡಿ, ರುದ್ರಮ್ಮ ಕತ್ತಿ, ಗಿರಿಜಮ್ಮ ಅರಮನಿ, ಪಾರವ್ವ ಕತ್ತಿ, ಕೆ. ನದಾಫ್, ಸದ್ದಾಂಹುಸೇನ ಸಂದಿಮನಿ, ರಾಜೇಸಾಬ ಕೊಕ್ಕರಗುಂದಿ ಹಾಗೂ ಶಾಲೆ ಮಕ್ಕಳು ಇದ್ದರು.

Leave a Reply

Your email address will not be published. Required fields are marked *

You May Also Like

ಅನಾಮಧೇಯ ವ್ಯಕ್ತಿಯ ಶವಪತ್ತೆ: ಗುರುತು ಪತ್ತೆಗೆ ಮನವಿ

ಗಜೇಂದ್ರಗಡ : ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಸಮೀಪದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಪಟ್ಟಣದ…

ನಗರಸಭೆ ಚುನಾವಣೆ :ವಾರ್ಡ ನಂ22ರ ಕಾಂಗ್ರೇಸ್ ಅಭ್ಯರ್ಥಿ ಪರ ಮಾಜಿ ಶಾಸಕ ಡಿ ಆರ್ ಪಾಟೀಲ ಗಂಗಿಮಡಿಯಲ್ಲಿ ಪ್ರಚಾರ

ಗದಗ:ನಗರಸಭೆ ಚುನಾವಣೆ ಡಿ. 20-12-2021 ರಂದು ವಾರ್ಡ್ ನಂ 22 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ…

ಮಾಲ್, ಹೋಟೆಲ್ ಜೂ. 21 ರಿಂದ ತೆರೆಯಲು ತಾಂತ್ರಿಕ ಸಮಿತಿ ಸಲಹೆ ಒಪ್ಪಿಗೆ? ಸಲಹೆಗಳೇನ್ನು

ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ಗುಂಪು ಗುಂಪು ಸೇರದಂತೆ ಮಾಲ್, ಹೋಟೆಲ್, ಇನ್ನಿತರ ಆರ್ಥಿಕ ಚಟುವಟಿಗಳನ್ನು ಆರಂಭಿಸಬಹುದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಸಲಹೆ ನೀಡಿದೆ.