ಬೆಂಗಳೂರು: ಅಪಘಾತದಲ್ಲಿ ತಮಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ಆಗಮಿಸಿದ ಇಬ್ಬರು ನಮಗೆ ಮಹಿಳಾ ನರ್ಸ್ ಚಿಕಿತ್ಸೆ ನಿಡಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಬೆಂಗಳೂರಿನ ಕಗ್ಗದಾಸಪುರದ ನಾಗಪ್ಪ ರೆಡ್ಡಿ ಲೇಔಟ್ ನಲ್ಲಿರುವ ಶ್ರೀ ಲಕ್ಷ್ಮಿ ಆಸ್ಪತ್ರೆಯಲ್ಲಿ ಈಚೆಗೆ ಘಟನೆ ನಡೆದಿದೆ ಎಂದು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನ ಉಸ್ತುವಾರಿ ವಹಿಸಿರುವ ಪ್ರಸಾದ್ ಅವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸAಜೆ ಹೊತ್ತಿಗೆ ಕಿರಣ್ ಕುಮಾರ್ ಮತ್ತು ಹೇಮಂತ್ ಎಂಬ ಇಬ್ಬರು ಯುವಕರು ಚಿಕಿತ್ಸೆಗೆಂದು ಆಸ್ಪತ್ರೆಗೆ ಆಗಮಿಸಿದಾಗ ಪುರುಷ ನರ್ಸ್ಗಳಿಂದ ಚಿಕಿತ್ಸೆ ಪಡೆಯಲು ನಿರಾಕರಿಸಿ, ಮಹಿಳೆ ನರ್ಸ್ ಚಿಕಿತ್ಸೆ ನೀಡಬೇಕು ಎಂದು ಉದ್ಧಟತನ ತೋರಿದ್ದಾರೆ ಎಂದು ತಿಳಿದು ಬಂದಿದೆ.
ಶುಶ್ರೂಷೆ ನೀಡಲು ಯತ್ನಿಸಿದ ಪುರುಷ ನರ್ಸ್ ಪ್ರಶಾಂತ್ ಮೇಲೆ ಹೇಮಂತ್ ಹಲ್ಲೆ ಮಾಡಿದ್ದಾರೆ. ಹೇಮಂತ್ ಕೂಡ ತನ್ನ ಸ್ನೇಹಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆಸ್ಪತ್ರೆಗೆ ಬರಲು ಹೇಳಿದ್ದು, ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಕೆಲವೇ ನಿಮಿಷಗಳಲ್ಲಿ, ಇನ್ನಿಬ್ಬರು ಬಂದು ಸಿಬ್ಬಂದಿಯೊAದಿಗೆ ಜಗಳವಾಡಿದ್ದರು.
ಬಿಲ್ಲಿಂಗ್ ಕೌಂಟರ್‌ನ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ, ದುಷ್ಕರ್ಮಿಗಳು ಅವರಿಗೆ ಭೀಕರ ಪರಿಣಾಮದ ಬಗ್ಗೆ ಬೆದರಿಕೆ ಹಾಕಿ ಆಸ್ಪತ್ರೆಯಿಂದ ಹೊರಹೋಗಿದ್ದಾರೆ. ಬೈಯಪ್ಪನಹಳ್ಳಿ ಪೋಲೀಸರು ಈ ಸಂಬAಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.