ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರು ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ನಿತ್ಯ ಮದ್ಯಾಹ್ನದ ಲಘು ಉಪಹಾರ ವ್ಯವಸ್ಥೆಗೆ ಚಾಲನೆ ನೀಡಿದರು.
ಈ ವೇಳೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದ ಈ ಕಾರ್ಯ ಸಂಕಷ್ಟದಲ್ಲಿರುವ ನಿರ್ಗತಿಕರಿಗೆ ಸಹಾಯವಾಗಲಿದೆ ಎಂದರು.
ಕೊರೋನದ ಈ ಸಂಕಷ್ಟದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ಕೊರೋನ ವಾರಿಯರ್ಸಗೆ ಹಾಗೂ ನಿರ್ಗತಿಕರಿಗೆ ಅಭಿಮಾನಿ ಬಳಗದವರು ಲಾಕ್ಡೌನ ಮುಗಿವವರೆಗೂ ಉಪಹಾರ ಮುಟ್ಟಿಸುವ ಕಾರ್ಯಕ್ಕೆ ಅಭಿಮಾನಿ ಬಳಗವು ಪಣತೊಟ್ಟು ನಿಂತಿದೆ. ಎಲ್ಲೇ ನಿರ್ಗತಿಕರನ್ನು ಹುಡುಕಿಕೊಂಡು ಹೋಗಿ ಉಪಹಾರ ಮುಟ್ಟಿಸಲಾಗುತ್ತದೆ. ಉಪವಾಸದಿಂದ ಯಾರು ಇರಬಾರದು ಎನ್ನುವ ಕಾರಣಕ್ಕೆ ಅಭಿಮಾನಿ ಬಳಗದ ಒಂದು ಅಳಿಲು ಸೇವೆ ಇದಾಗಿದೆ. ಈ ಸಂಕಷ್ಟದ ಸಮಯದಲ್ಲಿ ಡಾ.ಚಂದ್ರು ಲಮಾಣಿ ಅವರ ಅಭಿಲಾಷೆ ಯಂತೆ ಬಳಗದವರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಅಭಿಮಾನಿಗಳು ಹೇಳಿದರು.
ಈ ಸಂದರ್ಭದಲ್ಲಿ ಸುನಿಲ್ ಮಹಾಂತಶೆಟ್ಟರ, ವಿಜಯಣ್ಣ ಹತ್ತಿಕಾಳ, ಎಮ್.ಆರ್.ಪಾಟೀಲ್, ವಿಜಯ್ ಬೂದಿಹಾಳ್. ಗುರು ಮೆಡ್ಲೆರಿ, ಸೋಮೇಶ್ ಉಪನಾಳ, ಬಸವರಾಜ ಚಕ್ರಸಾಲಿ, ಭೀಮಪ್ಪ ಯಂಗಾಡಿ, ರಮೇಶ ದನದಮನಿ, ಅಭಯ್ ಜೈನ, ಶ್ರೀಧರ ಹುಬ್ಬಳ್ಳಿ, ರುದ್ರಪ್ಪ ಉಮಚಗಿ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಚಿಲಝರಿ ಗ್ರಾಮದಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳಿಸಿ ಮಾನವೀಯ ಮೌಲ್ಯಗಳು ವೃದ್ದಿಸುತ್ತವೆ ಈ ನಿಟ್ಟಿನಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಿ ಸ್ವಾಸ್ಥ್ಯೇಯ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದು ಅಕ್ಕನ ಬಳಗ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.

ಗ್ರಾಮದಲ್ಲಿ ಮೂವರು ಕೋವಿಡ್ ಗೆ ಬಲಿ..! : ಕೊಣ್ಣೂರು ಗ್ರಾಮದಲ್ಲಿ ಆತಂಕ..!

ಕೊಣ್ಣೂರ: ಕೋವಿಡ್ 19 ಮಹಾಮಾರಿಯ ಎರಡನೇ ಅಲೆಯು ಗ್ರಾಮೀಣ ಪ್ರದೇಶಕ್ಕೂ ಆವರಿಸಿದ್ದು ತಿಳಿದಿರುವ ವಿಷಯ, ಗ್ರಾಮದಲ್ಲಿ ಮಹಾಮಾರಿ ತನ್ನ ಅಟ್ಟಹಾಸ ಮೆರದಿದ್ದು ಸುಮಾರು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಕೆಲವರು ಗುಣಮುಖರಾಗಿದ್ದಾರೆ.

ನಗರ ಸಭೆ ಚುನಾವಣೆ: ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೆಟಿ

ಗದಗ ಬೇಟಗೇರಿ:ನಗರ ಸಭೆ ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮತ ಎಣಿಕೆ ಕಾರ್ಯವನ್ನು…

ಸಮಯ ಪ್ರಜ್ಞೆ ಮರೆತ ಪೊಲೀಸರು : ಪೊಲೀಸರಿಂದಲೇ ರೋಡ್ ಬ್ಲಾಕ್, ಸಂಚಾರಕ್ಕೆ ಅಡಚಣೆ

ಉತ್ತರಪ್ರಭ ಗದಗ: ನಗರದ (ಬಿಎಸ್ಎನ್ಎಲ್ ) ಕಛೇರಿಯ ಎದುರು ಪಂಚರಹೊಂಡ ವೃತ್ತದ ಮಧ್ಯದಲ್ಲೇ ಪೊಲೀಸ್ ಬ್ಯಾರಿಗೆಡ್…