ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ ಸಂಘಟನೆ ವತಿಯಿಂದ ಬಡವರಿಗೆ ಆಹಾರದ ಕಿಟ್ ವಿತರಿಸಲಾಯಿತು.
ಕರವೇ ಯುವ ಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ, ಕೋವಿಡ್ ಎರಡಲೇ ಅಲೆ ಜನಸಾಮಾನ್ಯರನ್ನು ಬೆಂಬಿಡದೇ ಕಾಡುತ್ತಿದೆ. ಇದರಿಂದ ಬಡ ಹಾಗೂ ಮದ್ಯಮ ವರ್ಗದ ಜನರು ಬದುಕುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬಡವರ ನೆರವಿಗೆ ಧಾವಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಸರ್ಕಾರ ಬಡವರಿಗಾಗಿ ವಿಶೇಷ ಕಿಟ್ ವಿತರಣೆಗೆ ಮುಂದಾಗಬೇಕಿದೆ. ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ನೊಂದವರ ಧ್ವನಿಯಾಗಿ ನಿಲ್ಲುವ ಮೂಲಕ ಆತ್ಮಸ್ಥೆöÊರ್ಯ ತುಂಬುವ ಕಾರ್ಯವಾಗಬೇಕಿದೆ ಎಂದರು.
ಗ್ರಾಪA ಸದಸ್ಯ ರಾಜಕುಮಾರ ಚೋಪಡೆ ಮಾತನಾಡಿ, ಕೋವಿಡ್ ಹೊಡೆದೂಡಿಸಲು, ಸಮುದಾಯ ಸನ್ನದ್ದರಾಗಬೇಕು. ಗ್ರಾಮೀಣ ಭಾಗದ ಜನರು ಹೆಚ್ಚಿನ ಜಾಗೃತಿ ವಹಿಸುವುದು ಅಗತ್ಯವಾಗಿದ್ದು, ಆರೋಗ್ಯದ ಹಿತ ದೃಷ್ಟಿಯಿಂದ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ ಎಂದರು.
ಆರ್.ಕೆ ಬಾಗವಾನ, ಮೌನೇಶ ಭೋಸಲೆ, ಮಲ್ಲಿಕಾರ್ಜುನ ಗಾರಗಿ, ಆಯ್.ಎಚ್ ಬಾಗವಾನ, ಕಟ್ಟೆಪ್ಪ ಮಾದರ, ಸದಾಶಿವನಗೌಡ ಪಾಟೀಲ, ಶೇಖರಪ್ಪ ಯಗರಿ, ಕಳಕಪ್ಪ ಮೇಟಿ, ಕಳಕಪ್ಪ ಭೋಸಲೆ, ಗವಿಯಪ್ಪ ಗಾರಗಿ, ಶಿವಾಜಿ ಹೊರಪೇಟಿ ಇದ್ದರು.

Leave a Reply

Your email address will not be published. Required fields are marked *

You May Also Like

ಕೋರೊನಾ ಸೋಂಕು ನಿಯಂತ್ರಣ, ಚಿಕಿತ್ಸೆ, ಲಸಿಕಾಕರಣ ಸಭೆಯಲ್ಲಿ ಹೆಳಿದ್ದೆನು?

ಗದಗ: ಸರ್ಕಾರ ತಿಳಿಸಿದ ಆಧ್ಯತಾ ಗುಂಪುಗಳ ಅರ್ಹ ಫಲಾನುಭವಿಗಳಿಗೆ ಆದ್ಯತೆಯನುಸಾರ ಮೊದಲು ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು. ಅವರು ಜಿಲ್ಲಾಡಳಿತ ಭವನದ ಜಿ.ಪಂ ವಿಡಿಯೋ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗಳೊಂದಿಗೆ ಶುಕ್ರವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ವಿವಿಧ ಸ್ಥಳಗಳ ಪರಿಶೀಲನೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇಂದು ಭೇಟಿ ನೀಡಿ ಗದಗ ನಗರದಲ್ಲಿ ವಲಸೆ ಕಾರ್ಮಿಕರಿಗೆ ಒದಗಿಸಲಾದ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಮಹಾಂತೇಶ ಜೀವಣ್ಣವರ ಹೇಳಿಕೆ ಪ್ರಜಾಪ್ರಭುತ್ವ ಬಲಗೊಳಿಸಲು ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕು

ಪ್ರಜಾ ಪ್ರಭುತ್ವವನ್ನು ಬಲ ಪಡಿಸಲು ಯುವ ಸಮೂಹ ಕಡ್ಡಾಯವಾಗಿ ಚುನಾವಣಾ ಪ್ರಕ್ರೀಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಜಾಪ್ರಭುತ್ವದ ಗೌರವ ಹೆಚ್ಚಿಸಬೇಕು ಎಂದು ಪ್ರಾಧ್ಯಾಪಕ ಮಹಾಂತೇಶ ಜೀವಣ್ಣವರ ಹೇಳಿದರು.

ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಆಕ್ರೋಶ: ಸರ್ಕಾರದ ಕೆಟ್ಟ ಧೋರಣೆ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲದು

ಸರ್ಕಾರದ ಕೆಟ್ಟ ಧೋರಣೆಗಳು ಎಲ್ಲಿಯವರೆಗೆ ನಡೆಯುತ್ತವೇಯೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವದಿಲ್ಲ ನಮ್ಮ ಕಾರ್ಮಿಕ ವರ್ಗದವರು ಅನುಭವಿಸುವ ನೋವು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಸರ್ಕಾರದ ವಿರುದ್ಧ ಕಿಡಿಕಾರಿದರು.