ನವದೆಹಲಿ: ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ಇಂದು ನಿಧನ ಹೊಂದಿದರು.

ಅಹ್ಮದ್ ಪಟೇಲ್ ಅವರಿಗೆ ಕೊರೋನಾ ದೃಢಪಟ್ಟಿದ್ದು, ಗುರುಗ್ರಾಮದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

3 ಬಾರಿ ಲೋಕಸಭೆಗೆ, 5 ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಜೊತೆಗೆ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಕೂಡ ಆಗಿದ್ದರು.

71 ವರ್ಷದ ಅಹ್ಮದ್ ಪಟೇಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದ ಅಹ್ಮದ್ ಪಟೇಲ್ ಅವರು, ಸೋನಿಯಾ ಗಾಂಧಿ ಕುಟುಂಬದ ಆಪ್ತರಾಗಿದ್ದರು.

Leave a Reply

Your email address will not be published. Required fields are marked *

You May Also Like

ನಾಳೆಯಿಂದ ರೈಲು ಸಂಚಾರ ಆರಂಭ

ಲಾಕ್ ಡೌನ್ ಹಿನ್ನೆಲೆ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಇದೀಗ ನಾಳೆಯಿಂದ ರೈಲು ಸಂಚಾರ ಆರಂಭವಾಗಲಿದ್ದು, ರೈಲು ಸಂಚಾರಕ್ಕೆ ರೈಲ್ವೇ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿde.

ಸತ್ತಲ್ಲಿ 20 ಜನರಿರಬೇಕು…ಮದ್ಯಕ್ಕೆ ಮಾತ್ರ ಸಾವಿರ ಜನರಿದ್ದರೂ ಸೈ!!

ಅಂತ್ಯ ಸಂಸ್ಕಾರಕ್ಕೆ 20 ಜನರ ಸೇರುವಂತಿಲ್ಲ. ಆದರೆ, ಮದ್ಯದಂಗಡಿಯ ಮುಂದೆ 1 ಸಾವಿರ ಜನರು ನಿಲ್ಲಬಹುದೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಟೀಕೆ ಮಾಡಿದೆ.

ಮೊಬೈಲ್ ಗಾಗಿ ಅಜ್ಜಿಯ ತಲೆಯನ್ನೇ ಕತ್ತರಿಸಿದ ಮೊಮ್ಮಗ!

ಮುಂಬಯಿ : ಮೊಬೈಲ್ ಗಿಫ್ಟ್ ಕೊಡಲು ನಿರಾಕರಿಸಿದ ಅಜ್ಜಿಯ ತಲೆಯನ್ನೇ ಕತ್ತರಿಸಿ ಟೇಬಲ್ ಮೇಲಿಟ್ಟು ಮೊಮ್ಮಗ ವಿಕೃತಿ ಮೆರೆದಿರುವ ಘಟನೆ ನಡೆದಿದೆ.