ಉತ್ತರಪ್ರಭ ಸುದ್ದಿ

ಬಸವಾದಿ ಶರಣರ ತತ್ವಗಳನ್ನು ನಾಡಿನ ತುಂಬ ಪಸರಿಸಲು ತಮ್ಮ ಇಡೀ ಬದುಕನ್ನು ಮೀಸಲಿಟ್ಟಿದ್ದ ಡಾ. ಈಶ್ವರ ಮಂಟೂರ ಅವರಿಗೆ ಹೃದಯಾಘಾತ ಎಂದರೆ ನಂಬಲಾಗುತ್ತಿಲ್ಲ. ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ನಿಷ್ಠೆಯಿಂದ ಕಾಪಾಡಿಕೊಂಡು ಬಂದಿದ್ದ ಶರಣರದು ಶಿಸ್ತುಬದ್ಧ ಜೀವನ. ಜಮಖಂಡಿ ಹತ್ತಿರದ ಮದರಕಂಡಿ ಆಶ್ರಮದ ನಿರಂತರ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆದಿದ್ದರು. ಅನೇಕ ವೇದಿಕೆ ಮೇಲೆ ಒಟ್ಟಾಗಿ ಇದ್ದ ನೆನಪುಗಳು ಧಾವಿಸುತ್ತವೆ.

ಮುಖ್ಯವಾಗಿ ಇಲಕಲ್ಲಿನ ಮಹಾಂತ ಅಪ್ಪಗಳ ಪ್ರಭಾವದಿಂದಾಗಿ ತಮ್ಮ ವಿಶಿಷ್ಟ ಕಾರ್ಯ ಚಟುವಟಿಕೆಗಳನ್ನು ಕೈ ಗೊಳ್ಳುತ್ತಿದ್ದ ಶರಣರ ಪ್ರವಚನದ ದೇಸಿ ಸೊಗಡನ್ನು ಮರೆಯಲಾಗದು. ನಿರಂತರ ಶಿವಾನುಭವ, ಗಣ್ಯರ ಸಂಮಾನ, ಶಿವಯೋಗ ಶಿಬಿರಗಳು, ವಾರ್ಷಿಕ ಬೃಹತ್ ಕಾರ್ಯಕ್ರಮಗಳ ಜೊತೆಗೆ, ವೈಯಕ್ತಿಕ ಪ್ರವಚನ ನೀಡಲು ಇಡೀ ಲೋಕವನ್ನು ಸಂಚಾರ ಮಾಡುತ್ತಿದ್ದರು.

ಸಾಯುವ ವಯಸ್ಸೂ ಅವರದಲ್ಲ. ಎಮ್ಮವರಿಗೆ ಸಾವಿಲ್ಲ ಎಂಬ ಮಾತಿದೆ. ಆದರೂ ಇಷ್ಟೊಂದು ಅನಿರೀಕ್ಷಿತ ಸಾವು ಇದಾಗಬಾರದಿತ್ತು. ‘ಸಾವು’ ತನ್ನ ಶಕ್ತಿಯನ್ನು ಮತ್ತೆ ಮತ್ತೆ ಇಂತಹ ಸಾವುಗಳ ಮೂಲಕ ನಮಗೆ ಎಚ್ಚರಿಸುತ್ತಲೇ ಇರುತ್ತದೆ. ಹೋಗಿ ಬನ್ನಿ ಶರಣರೇ…

ಪ್ರೊ. ಸಿದ್ದು ಯಾಪಲಪರವಿ ಕಾರಟಗಿ.
Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 1694 ಕೊರೊನಾ ಸೋಂಕಿತರು ಪತ್ತೆ!: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1694 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…

ಉಪನ್ಯಾಸಕರ ನೇಮಕಕ್ಕೆ ಶೀಘ್ರ ಕ್ರಮ

ಶಾಸಕ ಮಹೇಶ್ ಅವರ ನೇತೃತ್ವದಲ್ಲಿ ಅನುದಾನಿತ ಕಾಲೇಜುಗಳು ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳು ಡಿಸಿಎಂ ಅವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.

ಲಕ್ಷ್ಮೇಶ್ವರ: ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ

ಲಕ್ಷ್ಮೇಶ್ವರ: ಪಟ್ಟಣದ ಕರೇಗೋರಿ ಆಶ್ರಯ ಕಾಲೊನಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ…

ನಾಳೆ ರಾಜ್ಯ ಬಂದ್ – ರೈತರ ಹೋರಾಟದಿಂದಾಗಿ ಏನಿರತ್ತೆ? ಏನಿರಲ್ಲ?

ಬೆಂಗಳೂರು : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ವಿಧೇಯಕ ವಿರೋಧಿಸಿ…