ಉತ್ತರಪ್ರಭ ಸುದ್ದಿ

ನರೆಗಲ್: ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಹಾಲಕೆರೆ ಗ್ರಾಮದ ನಡೆದಾಡುವ ದೇವರು ಅಭಿನವ ಅನ್ನದಾನ ಶ್ರೀ ಗಳು (85) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಶ್ರೀಗಳ ಅಗಲಿಕೆಯಿಂದ ಅಪಾರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ, ತ್ರಿವಿಧ ದಾಸೋಹದ ಮೂಲಕ ಬೆಳಕಾಗಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಲವಾರು ಶಾಖಾಮಠವನ್ನು ಹೋಂದಿದ ಹಾಗೂ ಅನ್ನ ಅಕ್ಷರ ನೀಡಿ ಸಾವಿರಾರು ಮಕ್ಕಳ ಬಾಳಿಗೆ ಬೆಳೆಕಾಗಿ, ನಡೆದಾಡುವ ದೇವರು ಲಕ್ಷಾಂತರ ಭಕ್ತರ ಆರಾಧ್ಯ ದೇವರು ಶಿವಯೋಗ ಮಂದಿರದ ಅಧ್ಯಕ್ಷರಾದ ಹಾಗೂ ಹಾಲಕೆರೆ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಕೊಟ್ಟುರುಸ್ವಾಮಿ ಸಂಸ್ಥಾನಮಠ ಹೊಸಪೇಟೆ, ಬಳ್ಳಾರಿ, ಹಂಪಿ. ಅಧ್ಯಕ್ಷರು ಲಕ್ಷಾಂತರ ಭಕ್ತ ಸಮೂಹವನ್ನು ಇಂದು ಬೆಳಿಗ್ಗೆ 5:30 ಲಿಂಗೈಕ್ಯರಾದರರು.

ಲಿಂಗೈಕ್ಯ ಶ್ರೀ ಗಳ ಅಗಲಿಕೆ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಜಿ,ಬಂಡಿ ಹಾಗೂ ಮಾಜಿ ಶಾಸಕ ಜಿ,ಎಸ್,ಪಾಟೀಲ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು.

ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನರೆಗಲ್ ಹೋಬಳಿಯ ಎಲ್ಲಾ ಗ್ರಾಮದಲ್ಲಿ ಶೋಕ ಮಡುಗಟ್ಡಿದ್ದು ಕೆಲಸ ಕಾರ್ಯಗಳನ್ನು ಹಾಗೂ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದು ಮಾಡುವ ಮೂಲಕ ಗೌರವ ಸೂಚಿಸಿದರು.ಮಂಗಳವಾರ ಮಧ್ಯಾಹ್ನ 2 ಗಂಟೆಗೆ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಭಕ್ತರು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 39 ಪಾಸಿಟಿವ್ : ಸೋಂಕಿನ ಮಿಂಚಿನ ಓಟ!

ಜಿಲ್ಲೆಯಲ್ಲಿಂದು 39 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 370 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 194.

ವಿಶ್ವ ಜಾನಪದ ದಿನ ಆಚರಣೆ: ಜಾನಪದ ಸಂರಕ್ಷಣೆ ಹಾಗೂ ಸಂವರ್ಧನೆ ಅಗತ್ಯ.

ಬೀದರ: ಜಾನಪದ ಜನ ಕೇಂದ್ರಿತ ಮೌಲ್ಯಗಳ ನಿದಿಯಾಗಿದ್ದು ಇದನ್ನು ಬಗೆದಷ್ಟು ದೇಶಿಯತೆ ಅನಾವರಣಗೊಳ್ಳುವುದು ಎಂದು ಕರ್ನಾಟಕ…

ಅನುದಾನ ರಹಿತ ಶಿಕ್ಷಕರು ಶಾಪಗ್ರಸ್ಥರೇ? ನಿಕೃಷ್ಟರೇ? ದೌರ್ಭಾಗ್ಯವಂತರೇ?

ಕೊರೋನಾ ವೈರಸ್ ಎಲ್ಲರಿಗೂ ಸರಿಸಮಾನವಾಗಿ ಬಿಡದೆ ಬೆನ್ನತ್ತಿದೆ. ಸರ್ಕಾರೇತರ ಶಿಕ್ಷಕರಿಗೆ ಅದರಲ್ಲೂ ಅಸಂಖ್ಯಾತ ಅನುದಾನರಹಿತ ಶಿಕ್ಷಕರಿಗೆ…

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

ಇಂದು ಗದಗನಲ್ಲಿ ನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.