ಉತ್ತರಪ್ರಭ ಸುದ್ದಿ
ಗದಗ:
110/33/11 ಕೆವ್ಹಿ ರೋಣ, ವಿದ್ಯುತ್ ವಿತರಣಾ ಉಪ-ಕೇಂದ್ರದ 10 MVA ಪರಿವರ್ತಕದ ನಿರ್ವಹಣಾ ಕೆಲಸವನ್ನು ಕೈಗೊಳ್ಳುವುದರಿಂದ ದಿನಾಂಕ: 24.12.2021 ರಂದು (ಬೆಳಿಗ್ಗೆ 11 ಘಂಟೆಯಿಂದ ಸಂಜೆ 5  ಘಂಟೆಯವರೆಗೆ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಮೇಲ್ಕಂಡ ವಿದ್ಯುತ್ ವಿತರಣಾ ಉಪ-ಕೇಂದ್ರದ   10MVA  ಪರಿವರ್ತಕದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಮಾರ್ಗಗಳಾದ ಎಫ್-6 ರೋಣ ವಾಟರ್‌ಸಪ್ಲೈ, ಎಫ್-7 ಬೇವಿನಕಟ್ಟಿ, ಎಫ್-8 ಜಿಗಳೂರ, ಎಫ್-9 ಸೋಮನಕಟ್ಟಿ, ಎಫ್-10 ಕೃಷ್ಣಾಪೂರ ಮತ್ತು ಎಫ್-11 ಐ.ಬಿ.ಪಿ.ಎಸ್ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಹಾಗೂ ಸದರಿ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ರೋಣ ಪಟ್ಟಣ ಹಾಗೂ ಗ್ರಾಮಗಳಾದ ಇಟಗಿ, ಸೂಡಿ, ಬೇವಿನಕಟ್ಟಿ, ಜಿಗಳೂರ, ಹೊಸಳ್ಳಿ, ಹುಲ್ಲೂರು, ಕುರಹಟ್ಟಿ, ಮುದೇನಗುಡಿ, ಸೋಮನಕಟ್ಟಿ, ಕೃಷ್ಣಾಪೂರ, ಮತ್ತು ಎಫ್-11 ಐ.ಬಿ.ಪಿ.ಎಸ್ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಮಲ್ಟಿ ವಿಲೇಜ್ ವಾಟರ್‌ಸಪ್ಲೈ ಸ್ಥಾವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ. 

Leave a Reply

Your email address will not be published. Required fields are marked *

You May Also Like

ಕೇಲೂರ ಘಟನೆ: ಸಂತ್ರಸ್ಥೆಯ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು

ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕರ‍್ಯಾಚರಣೆ…

ಶಾಸಕರೇ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯನ್ನೊಮ್ಮೆ ನೋಡಿ!

ರೋಗಿಗಳ ಪಾಲಿಗೆ ಆಸ್ಪತ್ರೆಗಳೇ ಸಂಜೀವಿನಿ ಅಂತಾರೆ. ಆದರಲ್ಲೂ ಸರ್ಕಾರಿ ಆಸ್ಪತ್ರೆಗಳಂತೂ ಬಡರೋಗಿಗಳಿಗೆ ಅನುಕೂಲವಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆ ಗಬ್ಬು ನಾರುತ್ತಿದೆ.

ಆಯಾ ರಾಜ್ಯಗಳ ಭಾಷೆಯಲ್ಲಿ ನೇಮಕಾತಿ ಪರೀಕ್ಷೆ ನಡೆಸಲು ಕಪ್ರವೇ: ಮನವಿ

ಕೇಂದ್ರ ಸರ್ಕಾರ ವಿವಿಧ ಹುದ್ದೆಗಳಿಗೆ ನಡೆಸುವ ನೇಮಕಾತಿ ಪರೀಕ್ಷೆಗಳನ್ನು ಆಯಾ ರಾಜ್ಯದ ಮಾತೃ ಭಾಷೆಯಲ್ಲಿ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಜಾಪರ ವೇದಿಕೆಯ ತಾಲೂಕು ಘಟಕದ ವತಿಯಿಂದ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿ ಮೋದಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ

ಲಕ್ಷ್ಮೇಶ್ವರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ…