ಉತ್ತರಪ್ರಭ ಸುದ್ದಿ
ಗದಗ: ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾದ ಬಗರ ಹುಕುಮ್ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ತಂತಿ ಬೇಲಿಯನ್ನು ಹಾಕಲು ಪದೇ ಪದೇ ರೈತರಿಗೆ ಕಿರುಕುಳ ನೀಡುತ್ತಿದ್ದು, ಈ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧೀವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಚರ್ಚಿಸಲು ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧಕ್ಷರಾದ ಶ್ರೀ ರವಿಕಾತ ಅಂಗಡಿಯವರು ಒತ್ತಾಯಿಸಿದ್ದಾರೆ. ಈ ಕೂಡಲೇ ಸರ್ಕಾರ ಬಗರ ಹುಕುಮ್ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು.
ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾದ ಬಗರ ಹುಕುಮ್ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಕಳೆದ ವರ್ಷ ತಂತಿ ಬೇಲಿ ಅಳವಡಿಸಲು ಹೊರಟ್ಟಿತ್ತು ಇದನ್ನು ಖಂಡಿಸಿ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ರವಿಕಾಂತ ಅಂಗಡಿಯವರ ನೇತೃತ್ವದಲ್ಲಿ ದೇವಿಹಾಳ ತಾಂಡಾದಿಂದ ಪಾದಯಾತ್ರೆ ಮೂಲಕ ಶಿರಹಟ್ಟಿಯ ತಹಶಿಲ್ದಾರ ಕಚೇರಿಯ ಮುಂದೆ ಸಾವಿರಾರು ರೈತರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಬಗರ್ ಹುಕುಮ್ ಸಾಗುವಳಿ ರೈತರು ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿಗಳು ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಿ ಕೂಡಲೇ ಅರಣ್ಯ ಇಲಾಖೆಯ ತಂತಿ ಬೇಲಿ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತದೆ, ಅದರೊಂದಿಗೆ ಅರಣ್ಯ ಇಲಾಖೆ ತಿರಸ್ಕರಿಸಿದ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುತ್ತದೆ , ಬಗರ್ ಹುಕುಮ್ ಸಾಗುವಳಿ ರೈತರಿಗೆ ಯಾವುದೆ ರೀತಿಯ ತೊಂದರೆ ಕೊಡುವುದಿಲ್ಲ ಹೀಗೆ ತಮ್ಮೇಲ್ಲಾ ಬೇಡಿಕೆಗಳನ್ನು ಇಡೇರಿಸಲಾಗುವುದು ಹಾಗಾಗಿ ಪ್ರತಿಭಟನೆಯನ್ನು ಕೈಬಿಡಬೇಕೆಂದು ಮನವಿ ಮಾಡಿದ ನಂತರ ಪ್ರತಿಭಟನಾಕಾರು ಪ್ರತಿಭಟನೆಯನ್ನು ಕೈ ಬಿಟ್ಟರು.
ಪ್ರತಿಭಟನೆ ನಂತರ ಅನೇಕ ಭಾರಿ ಅರಣ್ಯ ಇಲಾಖೆಯಿಂದ ಅಲ್ಲಿಯ ನೀವಾಸಿಗಳಿಗೆ ನೋಟಿಸ್ ಕೊಡುವುದು ಮತ್ತು ತಂತಿ ಬೇಲಿ ಹಾಕಲು ಪ್ರಯತ್ನಿಸುತ್ತಾ ಬಂದಿದೆ. ಸದನದಲ್ಲಿ ಪ್ರಶ್ನೆಯನ್ನು ಕೇಳಿದ ನಂತರ ಮತ್ತು ಹೋರಾಟದ ನಂತರ ಇಲಾಖೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ ಮತ್ತೆ ತನ್ನ ಕಾರ್ಯವನ್ನು ಮುಂದುವರಿಸುತ್ತದೆ
ಬಗರ ಹುಕುಮ್ ಸಾಗುವಳಿ ಹೋರಾಟಗಾರರು ಮತ್ತು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ರವಿಕಾಂತ ಅಂಗಡಿಯವರು ಬಗರ ಹುಕುಮ್ ಸಾಗುವಳಿದಾರರ ಸಮಸ್ಯೆ ಕುರಿತು ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ಈ ಹಿಂದೆ ಮಾಜಿ ಸಚಿವರು ಮತ್ತು ಗದಗ ಶಾಸಕರು ಮತ್ತು ಕಾಂಗ್ರೇಸ್ ಹಿರಿಯ ಮುಖಂಡರಾದ ಎಚ್ ಕೆ ಪಾಟೀಲರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ ಮತ್ತು ಅರಣ್ಯ ಅಧಿಕಾರಿಗಳು ಬಗರ ಹುಕುಮ್ ಸಾಗುವಳಿದಾರರಿಗೆ ತೊಂದರೆ ಕೊಡದಂತೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಎಚ್.ಎಸ್.ವೆಂಕಟಾಪೂರದ ನೀರಿನ ಬವಣೆ ನೀಗುವುದು ಯಾವಾಗ..?

