ಗದಗ: ಸರ್ಕಾರಕ್ಕೆ ಎರಡನೇ ಅಲೆಯ ಬಗ್ಗೆಯೇ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಂಥದ್ರಲ್ಲಿ ಮೂರನೇ ಅಲೆಯ ಬಗ್ಗೆ ಏನು ಸಿದ್ಧತೆ ಮಾಡಿಕೊಂಡಿಲ್ಲ. ಹಾವೇರಿ ಜಿಲ್ಲೆಯಲ್ಲಿ 721 ಮಕ್ಕಳಿಗೆ ಪಾಸಿಟಿವ್ ದೃಢಪಟ್ಟಿದೆ. ಆದರೆ ಈವರೆಗೆ ಸರ್ಕಾರದಿಂದ ಮಕ್ಕಳಿಗಾಗಿ ಚಿಕಿತ್ಸೆಯ ಪ್ರೊಟೊಕಾಲ್ ಬಂದಿಲ್ಲ ಎಂದು ಶಾಸಕ ಎಚ್.ಕೆ.ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಗದಗನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಸಾವು ಬಹುದೊಡ್ಡ ಭಾವನಾತ್ಮಕ ವಿಚಾರ. ಕುಟುಂಬದಲ್ಲಿ ಅಥವಾ ಸಮೀಪದವರು ಸಾವನ್ನಪ್ಪಿದಾಗ ಮಾತ್ರ ಸಾವಿನ ನೋವು ಗೊತ್ತಾಗುತ್ತದೆ. ಹೀಗಾಗಿ ಅಂಕಿ ಸಂಖ್ಯೆ ಮೂಲಕ ಸಾವಿನ ವಿಚಾರವನ್ನು ಪರಿಗಣಿಸುವುದು ಸೂಕ್ತ ಅಲ್ಲ. ಇನ್ನು ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾದ್ಯಮದವರು ಕೇಳಿಗೆ ಪ್ರಶ್ನೆಗೆ ಲಾಕ್ ಡೌನ್ ಮುಂದುವರಿಕೆ ವಿಚಾರದ ಬಗ್ಗೆ ಸರ್ಕಾರ ನಮ್ಮ ಅಭಿಪ್ರಾಯ ಕೇಳಿದಾಗ ಸೂಕ್ತ ಸಲಹೆ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *

You May Also Like

ಕೋಟುಮಚಗಿ ಬಳಿ ಕಾರು ಪಲ್ಟಿ!: ಓರ್ವ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ಸಮೀಪದ ಕೋಟುಮಚಗಿ ಬಳಿ ನಡೆದಿದೆ. ಬೆಳಗಿನ ಜಾವ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಕಾರಿನಲ್ಲಿ ಇನ್ನು ಕೆಲವರು ಇದ್ದಿರಬಹುದೆಂದು ಸಾರ್ವಜನಿಕರಿಂದ ಸಂಶಯ ವ್ಯಕ್ತವಾಗಿದೆ.

ಸಿದ್ದರಾಮಯ್ಯ ಪರದೇಶಿ ಗಿರಾಕಿ:ಬಿ ಶ್ರೀರಾಮಲು

ಉತ್ತರಪ್ರಭ ಸುದ್ದಿ, ಗದಗ: 2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ…

ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡಿ: ನಮ್ಮೂರ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆರ್ಥಿಕ ಸಹಾಯದಿಂದ ಸ್ಥಳಿಯ ಪಪಂ ಹಾಗೂ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿ ಕೆರೆ ಅಭಿವೃದ್ದಿ ಸಮಿತಿ ಸಹಭಾಗಿತ್ವದಲ್ಲಿ ಪಟ್ಟಣಶೆಟ್ಟಿ ಕೆರೆ ಆವರಣದಲ್ಲಿ 246ನೇ ನಮ್ಮೂರ ಕೆರೆ ಹೂಳೆತ್ತುವ ಕಾರ್ಯಕ್ರಮವನ್ನ ಗ್ರಾಮಾಭಿವೃದ್ದಿ ಯೋಜನೆಯ ಹೈದರಬಾದ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ್ ಅವರು ಚಾಲನೆ ನೀಡಿದರು.

ಬೆಂಗಳೂರ:ಶಾಲೆ ಕಾಲೇಜು ರಜಾ ಲಾಕ್ಡೌನ್ ಜಾರಿ

ಬೆಂಗಳೂರು, : ನೈಟ್‌ ಕರ್ಫ್ಯೂ ಎರಡು ವಾರ ಮುಂದುವರಿಕೆ, ವಾರಾಂತ್ಯದ ಲಾಕ್‌ಡೌನ್ ಜಾರಿ ಹಾಗೂ ಬೆಂಗಳೂರಿನಲ್ಲಿ…