ಉತ್ತರಪ್ರಭ ಸುದ್ದಿ
ಗದಗ: ಮಹಿಳೆಯೊಬ್ಬರು ಮೃತ ಪಟ್ಟರೂ ಸಹ ಅತ್ಯಂತ ಕಾಳಜಿಯಿಂದ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಅವರ ಉದರದಲ್ಲಿ ಶಿಶುವನ್ನು ಬದುಕಿಸಿ ಮಾನವೀಯತೆ ಮೆರೆದ ಗದಗ ಜಿಲ್ಲೆಯ ದಂಡಪ್ಪ ಮಾನೆ ಸರ್ಕಾರಿ ಆಸ್ಪತ್ರೆಯ ವೈದ್ಯರ ಸೇವೆ ನಿಜಕ್ಕೂ ಶ್ಲಾಘನೀಯ. ಈ ವೈದ್ಯರ ತಂಡಕ್ಕೆ ನನ್ನ ಹಾರ್ದಿಕ ಅಭಿನಂದನೆಗಳು.

ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಅನ್ನಪೂರ್ಣ ಎಂಬವರು ಇತ್ತೀಚೆಗೆ ಹೆರಿಗೆ ನಿಮಿತ್ತ ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಆರೋಗ್ಯ ಕ್ಷೀಣಿಸಿ ಮೃತಪಟ್ಟರೂ ಸಹ ಅವರ ಗರ್ಭದಲ್ಲಿರುವ ಮಗು ಜೀವಂತವಾಗಿರುವುದನ್ನು ವೈದ್ಯರು ಪತ್ತೆಹಚ್ಚಿ ತಕ್ಷಣ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಪ್ರಾಣ ಉಳಿಸಿರುವುದು ಪ್ರಶಂಸನೀಯವಾಗಿದೆ. ಇದೊ0ದು ಅಪರೂಪದ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿದ್ದು, ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ವೈದ್ಯರ ತಂಡದಲ್ಲಿದ್ದ ಬಸನಗೌಡ ಕರಿಗೌಡರ್, ಡಾ. ಶೃತಿ, ಡಾ. ವಿನೋದ್, ಡಾ. ಜಯರಾಜ್, ಡಾ. ಅಜಯ್, ಡಾ. ಕೀರ್ತನ್ ಅವರನ್ನು ಈ ಬಗ್ಗೆ ಅಭಿನಂದಿಸುತ್ತೇನೆ. ಇ0ತಹ ವಿಶಿಷ್ಟ ಮಾನವೀಯ ಸೇವೆಯಿಂದ ನಮ್ಮ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚುವುದಲ್ಲದೆ, ಸಾರ್ವಜನಿಕರಲ್ಲಿ ಸರ್ಕಾರಿ ವೈದ್ಯರುಗಳ ಕುರಿತು ವಿಶ್ವಾಸಾರ್ಹತೆಯೂ ವೃದ್ಧಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಇದೊಂದು ನಿಜಕ್ಕೂ ಮಾದರಿ ಸೇವೆಯಾಗಿದೆ. ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವರು ಕರ್ನಾಟಕ ಸರ್ಕಾರ
2 comments
Great. Good job. Sir
Publicity goskara.
Ivana ಹಿಂದೆ. Nalayaku ವಸಂತ್ ಮೇಟಿ . ಗ್ರಾಮೀಣ ಎಲೆಕ್ಷನ್ ಸೋತಾವ