ಬೆಂಗಳೂರು: ಕೊರೊನಾ ವೈರಸ್ ಎರಡನೇ ಅಲೆಗೆ ಸ್ಯಾಂಡಲ್ವುಡ್ನ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಸ್ಯಾಂಡಲ್ವುಡ್ ಯುವ ನಟ ಹಾಗೂ ನಿರ್ಮಾಪಕ ಡಾ. ಡಿ.ಎಸ್.ಮಂಜುನಾಥ್ ಏಪ್ರಿಲ್ ತಿಂಗಳಲ್ಲಿ ಮೃತಪಟ್ಟಿದ್ದರು. ಈಗ ಇವರು ನಿರ್ಮಾಣ ಮಾಡಿದ ಎರಡು ಚಿತ್ರಗಳ ನಿರ್ದೇಶಕ ಅಭಿರಾಮ್ ಕೊವಿಡ್ನಿಂದ ಮೃತಪಟ್ಟಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು.
ಡಿ.ಎಸ್.‌ಮಂಜುನಾಥ್.‌ ’ಸಂಯುಕ್ತ-2’ ಸಿನಿಮಾದ ಮೂಲಕ ನಿರ್ಮಾಪಕರಾಗಿ ಮತ್ತು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾವನ್ನು ನಿರ್ಮಿಸಿ ಹೆಸರು ಮಾಡಿದರು. ಸದ್ಯ ‘೦% ಲವ್‌’ ಚಿತ್ರದಲ್ಲಿ ಹೀರೋ ಆಗಿ ಕೂಡ ನಟಿಸುತ್ತಿದ್ದರು. ‘ಸಂಯುಕ್ತ 2’ ಮತ್ತು ‘೦% ಲವ್‌’ ಎರಡೂ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಅಭಿರಾಮ್.‌ ಈಗ ಅಭಿರಾಮ್‌ ಕೂಡಾ ಮಂಜುನಾಥ್‌ ಅವರನ್ನು ಹಿಂಬಾಲಿಸಿದ್ದಾರೆ.

ಅಭಿರಾಮ್ ಕಳೆದೊಂದು ವಾರದಿಂದ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ಆದರೆ, ಅವರು ಪರೀಕ್ಷೆ ಮಾಡಿಸಿಕೊಳ್ಳದೆ ಮನೆಯಲ್ಲೇ ಇದ್ದರು. ಆದರೆ, ಇತ್ತೀಚೆಗೆ ಉಸಿರಾಟದ ತೊಂದರೆ ಅವರಲ್ಲಿ ಹೆಚ್ಚಾಗಿತ್ತು. ಈಗ ಅವರು ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಕೊವಿಡ್ ಇದ್ದಿದ್ದರಿಂದಲೇ ಉಸಿರಾಟದ ತೊಂದರೆ ಉಂಟಾಗಿ ಹೃದಯಾಘಾತವಾಗಿದೆ ಎನ್ನಲಾಗಿದೆ. ಸಿದ್ಧಪಡಿಸಿದ ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಹೀರೋ ಮತ್ತು ಡೈರೆಕ್ಟರ್‌ ಮೃತಪಟ್ಟಿದ್ದಾರೆ ಅನ್ನೋದು ಬೇಸರದ ಸಂಗತಿ.

Leave a Reply

Your email address will not be published. Required fields are marked *

You May Also Like

ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿತರ ವಿಶೇಷ ಚಿಕಿತ್ಸೆಗಾಗಿ ಐಸಿಯು ವಾರ್ಡನಲ್ಲಿ…

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ

ಲಕ್ಷ್ಮೇಶ್ವರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ…

ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಶಾಸಕ ಎಚ್ಕೆ ಪಾಟೀಲ್ ಪತ್ರ

ವೈದ್ಯಕೀಯ ಉಪಕರಣಗಳ ಖರೀದಿ ಸಮಯದಲ್ಲಿ ನಡೆದಿರಬಹುದಾದಂತಹ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಶಾಸಕ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ಮುಳಗುಂದ : ಮರುಜೀವ ಪಡೆದ ಪಟ್ಟಣಶೆಟ್ಟಿ ಕೆರೆ

ಪಟ್ಟಣದ ಕಲ್ಲೂರ ರಸ್ತೆಗೆ ಹೊಂದಿಕೊಂಡ ಪಟ್ಟಣಶೆಟ್ಟಿ ಕೆರೆ ಈಗ ಅಭಿವೃದ್ದಿಗೊಂಡಿದ್ದು ಕಡಿಮೆ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ ಧರ್ಮಸ್ಥಳ ಅಭಿವೃದ್ದಿ ಸಮಿತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.