ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿoದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಕುಟುಂಬವನ್ನು ಸಲುಹಲು ಸಂಪಾದನೆ ಮಾಡುತ್ತಿದ್ದ ಸದಸ್ಯನನ್ನು ಕಳೆದುಕೊಂಡ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪ್ರಯೋಜನಗಳನ್ನು ಪ್ರಕಟಿಸಿದೆ.
ಇಡಿಎಲ್ಐ ಯೋಜನೆಯಡಿ ಕುಟುಂಬಗಳಿಗೆ ಪಿಂಚಣಿ, ವಿಮಾ ಯೋಜನೆ ಅಲ್ಲದೇ, ವಿಮಾನ ಯೋಜನೆಗಳನ್ನು ಹೆಚ್ಚಿಸಲಾಗಿದೆ. ಉದಾರೀಕರಣ ಮಾಡಲಾಗಿದೆ. ಈ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ತೊಂದರೆಗಳನ್ನು ತಗ್ಗಿಸಲು ಈ ಕ್ರಮಗಳು ಸಹಾಯ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕುಟುಂಬವು ಘನತೆಯ ಜೀವನವನ್ನು ನಡೆಸಲು ಮತ್ತು ಉತ್ತಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು, ಉದ್ಯೋಗ ಸಂಬAಧಿತ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದ ಇಎಸ್ಐ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೋವಿಡ್ನಿಂದ ಸಾವನ್ನಪ್ಪಿದವರಿಗೂ ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಅಸ್ತಿತ್ವದಲ್ಲಿರುವ ಮಾನದಂಡಗಳ ಪ್ರಕಾರ ಉದ್ಯೋಗಿಯು ಪಡೆಯುತ್ತಿದ್ದ ಸರಾಸರಿ ದೈನಂದಿನ ವೇತನದ ಶೇ.90ಕ್ಕೆ ಸಮಾನವಾದ ಪಿಂಚಣಿ ಸೌಲಭ್ಯವನ್ನು ಮೃತ ವ್ಯಕ್ತಿಗಳ ಅವಲಂಬಿತ ಕುಟುಂಬ ಸದಸ್ಯರು ಪಡೆಯುತ್ತಾರೆ. ಈ ಸೌಲಭ್ಯವು 24.03.2020 ರಿಂದ ಪೂರ್ವಾನ್ವಯವಾಗಿ ಮತ್ತು 24.03.2022 ರವರೆಗೆ ಎಲ್ಲಾ ಪ್ರಕರಣಗಳಿಗೆ ಅನ್ವಯವಾಗುತ್ತದೆ. ಇಡಿಎಲ್ಐ ಯೋಜನೆಯಡಿ ವಿಮಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ ಮತ್ತು ಉದಾರೀಕರಣ ಮಾಡಲಾಗಿದೆ. ಇದು ಇತರ ಎಲ್ಲಾ ಫಲಾನುಭವಿಗಳೊಂದಿಗೆ, ನಿರ್ದಿಷ್ಟವಾಗಿ ಕೋವಿಡ್ನಿಂದ ಪ್ರಾಣ ಕಳೆದುಕೊಂಡ ನೌಕರರ ಕುಟುಂಬಗಳಿಗೆ ಸಹಾಯ ಮಾಡುತ್ತದೆ. ಗರಿಷ್ಠ ವಿಮಾ ಲಾಭದ ಮೊತ್ತವನ್ನು 6 ಲಕ್ಷ ರೂ. ಗಳಿಂದ 7 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ 2.5 ಲಕ್ಷ ರೂ. ಕನಿಷ್ಠ ವಿಮಾ ಪ್ರಯೋಜನವನ್ನು ಮರು ಸ್ಥಾಪಿಸಲಾಗಿದೆ ಮತ್ತು 2020 ರ ಫೆಬ್ರವರಿ 15 ರಿಂದ ಪೂರ್ವಾನ್ವಯದೊಂದಿಗೆ ಮುಂದಿನ ಮೂರು ವರ್ಷಗಳವರೆಗೆ ಇದು ಅನ್ವಯವಾಗುತ್ತದೆ. ಗುತ್ತಿಗೆ/ಸಾಂದರ್ಭಿಕ ನೌಕರರ ಕುಟುಂಬಗಳಿಗೆ ಅನುಕೂಲವಾಗುವಂತೆ, ಕೇವಲ ಒಂದು ಸಂಸ್ಥೆಯಲ್ಲಿ ನಿರಂತರ ಉದ್ಯೋಗದಲ್ಲಿರಬೇಕಿದ್ದ ನಿಯಮವನ್ನು ಉದಾರೀಕರಣಗೊಳಿಸಲಾಗಿದ್ದು, ಸಾವಿಗೆ ಮುಂಚಿನ ಕಳೆದ 12 ತಿಂಗಳುಗಳಲ್ಲಿ ಸಂಸ್ಥೆಗಳನ್ನು ಬದಲಿಸಿದ ನೌಕರರ ಕುಟುಂಬಗಳಿಗೂ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಪಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಸುಳ್ಳು ಹೇಳಿದ್ದು ಭಾರತವೋ ಅಥವಾ ಡೊನಾಲ್ಡ್ ಟ್ರಂಪೋ?

ದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಮಾತಾಡಿದ್ದೇನೆ. ಅವರು ಒಳ್ಳೆಯ ಮನಃಸ್ಥಿತಿಯಲ್ಲಿಲ್ಲ ಎಂದು ಅಮೆರಿಕ…

ಕೋವಿಡ್ ಲಸಿಕೆ: ಆಕ್ಸ ಫರ್ಡ್ ವಿವಿಯಿಂದ ಇಂದು ಪಾಸಿಟಿವ್ ಸುದ್ದಿ?

ನವದೆಹಲಿ: ಅಸ್ಟ್ರೋಜೆನಿಕಾ ಕಂಪನಿಯ ಸಹಯೋಗದೊಂದಿಗೆ ಬ್ರಿಟನ್ನಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಂಶೋಧಿಸುತ್ತಿರುವ ಕೋವಿಡ್ ಲಸಿಕೆಯ ಕುರಿತು ಇಂದು ಒಂದು ಒಳ್ಳೆಯ ಸುದ್ದಿ ಹೊರ ಬೀಳಲಿದೆ ಎನ್ನಲಾಗಿದೆ.

ಕೊರೊನಾ ನಂತರ 16 ಸಾಂಕ್ರಾಮಿಕ ಕಾಯಿಲೆ ಭಯ..!

ಈಗಾಗಲೇ ಕೊರೊನಾದಿಂದಾಗಿ ಇಡೀ ಜಗತ್ತೆ ತಲ್ಲಣಗೊಂಡಿತ್ತು. ಇನ್ನೇನು ಕೊರೊನಾ ನಿಯಂತ್ರಣಕ್ಕೆ ಬಂ ತು ಎನ್ನುವಷ್ಟರಲ್ಲಿ ಈಗ ಮತ್ತೆ ಕೊರೊನಾ ಎರಡನೇ ಅಲೆ ಆರಂಭವಾಗಿ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಆತಂಕದ ಮದ್ಯೆ ಕರೋನಾ ವೈರಸ್ ನಂತರ 16 ಕಾಯಿಲೆಗಳು ವರದಿಯಾಗಿವೆ.

ನಿರ್ಮಾಣ ಹಂತದ ಸೇತುವೆ ಕುಸಿತ: ಮೂವರು ಭಾರತೀಯ ಸಾವು

ಉತ್ತರಾಖಂಡ ಹಿಮ ಸ್ಫೋಟದಲ್ಲಿ ತಪೋವನ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ೩೦ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದು ಇದರ ಬೆನ್ನಲ್ಲೇ ಭೂತಾನ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತದಲ್ಲಿ ಮೂವರು ಭಾರತೀಯ ಕಾರ್ಮಿಕರು ದುರ್ಮರಣ ಹೊಂದಿದ್ದು ಇನ್ನು ಆರು ಮಂದಿ ನಾಪತ್ತೆಯಾಗಿದ್ದಾರೆ.