ಉತ್ತರಪ್ರಭ

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ವಿರುದ್ಧ ಸತತ ನಾಲ್ಕು ದಿನಗಳಿಂದ ಹಗಲು ರಾತ್ರಿ, ಮಳೆ, ಬಿಸಿಲು, ಚಳಿ ಲೆಕ್ಕಿಸದೇ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, (NSUI) ಕರ್ನಾಟಕ ವತಿಯಿಂದ ಪ್ರತಿಭಟನೆ ನಡೆಸುತ್ತಿದೆ, ಉಪವಾಸ ಸತ್ಯಾಗ್ರಹ ಕೈಗೊಂಡಿರುವ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ವೈದ್ಯಕೀಯ ಸಿಬ್ಬಂದಿಗಳು ಅವರ ತಪಾಸಣೆ ನಡೆಸಿದರು. ಮೂರು ವರ್ಷಗಳ ಕೋರ್ಸ್ ಮೂರು ವರ್ಷದಲ್ಲಿ ಮುಗಿಯಬೇಕು, ಐದು ವರ್ಷದ ಕೋರ್ಸ್ ಐದು ವರ್ಷದಲ್ಲಿ ಮುಗಿಯಬೇಕು ಕೂಡಲೇ ಕಾನೂನು ತರಗತಿಗಳು ಪ್ರಾರಂಭವಾಗಬೇಕು ಎಂಬುದು ಅವರ ಬೇಡಿಕೆಯಾಗಿದೆ.

ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ವೈದ್ಯಕೀಯ ಸಿಬ್ಬಂದಿಗಳು ಅವರ ತಪಾಸಣೆ ನಡೆಸಿದರು


KSLU ಕುಲಪತಿಗಳು ಉಪವಾಸ ನಿರತ ವಿದ್ಯಾರ್ಥಿಗಳಿಗೆ ಬೇಟಿನೀಡಿ ಡಿಸೆಂಬರ್ 15 ರಿಂದ ಪ್ರಾರಂಭವಾಗುವ ಪರೀಕ್ಷೆಗಳನ್ನು ತಡೆಹಿಡಿದಿದೆ, ನಾನು ಈ ವಿಷಯದ ಬಗ್ಗೆ ಚರ್ಚಿಸಲು ನಾಳೆ ಬೆಂಗಳೂರಿಗೆ ಹೋಗುತ್ತಿದ್ದೇನೆ ಇನ್ನೆರಡು ದಿನಗಳಲ್ಲಿ ಇದರ ಬಗ್ಗೆ ಸ್ಪಷ್ಟನೆಯನ್ನು ನೀಡುತ್ತೇವೆ ಎಂದು ಹೇಳಿದರು. ಇದಕ್ಕೆ ಒಪ್ಪದ ಕಾನೂನು ವಿದ್ಯಾರ್ಥಿಗಳು ಪೂರ್ತಿ ಸ್ಪಷ್ಟನೆ ಸಿಗೋವರೆಗು ನಮ್ಮ ಶಾಂತಿಯುತ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *

You May Also Like

ILI ಲಕ್ಷಣ ವಿರುವವರು ಕೂಡಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ- ಸಚಿವ ಡಾ.ಕೆ.ಸುಧಾಕರ್

ನಗರದಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ನಿರುದ್ಯೋಗಿಗಳಿಗೆ ಭತ್ಯೆ ನೀಡಲು ಒತ್ತಾಯಿಸುತ್ತೇನೆ: ಕೆ.ಆರ್.ಎಸ್ ಅಬ್ಯರ್ಥಿ ಕಾಂಬಳೆ

ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ದೊರಕುವವರೆಗೆ ನಿರುದ್ಯೋಗ ಭತ್ಯೆ ನೀಡಲು ನಾನು ಒತ್ತಾಯಿಸುತ್ತೇನೆ ಎಂದು ಪಶ್ಚಿಮ ಪದವಿಧರ ಕ್ಷೇತ್ರದ ಕೆ.ಆರ್.ಎಸ್ ಅಬ್ಯರ್ಥಿ ಶಿವರಾಜ್ ಕಾಂಬಳೆ ಹೇಳಿದರು.

ಹಳ್ಳಿ ಹಕ್ಕಿಯನ್ನು ತಬ್ಬಲಿ ಮಾಡಿತೆ ಬಿಜೆಪಿ..?

ಬೆಂಗಳೂರು: ಮೇಲ್ಮನೆಗೆ ನಡೆಯುವ ಚುನಾವಣೆಗೆ ಬಿಜೆಪಿ ತಡರಾತ್ರಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇಂದು ನಾಲ್ವರು…

ವಿವಿಧ ಸಂಘಟನೆಗಳಿಂದ 916ನೇ ಬಸವ ಜಯಂತಿ ಆಚರಣೆ

ಬಸವಣ್ಣನವರ ತತ್ವಗಳು ಸರ್ವಕಾಲಿ ಸತ್ಯಗಳಾಗಿವೆ ಉತ್ತರಪ್ರಭ ಸುದ್ದಿ ಗದಗ : ಶ್ರೀ ತೋಂಟದಾರ್ಯ ಮಠದ ಪೂಜ್ಯ…