ಗೋಗೇರಿಯಲ್ಲಿ ಕರವೇ ಯುವಸೈನ್ಯ ದಿಂದ ಆಹಾರದ ಕಿಟ್ ವಿತರಣೆ

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ ಸಂಘಟನೆ ವತಿಯಿಂದ ಬಡವರಿಗೆ ಆಹಾರದ ಕಿಟ್ ವಿತರಿಸಲಾಯಿತು.
ಕರವೇ ಯುವ ಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ, ಕೋವಿಡ್ ಎರಡಲೇ ಅಲೆ ಜನಸಾಮಾನ್ಯರನ್ನು ಬೆಂಬಿಡದೇ ಕಾಡುತ್ತಿದೆ. ಇದರಿಂದ ಬಡ ಹಾಗೂ ಮದ್ಯಮ ವರ್ಗದ ಜನರು ಬದುಕುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬಡವರ ನೆರವಿಗೆ ಧಾವಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಸರ್ಕಾರ ಬಡವರಿಗಾಗಿ ವಿಶೇಷ ಕಿಟ್ ವಿತರಣೆಗೆ ಮುಂದಾಗಬೇಕಿದೆ. ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ನೊಂದವರ ಧ್ವನಿಯಾಗಿ ನಿಲ್ಲುವ ಮೂಲಕ ಆತ್ಮಸ್ಥೆöÊರ್ಯ ತುಂಬುವ ಕಾರ್ಯವಾಗಬೇಕಿದೆ ಎಂದರು.
ಗ್ರಾಪA ಸದಸ್ಯ ರಾಜಕುಮಾರ ಚೋಪಡೆ ಮಾತನಾಡಿ, ಕೋವಿಡ್ ಹೊಡೆದೂಡಿಸಲು, ಸಮುದಾಯ ಸನ್ನದ್ದರಾಗಬೇಕು. ಗ್ರಾಮೀಣ ಭಾಗದ ಜನರು ಹೆಚ್ಚಿನ ಜಾಗೃತಿ ವಹಿಸುವುದು ಅಗತ್ಯವಾಗಿದ್ದು, ಆರೋಗ್ಯದ ಹಿತ ದೃಷ್ಟಿಯಿಂದ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ ಎಂದರು.
ಆರ್.ಕೆ ಬಾಗವಾನ, ಮೌನೇಶ ಭೋಸಲೆ, ಮಲ್ಲಿಕಾರ್ಜುನ ಗಾರಗಿ, ಆಯ್.ಎಚ್ ಬಾಗವಾನ, ಕಟ್ಟೆಪ್ಪ ಮಾದರ, ಸದಾಶಿವನಗೌಡ ಪಾಟೀಲ, ಶೇಖರಪ್ಪ ಯಗರಿ, ಕಳಕಪ್ಪ ಮೇಟಿ, ಕಳಕಪ್ಪ ಭೋಸಲೆ, ಗವಿಯಪ್ಪ ಗಾರಗಿ, ಶಿವಾಜಿ ಹೊರಪೇಟಿ ಇದ್ದರು.

Exit mobile version