ಅದು ಆ ತಾಲೂಕಿನ ಕಟ್ಟಕಡೆಯ ಗ್ರಾಮ. ಆ ತಾಲೂಕಿನಲ್ಲಿ ಆ ಗ್ರಾಮ ಇದ್ರೂ ವಿಧಾನ ಸಭಾ ಕ್ಷೇತ್ರ ಮಾತ್ರ ಬೇರೆಯದೆ. ಎಲ್ಲಿಯ ತಾಲೂಕು, ಎಲ್ಲಿಯ ವಿಧಾನಸಭಾ ಕ್ಷೇತ್ರ, ಎಲ್ಲಿಯ ಆ ಗ್ರಾಮ ಎನ್ನುವಂತಾಗಿದೆ.

ತೋಂಟದ ಶ್ರೀ, ಹಡೇ೯ಕರ, ಹಳಕಟ್ಟಿ ಜಗದ ಯುಗ ಪುರುಷರು- ಪಟ್ಟಣಶೆಟ್ಟರ

ವರದಿ: ಗುಲಾಬಚಂದ ಜಾಧವಆಲಮಟ್ಟಿ : ಶಾಂತ ಚಿತ್ತತೆ,ಬದ್ದತೆ ಖ್ಯಾತಿಯ ಕನ್ನಡದ ಕುಲದೇವರಾದ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳು,ಕರುನಾಡಿನ…

ವಲಸೆ ಕಾರ್ಮಿಕರನ್ನು ಕಳುಹಿಸಿಕೊಡುವ ಜವಾಬ್ದಾರಿ ನಮ್ಮದು: ಸುಧಾಕರ್

ಅಧಿಕೃತ ಚಿಕ್ಕಬಳ್ಳಾಪುರ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅರಮನೆ ಮೈದಾನದಲ್ಲಿ ಜನದಟ್ಟಣೆ ಗಮನಿಸಿ, ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿ, ಜನರಿಗೆ ವೈದ್ಯಕೀಯ ಶಿಕ್ಷಣ ಸಚಿವರು ಸಮಾಧಾನ ಹೇಳಿದ ಘಟನೆ ನಡೆಯಿತು.

ಅಂದರ ಬಾಹರ ಆಡುತ್ತಿದ್ದ 6 ಜನ ಬಂದನ

ಲಕ್ಷ್ಮೇಶ್ವರ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೊಡಿಯಲ್ಲಮ್ಮ ದೇವಸ್ಥಾನದ ಮುಂಬಾಗ, ಸಾರ್ವಜನಿಕ ಬಯಲು ಪ್ರದೇಶದಲ್ಲಿ ಇಸ್ಪೀಟ್ (ಅಂದರ ಬಾಹರ)…