ಗದಗ: ನಗರದ ಡಿ.ಸಿ.ಮಿಲ್ ತಳಗೇರಿ ಓಣಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ ಆಯೋಜಿಸಲಾಯಿತು.

ಸಭೆಯಲ್ಲಿ ಶಹರ ಪೊಲೀಸ್ ಠಾಣೆ ಸಿಪಿಐ ಸಾಲಿಮಠ ಮಾತನಾಡಿ, ಪೋಲಿಸ್ ಅಂದರೆ ಭಯ ಅಲ್ಲ, ಭರವಸೆ ಎಂದು ಹೇಳಿದರು ಹಾಗೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.

ಪಿಎಸ್‌ಐ ಪ್ರಕಾಶ ಡಿ ಮಾತನಾಡಿ, ಶಿಕ್ಷಣದ ಅರಿವು ಮಕ್ಕಳಲ್ಲಿ ಮನೆ ಮಾಡಬೇಕು ಅದು ಅವರ ಪ್ರಗತಿಗೆ ಹಾಗೂ ಸಮಾಜಕ್ಕೆ ಹಿರಿಮೆ ತರುತ್ತದೆ ಎಂದು ಮಕ್ಕಳ ಮನವೊಲಿಸಿದರು.

ಓಣಿಯ ಹಿರಿಯರಾದ ಶಿಕ್ಷಕ ಪಿ.ಎಚ್.ತಳಗೇರಿ ಮಾತನಾಡಿ, ಯುವಕರು ಮಧ್ಯಪಾನ ದಾಸರಾಗಿದ್ದಾರೆ. ಅಂತಹ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು.

 ಬಾಮ್ಸೇಫ್ ಅಂಗ ಸಂಘಟನೆಯಾದ ಭಾರತೀಯ ಯುವ ಮೋರ್ಚಾ ಜಿಲ್ಲಾ ಸಂಯೋಜಕ ವಿಶಾಲ ಗೋಶಾಲ್ಯನ್ನವರ್ ಮಾತನಾಡಿ, ಪ್ರೆವೆಟ್ ಡಿಫೆನ್ಸ ಆ್ಯಕ್ಟ್ ಹಾಗೂ ಅನುಚ್ಛೇದ 17 ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಕಾನೂನು ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಪೊಲೀಸ್ ಇಲಾಖೆಯವರಿಗೆ ಮನವಿ ಮಾಡಿಕೊಂಡರು.

 ಈ ಸಂದರ್ಭದಲ್ಲಿ ವಿಜಯ ಕಲ್ಮನಿ, ವೀಣಾ ಕಡಬಿನ, ಮಂಜುಳಾ ಅಗಸಿನಕೊಪ್ಪ, ಯಮನವ್ವ ಕಲ್ಮನಿ, ಪೋಲಿಸರೊಂದಿಗೆ ಎಸ್.ಸಿ./ಎಸ್.ಟಿ. ಜನರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿದರು. ರಾಘವೇಂದ್ರ ನಾಗನಾಥನಹಳ್ಳಿಯವರು ದಲಿತ ಎಂಬ ಪದ ಬಳಸುವುದು ಸೂಕ್ತವಲ್ಲ ಇದು ಅಸಂವಿಧಾನಿಕ ಪದ ಎಂದು ಪೋಲಿಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಟ್ಟರು.

 ಈ ಸಂದರ್ಭದಲ್ಲಿ ವಿಶಾಲ ಹಾದಿಮನಿ, ಸಂತೋಷ ಅಕ್ಕಿ, ರಾಘು ದೊಡ್ಡಮನಿ, ಶಿವಾನಂದ ಸಕ್ರಿ, ಬಸವರಾಜ ಕಟ್ಟಿಮನಿ, ವಿನಾಯಕ ಕಟ್ಟಿಮನಿ, ವಿನಾಯಕ ಕಲ್ಮನಿ, ವಿನಾಯಕ ಸಂಗಾಪೂರ, ಸಂಜಯ ಪರಾಪೂರ, ಅಭಿಷೇಕ ಸಂಗಾಪೂರ, ಗಣೇಶ ಅಕ್ಕಿ, ಸುರೇಶ ಸಂಗಾಪೂರ, ಪ್ರಮೋದ ಸಕ್ರಿ, ಮೋಹನ ಅಗಸಿನಕೊಪ್ಪ, ರಾಹುಲ ಜಂಬಲದಿನ್ನಿ, ಮಂಜುನಾಥ ಕಲ್ಲೂರ, ಸಾಗರ ಕಟ್ಟಿಮನಿ, ಅಭಿ ಬಳ್ಳಾರಿ, ಶ್ರೀಶೈಲ ಪರಾಪೂರ, ಯಮನೇಶ ಬೇವಿನಕಟ್ಟಿ, ಹಾಗೂ ಭಾರತೀಯ ಯುವ ಮೋರ್ಚಾ ಕಾರ್ಯಕರ್ತರು, ತಳಗೇರಿ ಓಣಿಯ ಹಿರಿಯರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

You May Also Like

ಗದಗ, ರೋಣ, ಮುಂಡರಗಿ, ತಾಲೂಕಿನ ಕೆಲವು ಕಡೆ ಕಂಟೇನ್ಮೆಂಟ್ ಘೋಷಣೆ

ಗದಗ: ಜಿಲ್ಲೆಯ ಕೆಲವು ತಾಲೂಕಿನ ಪ್ರದೇಶಗಳನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಅದರ ವಿವರ ಈ…

ರೋಗಿಗಳಿಗೆ ಹಣ್ಣು ಹಾಲು ಬಿಸ್ಕಿಟ ವಿತರಣೆ

ಲಕ್ಷ್ಮೇಶ್ವರ : ತಾಲೂಕಿನ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಇವರ ವತಿಯಿಂದ ನಗರದ…

ನೂರಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಉತ್ತರಪ್ರಭ ಸುದ್ದಿಕೋಲಾರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಇಂದು ಜೆಡಿಎಸ್ ಹಾಗೂ…

ಗದಗ ಜಿಲ್ಲೆಯಲ್ಲಿಂದು 19 ಕೊರೊನಾ ಪಾಸಿಟಿವ್!

ಗದಗ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಈ ಮೂಲಕ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.