ವರದಿ: ಸುರೇಶ ಲಮಾಣಿ
ಉತ್ತರಪ್ರಭ
ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮದ ರೈತರು ನಾದಿಗಟ್ಟಿ ಹದ್ದಿನಲ್ಲಿ ಬರುವ ಸರ್ವೇ ನಂ.27 .26/1ಎ 28/2 28/1 21/2 ಶೇತ್ಕಿ ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣು ಹಾಗೂ ಮರಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ ಎಂದು ತಹಶಿಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಉಮೇಶ ಲಮಾಣಿ ನಮ್ಮ ಜವಳು ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಳ್ಳರು ಮರಳನ್ನು ತೆಗೆದು ದೊಡ್ಡ ದೊಡ್ಡ ತೆಗ್ಗು, ಗುಂಡಿಗಳನ್ನ ಮಾಡಿದ್ದಾರೆ.
ಈ ಕುರಿತು ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಪೊಲೀಸ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲ. ದಿನೇ ದಿನೇ ಅಕ್ರಮ ಮರಳುಗಳ್ಳರು ಮರಳನ್ನು ನಮ್ಮ ಜಮೀನುಗಳಲ್ಲಿ ಅಕ್ರಮವಾಗಿ ರಾತ್ರಿ ಹೋತ್ತಿನಲ್ಲಿ ಮರಳನ್ನು ಸಾಗಿಸುತ್ತಿದ್ದಾರೆ.
ಈಗಾಗಲೇ ಅಕ್ರಮ ಮರಳುಗಳ್ಳರ ಹೇಸರನ್ನು ಇಲಾಖೆಯವರಿಗೆ ತೀಳಿಸಿದ್ದರು ಯಾವುದೆ ಕ್ರಮ ಕೈಗೊಳ್ಳದ ಕಾರಣ ಇಂದು ತಹಸಿಲ್ದಾರರನ್ನು ಭೇಟಿಯಾಗಿ ಅಕ್ರಮ ಮರಳುಗಳ್ಳರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಈನ್ನು ಎರಡು ಮೂರು ದಿನಗಳಲ್ಲಿ ತಹಸಿಲ್ದಾರರು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ತಹಸಿಲ್ದಾರ ಕಛೆರೀ ಮುಂದೆ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗೋಪಾಲ ಲಮಾಣಿ, ಉಮೇಶ ಲಮಾಣಿ, ನಿಂಗಪ್ಪ ಲಮಾಣಿ, ರವಿ ಲಮಾಣಿ, ಶೇಖಪ್ಪ ಲಮಾಣಿ, ರಮೇಶ ಲಮಾಣಿ, ಕೃಷ್ಣಪ್ಪ ಲಮಾಣಿ, ದೇವೇಂದ್ರ ಲಮಾಣಿ,ಕಮಲವ್ವ ಲಮಾಣಿ ಗಂಗವ್ವ ಲಮಾಣಿ ಲಕ್ಷ್ಮವ್ವ ಲಮಾಣಿ ಮಾನವ್ವ ಲಮಾಣಿ ರತ್ನವ್ವ ಲಮಾಣಿ. ಸೇರಿದಂತೆ ಅನೇಕ ರೈತರು ಹಾಜರಿದ್ದರು.