ನವದೆಹಲಿ: ಮಕ್ಕಳ ಪೌಷ್ಠಿಕಾಂಶದ ಮಟ್ಟವನ್ನು ಕಾಪಾಡಲು ಸಹಾಯ ಮಾಡುವ ಸಲುವಾಗಿ, ಮಧ್ಯಾಹ್ನದ ಊಟ ಯೋಜನೆಯಡಿ ಮಕ್ಕಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಆರ್ಥಿಕ ಸಹಾಯವನ್ನು ಕಳುಹಿಸಲಾಗುವುದು. ಸರ್ಕಾರದ ಈ ಯೋಜನೆಯಿಂದ ಸುಮಾರು 11.8 ಕೋಟಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನದ ಊಟ ಯೋಜನೆಯ ಎಲ್ಲಾ ಅರ್ಹ ಮಕ್ಕಳಿಗೆ ಅಡುಗೆ ವೆಚ್ಚಕ್ಕೆ ಸಮನಾದ ಮೊತ್ತವನ್ನು ನೀಡುವ ಪ್ರಸ್ತಾಪಕ್ಕೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅನುಮೋದನೆ ನೀಡಿದ್ದಾರೆ.
ಈ ನಿರ್ಧಾರವು ಮಕ್ಕಳ ಪೌಷ್ಠಿಕಾಂಶದ ಮಟ್ಟವನ್ನು ಕಾಪಾಡುವುದಲ್ಲದೆ, ಸವಾಲಿನ ಸಾಂಕ್ರಾಮಿಕ ಸಮಯದಲ್ಲಿ ಅವರ ರೋಗನಿರೋಧಕ ಶಕ್ತಿಯನ್ನು ರಕ್ಷಿಸಲು ಸಹಕಾರಿಯಾಗುತ್ತದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಎಂಡಿಎ ಯೋಜನೆಯಡಿ ಸುಮಾರು 11.8 ಕೋಟಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಡಿಬಿಟಿ ಮೂಲಕ ಆರ್ಥಿಕ ನೆರವು ನೀಡಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಟ್ವೀಟ್ ಮಾಡಿದ್ದಾರೆ. ಇದಕ್ಕಾಗಿ ಇನ್ನೂ 1200 ಕೋಟಿ ರೂಪಾಯಿಗಳನ್ನು ನಿಧಿಯಲ್ಲಿ ನೀಡಲಾಗುವುದು ಎಂದವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ : ಶಿವನ ಸನ್ನಿಧಿಯಲ್ಲಿ ಜನಸಾಗರ ವೈಭವ..!
ದೇವಲಾಪುರ ಬಸವ ಉದ್ಯಾನದಲ್ಲಿ ಬ್ರಹತ್ ಈಶ್ವರನ ಮೂತಿ೯ ವೀಕ್ಷಿಸಿದ ಭಕ್ತರು

ವರದಿ : ಗುಲಾಬಚಂದ ಜಾಧವಆಲಮಟ್ಟಿ : ಹಿಂದು ಸಂಪ್ರದಾಯದ ಅತ್ಯಂತ ಪವಿತ್ರ ಹಬ್ಬ ಮಹಾ ಶಿವರಾತ್ರಿ…

ವಾರಾಂತ್ಯ ಕಪ್ಯೂ೯ಗೆ ಉತ್ತಮ ಸ್ಪಂದನೆ : ನಿಡಗುಂದಿ ಸ್ತಬ್ಧ- ಆಲಮಟ್ಟಿ ಗಾಡ್೯ನಗಳು ಬೀಕೋ

ನಿಡಗುಂದಿ : ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಪ್ರಮುಖ ರಸ್ತೆಗಳೆಲ್ಲ ಭಾಗಶಃ ಖಾಲಿಖಾಲಿ. ಅಂಗಡಿ,ಮುಂಗಟ್ಟುಗಳೆಲ್ಲ ಬಾಗಿಲು ತೆರೆಯದ…

ನರೇಗಲ್ಲ್ : ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆಗೆ ಒತ್ತಾಯ

ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆಗೆ ಒತ್ತಾಯ ನರೇಗಲ್: ಪಟ್ಟಣದ 7ನೇ ವಾರ್ಡ್ನ ದ್ಯಾಂಪುರ ಸಮೀಪ ನಿರ್ಮಿಸಲಾಗಿರುವ ಆಶ್ರಯ ನಿವೇಶನಗಳನ್ನು ಈ ಹಿಂದೆ ಆಯ್ಕೆ ಮಾಡಲಾದ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ದಲಿತ ಸಂಘರ್ಷ ಸಮಿತಿ ಉಪತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಸಾರಿಗೆ ನೌಕರರ ಗೊಂದಲಕ್ಕೆ ತೆರೆ ಎಳೆದ ಸಚಿವ ಸವದಿ

ಸಾರಿಗೆ ಇಲಾಖೆ ನೌಕರರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ. ಕೆಲವು ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಎನ್ನುವ ವದಂತಿ ಹಬ್ಬಿದೆ. ಅಂತಹ ಯಾವುದೇ ಪ್ರಸ್ತಾಪ ಇಲ್ಲ.